ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕ ದಿನಾಚರಣೆಯಂದು ಯಡಿಯೂರಪ್ಪ ಟ್ವೀಟ್: ನೆಟ್ಟಿಗರಿಂದ ವಿರೋಧ!

|
Google Oneindia Kannada News

ಬೆಂಗಳೂರು, ಮೇ 01: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಕಳೆದ 38 ದಿನಗಳಿಂದ ಇಡೀ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ಲಾಕ್‌ಡೌನ್‌ ಜಾರಿ ಆದಾಗಿನಿಂದ ಬೀದಿಗೆ ಬಿದ್ದವರು ದೇಶದ ಶ್ರಮಿಕರು ಹಾಗೂ ಕಾರ್ಮಿಕರು. ಹಳ್ಳಿಗಳಿಂದ ನಗರಗಳಿಗೆ ಬಂದಿದ್ದ ಕೋಟ್ಯಂತರ ಕಾರ್ಮಿಕರು ಆ ಕಡೆ ಕೆಲಸವೂ ಇಲ್ಲದೆ, ಈ ಕಡೆ ತಮ್ಮ ಮನೆಗೂ ಹೋಗಲಾಗದೇ ಬೀದಿಯಲ್ಲಿ ಜೀವನ ಕಳೆಯುವಂತಾಗಿದೆ. ಈ ಮಧ್ಯೆ ಕಾರ್ಮಿಕ ದಿನಾಚರಣೆಯು ಮುಗಿದಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿರುವ ಟ್ವೀಟ್‌ಗೆ ಭಾರಿ ಟೀಕೆ, ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆದಿದೆ.

ಲಾಕ್‌ಡೌನ್‌ನಿಂದ ದುಡಿದು ತಿನ್ನುವ ಕಾರ್ಮಿಕ ಬಂಧುಗಳು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಜೊತೆಗೆ ದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ ಶೀಘ್ರವೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಾಣಿಜ್ಯೋದ್ಯಮಿಗಳೊಂದಿಗೆ ಸಭೆ ನಡೆಸಿದ್ದು, ಕಾರ್ಮಿಕರ ಹಿತ ಕಾಯುವ ಹಾಗೂ ವೇತನ ಪಾವತಿ ಮಾಡುವಂತೆ ಮನವಿ ಮಾಡಿದೆ. ಹೀಗಾಗಿ ವಲಸೆ ಕಾರ್ಮಿಕರು ಆತಂಕಕ್ಕೆ ಒಳಗಾಗದೆ ಕೇಂದ್ರ ಸರ್ಕಾರದ ಸೂಚನೆ ಬಂದೊಡನೆ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆ ಪುನರಾರಂಭ ಮಾಡಲು ಸಹಕರಿಸುವಂತೆ ಮನವಿ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕಾರ್ಮಿಕರ ಬೆನ್ನಿಗೆ ನಿಂತ ಸರ್ಕಾರ: ವೇತನ ಪಾವತಿ ಮಾಡುವಂತೆ ಮನವಿಕಾರ್ಮಿಕರ ಬೆನ್ನಿಗೆ ನಿಂತ ಸರ್ಕಾರ: ವೇತನ ಪಾವತಿ ಮಾಡುವಂತೆ ಮನವಿ

ಹಿಂದಿ ಭಾಷೆಯಲ್ಲಿ ಸಿಎಂ ಟ್ವೀಟ್, ನೆಟ್ಟಿಗರಿಂದ ವಿರೋಧ: ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಶ್ರಮಿಕರಲ್ಲಿ ಭರವಸೆ ತುಂಬಲು ಮುಖ್ಯಮಂತ್ರಿ ಮುಖ್ಯಮಂತ್ರಿ ಯಡಿಯೂಪ್ಪ ಟ್ವೀಟ್ ಮಾಡಿದ್ದಾರೆ. ಆದರೆ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದನ್ನು ಹಲವು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲಾಗಿದೆ ಎಂದು ಟ್ವಿಟ್ಟಿಗರು ಪರ-ವಿರೋಧದ ಚರ್ಚೆ ನಡೆಸಿದ್ದಾರೆ. ನೆಟ್ಟಿಗರು ಮಾಡಿರುವ ಟ್ವೀಟ್‌ಗಳು ಹೀಗಿವೆ:

Chief Minister Yediyurappas tweet in Hindi on Labour Day was opposed

ಯಡಿಯೂರಪ್ಪನವರೇ, ನಿಮ್ಮ ಈ ಮಾಹಿತಿ ಹಿಂದಿಯಲ್ಲಿ ಏಕಿದೆ?

ಮೊದಲು ತುಳು, ಕೊಂಕಣಿ, ಕೊಡವ ಟಕ್ ಬಾಶೆ ಬಳಸಿ.

ನಂತರ ತೆಲುಗು, ತಮಿಳು, ಮಲಯಾಳಂ, ಹಿಂದಿ ಬಳಸಿ.

ಈ ಹಿಂದಿ ಒಂದೇ ರೀತಿ ಯಾರನ್ನ ಮೆಚ್ಚಿಸೋಕೆ?

ವಲಸಿಗರನ್ನು ಕರೆ ತರಲು ಮೊದಲ ಹೆಜ್ಜೆ ಇಟ್ಟ ಕರ್ನಾಟಕವಲಸಿಗರನ್ನು ಕರೆ ತರಲು ಮೊದಲ ಹೆಜ್ಜೆ ಇಟ್ಟ ಕರ್ನಾಟಕ

ಹಿಂದಿ ಬೆಲ್ಟ್ ರಾಜ್ಯಗಳಾದ MP,UP,Bihar ಇತ್ಯಾದಿ ಜಾಗದಲ್ಲಿ ಕನ್ನಡದಲ್ಲಿ ಮಾಹಿತಿ ಕೊಡ್ತಾರ?

3 language policy is our own grave that v have digged @nimmasuresh

ಮೊದಲು ಪೋಸ್ಟ್ ಆಫೀಸು ಇತ್ಯಾದಿಯಲ್ಲಿ ಹೀಗೆ ನುಗ್ಗಿದ ಹಿಂದಿ, ಇಂದು ಕನ್ನಡವನ್ ಹೊರ ದಬ್ಬಿದೆ.

ನಮಗೆ ಗುಲಾಮಗಿರಿ ಬೇಕಿಲ್ಲ, ಪರಿಸ್ಥಿತಿ ನೋಡಿ ಹಿಂದಿ ತೂರಬೇಡಿ

Chief Minister Yediyurappas tweet in Hindi on Labour Day was opposed

ಉತ್ತರಪ್ರದೇಶ ಮುಖ್ಯಮಂತ್ರಿಗಳ ಟ್ವಿಟ್ ನೀವು ಮಾಡಿದ ಹಾಗಿದೆ ಯಡಿಯೂರಪ್ಪನವರೇ

ಕರ್ನಾಟಕದಲ್ಲಿ ಕನ್ನಡ ಹಾಗೂ ಕರ್ನಾಟಕದ ನುಡಿಗಳು ಮಾತ್ರ ಬೇಕಾದ್ರೆ ಅಗತ್ಯವಿದ್ದಲ್ಲಿ ಇಂಗ್ಲಿಷ್.

@Karnataka_DIPR @Karmika_Sahaya @mani1972ias ಮುಖ್ಯಮಂತ್ರಿಗಳ ಟ್ವಿಟ್ ಸರಿ ಮಾಡಿಸಿ ಸ್ವಾಮಿ

ಹಿಂದಿ ಗುಲಾಮಗಿರಿ ಕನ್ನಡಿಗರಿಗೆ ಒಗ್ಗಲ್ಲ!

English summary
Chief Minister Yeddyurappa's tweet in Hindi on Labor Day was opposed. Twitters has been debating whether Hindi is being imposed on Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X