ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದ ಮಧ್ಯೆಯೂ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಮಖ್ಯಮಂತ್ರಿ ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ಜು. 22: ಒಂದೆಡೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ನಿರ್ಣಾಯಕ ಹಂತ ತಲುಪುತ್ತಿದೆ ಎಂಬಂತೆ ಬೆಳವಣಿಗಳು ಆಗುತ್ತಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದರಮೇಲೊಂದರಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಒಂದೊಂದೆ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಕೊರೊನಾ ವೈರಸ್ ಸೃಷ್ಟಿಸಿರುವ ಆರ್ಥಿಕ ಸಂಸಷ್ಟದ ಮಧ್ಯೆಯೂ ಯಡಿಯೂರಪ್ಪ ಅವರು ಮಾಡಿರುವ ಈ ಆದೇಶ ರಾಜ್ಯ ಸರ್ಕಾರಿ ನೌಕರರಿಗೆ ಸಂತಸ ತಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೊ? ಇಲ್ಲವೊ ಗೊತ್ತಿಲ್ಲ. ಆದರೆ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಮಾತ್ರ ಖಚಿತವಾಗಿವೆ. ಈ ಹಿಂದೆ ಮಾತು ಕೊಟ್ಟಂತೆ ಮೊನ್ನೆಯಷ್ಟೇ ಒಕ್ಕಲಿಗ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಅದಕ್ಕೆ ನೇಮಕಾತಿಯನ್ನೂ ಮಾಡಿ ಆದೇಶ ಮಾಡಿದ್ದರು. ಒಕ್ಕಲಿಗ ಸಮುದಾಯದ ಅಭಿವೃದ್ಧಿ ಮಾಡಲು ಹಾಗೂ ಮಂಡಳಿ ರಚನೆಗೆ ಮಾಡಲು 5 ನೂರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದರು. ಇದೀಗ ರಾಜ್ಯ ಸರ್ಕಾರ ನೌಕರರಿಗೂ ಅಂತಹುದೆ ಸಿಹಿ ಸುದ್ದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿದ್ದಾರೆ.

ಸರ್ಕಾರಿ ನೌಕರರಿಗೆ ಉಡುಗೊರೆಯಿತ್ತ ಯಡಿಯೂರಪ್ಪ, ತುಟ್ಟಿಭತ್ಯೆ ಹೆಚ್ಚಳ ಸರ್ಕಾರಿ ನೌಕರರಿಗೆ ಉಡುಗೊರೆಯಿತ್ತ ಯಡಿಯೂರಪ್ಪ, ತುಟ್ಟಿಭತ್ಯೆ ಹೆಚ್ಚಳ

ತುಟ್ಟಿ ಭತ್ಯೆ ಹೆಚ್ಚಿಸಿದ್ದ ಯಡಿಯೂರಪ್ಪ

ತುಟ್ಟಿ ಭತ್ಯೆ ಹೆಚ್ಚಿಸಿದ್ದ ಯಡಿಯೂರಪ್ಪ

ಇತ್ತೀಚಿಗಷ್ಟೇ ತುಟ್ಟಿ ಭತ್ಯೆ ಹೆಚ್ಚ್ಳ ಮಾಡಿ ಮಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದರು. ಕೇಂದ್ರ ಸರ್ಕಾರದ ಮಾದರಿಯಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿ ಆದೇಶ ಮಾಡಿದ್ದರು. ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 11ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿತ್ತು. ಯಡಿಯೂರಪ್ಪ ಅವರ ಈ ಆದೇಶದಿಂದ ಸುಮಾರು 13 ಲಕ್ಷಕ್ಕೂ ಅಧಿಕ ಸರ್ಕಾರ ನೌಕರರು, ನಿವೃತ್ತರಿಗೆ ಅನುಕೂಲವಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಸಿಎಂ ಯಡಿಯೂರಪ್ಪ ಅವರು ಹಣಕಾಸು ಇಲಾಖೆಗೆ ಮತ್ತೊಂದು ಆದೇಶ ಮಾಡಿದ್ದಾರೆ. ಆ ಆದೇಶ ಸರ್ಕಾರಿ ನೌಕರರಿಗೆ ಸಂತಸ ತಂದಿದೆ.

ಬಾಕಿ ಬಿಡುಗಡೆ ಮಾಡಲು ಸಿಎಂ ಆದೇಶ

ಬಾಕಿ ಬಿಡುಗಡೆ ಮಾಡಲು ಸಿಎಂ ಆದೇಶ

ಕೇಂದ್ರ ಸರ್ಕಾರದಂತೆ ತುಟ್ಟಿ ಭತ್ಯೆ ಹೆಚ್ಚಿಸಿ ಆದೇಶ ಮಾಡಿದ್ದ ಯಡಿಯೂರಪ್ಪ ಅವರು, ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇರುವ ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಿ ಸಿಎಂ ಯಡಿಯೂರಪ್ಪ ಆದೇಶ ಮಾಡಿದ್ದರು. ಅದಾದ ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘ ತುಟ್ಟಿ ಭತ್ಯೆ ಬಿಡುಗಡೆಗೆ ಮನವಿ ಮಾಡಿತ್ತು. ಅದಕ್ಕೆ ಸ್ಪಂಧಿಸಿದರು ಸಿಎಂ ಆರ್ಥಿಕ ಇಲಾಖೆಗೆ ಆದೇಶ ಮಾಡಿದ್ದಾರೆ.

ಆರ್ಥಿಕ ಇಲಾಖೆಗೆ ಸಿಎಂ ಆದೇಶ

ಆರ್ಥಿಕ ಇಲಾಖೆಗೆ ಸಿಎಂ ಆದೇಶ

ಬಾಕಿ ಇರುವ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಆದೇಶ ಮಾಡಿದ್ದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಖಿತ ಆದೇಶ ಮಾಡಿದ್ದಾರೆ. ಈ ಆದೇಶವು ಜುಲೈ 1 ಪೂರ್ವಾನ್ವಯವಾಗುವಂತೆ ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆ ಆಗಲಿದೆ. ಯಡಿಯೂರಪ್ಪ ಅವರ ಆದೇಶದಿಂದ ಈ ವರೆಗೆ ತಡೆಹಿಡಿಯಲಾಗಿದ್ದ ಒಟ್ಟು ಮೂರು ಅವಧಿಯ ತುಟ್ಟಿ ಭತ್ಯೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದಿಂದ ಸರ್ಕಾರಿ ನೌಕರರಿಗೆ ಅನಕೂಲವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಧನ್ಯವಾದ ಹೇಳಿದ್ದಾರೆ.

Recommended Video

B S Yediyurappa To Quit ??ರಾಜಿನಾಮೆ ಬಗ್ಗೆ ಮೌನ ಮುರಿದ ಯಡಿಯುರಪ್ಪ!! | Oneindia Kannada
ಯಾರಿಗೆಲ್ಲ ಅನುಕೂಲವಾಗಲಿದೆ?

ಯಾರಿಗೆಲ್ಲ ಅನುಕೂಲವಾಗಲಿದೆ?

ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಆದೇಶದಿಂದ ಒಟ್ಟು 13.5 ಲಕ್ಷ ಸರ್ಕಾರ ನೌಕರರಿಗೆ ಅನುಕೂಲವಾಗುತ್ತಿದೆ. ಅವರಲ್ಲಿ 6 ಲಕ್ಷ ನೇರ ಸರ್ಕಾರಿ ನೌಕರರು, 4.5 ಲಕ್ಷ ನೀವೃತ್ತಿ ಹೊಂದಿದ ಸರ್ಕಾರಿ ನೌಕರರು ಹಾಗೂ ಸುಮಾರು 3 ಲಕ್ಷ ಜನ ನಿಗಮ-ಮಂಡಳಿಗಳ ಸಿಬ್ಬಂದಿ ಸೇರಿದ್ದಾರೆ. nE ವೇತನ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡಾ 11.25ರಷ್ಟಿದೆ. ಅದರೊಂದಿಗೆ ಶೇಕಡಾ 11ರಷ್ಟು ಹೆಚ್ಚಳ ಆಗಿರುವುದರಿಂದ ಈಗ ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 22.25ರಷ್ಟು ತುಟ್ಟಿ ಭತ್ಯೆ ಸಿಗಲಿದೆ.

ಕೇಂದ್ರ ಸರ್ಕಾರ ಎಲ್ಲವನ್ನೂ ನಗದು ರೂಪದಲ್ಲಿ ಇನ್ನೂ ಬಿಡುಗಡೆ ಮಾಡಿರಲಿಲ್ಲ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಎಲ್ಲವನ್ನೂ ಸೇರಿಸಿ ನಗದು ರೂಪದಲ್ಲಿ ಬಿಡುಗಡೆಗೆ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

English summary
Chief Minister Yediyurappa orders release of dearness allowance to State Government employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X