ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ ಜಿಲ್ಲಾ ಓಡಾಟ ನಿರ್ಬಂಧ; ರಾಜ್ಯ ಸಿಎಂ ಸಚಿವಾಲಯದ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜು. 04: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಇಡೀ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗುತ್ತದೆ ಎಂಬ ಸುದ್ದಿ ಜನರನ್ನು ಕಂಗಾಲು ಮಾಡಿದೆ. ನಾಳೆ ಭಾನುವಾರದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜನರು ಮತ್ತೆ ತಮ್ಮೂರಿನತ್ತ ಗುಳೆ ಹೋಗುತ್ತಿದ್ದಾರೆ. ಜೊತೆಗೆ ಅಂತರ್ ಜಿಲ್ಲಾ ಓಡಾಟ ನಿರ್ಬಂಧ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು ತೊರೆದು ತಮ್ಮ ತಮ್ಮ ಊರಿನ ಕಡೆಗೆ ಹೋಗುತ್ತಿದ್ದಾರೆ.

Recommended Video

Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

ಭಾನುವಾರ ಲಾಕ್‌ಡೌನ್‌: ಬೆಂಗಳೂರಿನಲ್ಲಿ ಏನಿರುತ್ತೆ, ಏನಿರಲ್ಲ?ಭಾನುವಾರ ಲಾಕ್‌ಡೌನ್‌: ಬೆಂಗಳೂರಿನಲ್ಲಿ ಏನಿರುತ್ತೆ, ಏನಿರಲ್ಲ?

ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಅಥವಾ ಅಂತರ್ ಜಿಲ್ಲಾ ಓಡಾಟದ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳ ಸಚಿವಾಲಯ ಸ್ಪಷ್ಟನೆ ಕೊಟ್ಟಿದೆ. ಅಂತರ್ ಜಿಲ್ಲಾ ಓಡಾಟ ನಿರ್ಬಂಧವಾಗಲಿ ಲಾಕ್‌ಡೌನ್ ಬಗ್ಗೆಯಾಗಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರ ಬಳಿಯೂ ಚರ್ಚೆ ನಡೆಸಿಲ್ಲ.

Chief Ministers office clarify on statewide lockdown enforcement or inter-district movement

ನಾಳೆಯೂ ಈ ಬಗ್ಗೆ ಸಭೆಗಳು ನಿಗದಿಯಾಗಿಲ್ಲ ಎಂದು ಸಿಎಂ ಮಾಧ್ಯಮ ವಿಭಾಗದ ಸಂಚಾಲಕರು ಮಾಹಿತಿ ಕೊಟ್ಟಿದ್ದಾರೆ. ನಿನ್ನೆಯೂ ಸಿಎಂ ಸಚಿವಾಲಯ ಇದೇ ರೀತಿಯ ಸ್ಪಷ್ಟನೆಯನ್ನು ಕೊಟ್ಟಿತ್ತು.

English summary
Chief Ministers office clarify on statewide lockdown enforcement or inter-district movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X