• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ ಶುಭಾಶಯ ಕೋರಿದ ಮುಖ್ಯಮಂತ್ರಿಗಳಿಗೆ 'ಸಿಹಿಕಹಿ' ತಿನ್ನಿಸಿದ ಟ್ವಿಟ್ಟಿಗರು

|
   ಸಿದ್ದರಾಮಯ್ಯನವರ ಸಂಕ್ರಾಂತಿ ಶುಭಾಶಯ ಟ್ವಿಟ್ಟರ್ ನಲ್ಲಿ ಅವರಿಗೆ ಉಲ್ಟಾ | Oneindia Kannada

   ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಟಿಗರು ಸಿಹಿ ಮತ್ತು ಕಹಿ ಎರಡನ್ನೂ ತಿನ್ನಿಸಿದ್ದಾರೆ.

   ಭಾನುವಾರ ಜನವರಿ ಹದಿನಾಲ್ಕರಂದು ಸಿಎಂ ಶುಭಾಶಯದ ಟ್ವೀಟ್ ಅನ್ನು @CMofKarnataka ಅಕೌಂಟಿನಿಂದ ಮಾಡಿದ್ದರು. ಅದಕ್ಕೆ ಸುಮಾರು ಆರುನೂರು ಲೈಕ್ಸ್ ಬಂದಿತ್ತು. ಜೊತೆಗೆ, ಅದು 123 ಬಾರಿ ರಿಟ್ವೀಟ್ ಆಗಿತ್ತು, 156 ಜನ ಅದಕ್ಕೆ ರಿಪ್ಲೈ ಮಾಡಿದ್ದರು.

   ಕನ್ನಡಿಗರಿಗೆ ಸುಗ್ಗಿ ಹಬ್ಬಕ್ಕೆ ಶುಭಹಾರೈಸಿದ ಪ್ರಧಾನಿ ಮೋದಿ

   ಮತ್ತೆ ಬನ್ನಿ ಸಾರ್. ಗೆಲುವು ನಿಮ್ಮದಾಗಲಿ. ಮಕರ ಸಂಕ್ರಾಂತಿ ಹಬ್ಬದಂದು ನಾಡಿನ ಜತೆಗೆ ಶುಭ ಕೋರಿದಕ್ಕೆ ಧನ್ಯವಾದಗಳು. ಮುಂದಿನ ಸಂಕ್ರಾತಿಗೆ ನೀವೂ ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು.. ಹೀಗೆ ಮುಖ್ಯಮಂತ್ರಿಗಳಿಗೆ, ಟ್ವಿಟ್ಟಿಗರು ಸಿಹಿಕಹಿ ಎರಡನ್ನೂ ತಿನ್ನಿಸಿದ್ದಾರೆ.

   'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'

   ಬಿಜೆಪಿ, RSS, ಸಂಘಪರಿವಾರದವರು ಭಯೋತ್ಪಾದಕರು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯ ನಂತರ, ಪರವಿರೋಧ ನಿಲುವು/ಹೇಳಿಕೆಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.

   ಲಿಂಗಾಯತ ಪ್ರತ್ಯೇಕ ಧರ್ಮ, ಹಿಂದುತ್ವ, ಕೋಮು ದ್ವೇಷ, ಕೆಲವು ಭಾಗಗಳಲ್ಲಿ ಕೈಕೊಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಇಟ್ಟುಕೊಂಡು ಟ್ವಿಟ್ಟಿಗರು ಸಿಎಂ ಟ್ವೀಟಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಟ್ವೀಟಿಗೆ ಬಂದಂತಹ ಕೆಲವೊಂದು ಆಯ್ದ ಸಿಹಿ ಮತ್ತು ಕಹಿ ರಿಪ್ಲೈಗಳು ಈ ರೀತಿವೆ.. ಮುಂದೆ ಓದಿ..

   ಸ್ನೇಹ, ಸೌಹಾರ್ದತೆ ಹಾಗೂ ಶಾಂತಿಯನ್ನು ನೆಲೆಗೊಳಿಸಲಿ

   ಸ್ನೇಹ, ಸೌಹಾರ್ದತೆ ಹಾಗೂ ಶಾಂತಿಯನ್ನು ನೆಲೆಗೊಳಿಸಲಿ

   ಸಂಭ್ರಮದ ಮಕರ ಸಂಕ್ರಾಂತಿಯು ಸುಖ-ಸಮೃದ್ಧಿಯ ಜೊತೆಗೆ ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಹಾಗೂ ಶಾಂತಿಯನ್ನು ನೆಲೆಗೊಳಿಸಲಿ ಎಂದು ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು: @siddaramaiah - ಮಕರಸಂಕ್ರಾತಿ ಹಬ್ಬಕ್ಕೆ ಸಿಎಂ ಮಾಡಿದ ಟ್ವೀಟ್.

   ಮುಂದಿನ ಸಂಕ್ರಾಂತಿಗೆ ನೀವೂ ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು

   ಮುಂದಿನ ಸಂಕ್ರಾಂತಿಗೆ ನೀವೂ ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು

   ಶಾಂತಿ ನೆಮ್ಮದಿ ಸೌಹರ್ದತೆಗೆ ಮುಂದಿನ ಸಂಕ್ರಾಂತಿಗೆ ನೀವು ಅಧಿಕಾರದಲ್ಲಿ ಇಲ್ಲದಿದ್ದಾರೆ ಸಾಕು.!! ರಾಜ್ಯದಲ್ಲಿ ಸುಮಾರು 22 ಹಿಂದುಗಳ ಮಾರಣ ಹೋಮ ನಡೆದಿದೆ. ಎಲ್ಲಿದೆ ಶಾಂತಿ ಸುವ್ಯವಸ್ಥೆ, ಸುಮ್ಮನೆ ಹಿಂದೂಗಳನ್ನು ಒಲಿಸಿಕೊಳ್ಳಲು ಈ ಶುಭಾಶಯ.. ಆದರೂ ಇರಲಿ ನಿಮಗೂ ಸಂಕ್ರಮಣದ ಶುಭಾ‍‍‍ಶಯಗಳು... - ಸಿಎಂ ಟ್ವೀಟಿಗೆ ಬಂದ ರಿಪ್ಲೈಗಳು.

   ರಾಜಕೀಯ ಎನ್ನುವ ಬೇಳೆಯನ್ನು ಬೇಯಿಸಿಕೊಳ್ಳುತ್ತೀರಾ

   ರಾಜಕೀಯ ಎನ್ನುವ ಬೇಳೆಯನ್ನು ಬೇಯಿಸಿಕೊಳ್ಳುತ್ತೀರಾ

   ಮಕರ ಸಂಕ್ರಾಂತಿ ಶುಭಾಶಯಗಳು Sir .. ಒಂದೆಡೆ ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಹಾಗೂ ಶಾಂತಿಯನ್ನು ನೆಲೆಗೊಳಿಸಲಿ ಎಂದು ಹಾರೈಸುತ್ತೀರಾ, ಮತ್ತೊಂದೆಡೆ ಧರ್ಮಗಳನ್ನೊಡೆದು, ಕೋಮುಗಳಿಗೆ ಬೆಂಕಿ ಹಚ್ಚಿ ಅದರಲ್ಲಿ ತಮ್ಮ ರಾಜಕೀಯ ಎನ್ನುವ ಬೇಳೆಯನ್ನು ಬೇಯಿಸಿಕೊಳ್ಳುತ್ತೀರಾ... ಕ್ರೂರಿ ರಕ್ಕಸನ ಬಾಯಲ್ಲಿ ಭಗವದ್ಗೀತೆ... ಮೆಚ್ಚಲೇಬೇಕು ಎನ್ನುವ ಟ್ವೀಟುಗಳು.

   ಡೋಂಗಿ ಜಾತ್ಯತೀತ ನಾಯಕರಿಗೆ ಸಂಕ್ರಾಂತಿ ಹೇಗೆ ನೆನಪಾಯಿತು?

   ಡೋಂಗಿ ಜಾತ್ಯತೀತ ನಾಯಕರಿಗೆ ಸಂಕ್ರಾಂತಿ ಹೇಗೆ ನೆನಪಾಯಿತು?

   ಮತ್ತೆ ಬನ್ನಿ ಸಾರ್. ಗೆಲುವು ನಿಮ್ಮದಾಗಲಿ... ಟಿಪ್ಪು ಜಯಂತಿಗೆ ಪ್ರತಿ ತಾಲೂಕಿಗೆ 30ಸಾವಿರ ರೂಪಾಯಿ ಖರ್ಚು #SwamiVivekananda ಜಯಂತಿ & #NationalYouthDayಗೆ ಒಂದು ನಯಾಪೈಸೆ ಇಲ್ಲ, ಕಟ್ಟಾ ಹಿಂದೂ ಧರ್ಮ ವಿರೋಧಿ ಡೋಂಗಿ ಜಾತ್ಯತೀತ ನಾಯಕರಿಗೆ ಸಂಕ್ರಾಂತಿ ಹೇಗೆ ನೆನಪಾಯಿತು? ನಾವು ಹಿಂದೂ ಭಯೋತ್ಪಾದಕರು ವಿಪರ್ಯಾಸ ನಾವೇ ಕೊಲೆಯಾಗುತ್ತಿದ್ದೇವೆ - ಟ್ವೀಟುಗಳು

   ಮಹೋನ್ನತವಾದ ಸನಾತನ ಧರ್ಮವನ್ನು ಅಪ್ಪಿಕೊಳ್ಳಿ

   ಮಹೋನ್ನತವಾದ ಸನಾತನ ಧರ್ಮವನ್ನು ಅಪ್ಪಿಕೊಳ್ಳಿ

   ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುತ್ತಿರುವ ಕರ್ನಾಟಕ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ...ನೀವು ಜಿಹಾದಿಗಳನ್ನು ಓಲೈಸುವುದನ್ನು ಬಿಟ್ಟು ಹಾಗೆ ಅವರ ಸಂಗವನ್ನು ಬಿಟ್ಟು ನಮ್ಮ ಮಹೋನ್ನತವಾದ ಸನಾತನ ಧರ್ಮವನ್ನು ಅಪ್ಪಿಕೊಂಡರೆ ನಾಡಿಗೆ ಶಾಂತಿ, ಸೌಹಾರ್ದತೆ ಎಲ್ಲವೂ ಸಿಗುತ್ತದೆ.. ಮಕರ ಸಂಕ್ರಾಂತಿಯ ಶುಭಾಶಯಗಳು - ಟ್ವೀಟುಗಳು.

   ಕರ್ನಾಟಕದಲ್ಲಿ ಉಸಿರಾಡಲು ಕಷ್ಟವಾಗುತ್ತಿದೆ

   ಕರ್ನಾಟಕದಲ್ಲಿ ಉಸಿರಾಡಲು ಕಷ್ಟವಾಗುತ್ತಿದೆ

   ಈಗ ನಿಜವಾಗಿಯೂ ಕರ್ನಾಟಕದಲ್ಲಿ ಉಸಿರಾಡಲು ಕಷ್ಟವಾಗುತ್ತಿದೆ. ಕಾನೂನು ಸುವ್ಯವಸ್ಥೆ ಉಸಿರಾಡುತ್ತಿದೆಯಾ..? Or ನಿಮ್ಮೆಲ್ಲರ ಸಮಾವೇಶಕ್ಕೆ ಭದ್ರತೆ ಕೊಡಲು Busy ಇದೆಯೋ..? ನಮ್ಮ ದೇಶ ಕಾಂಗ್ರೆಸ್ ಮುಕ್ತ ಆದಮೇಲೆ ಹಿಂದು ಹಬ್ಬಗಳಿಗೆ ಹೂಸ ಚೈತನ್ಯ ಬರುತ್ತೆ ಆಗ ನಾವು ನಮ್ಮ ಹಬ್ಬಗಳನ್ನು ಸಂತೋಷವಾಗಿ ಆಚರಿಸುತ್ತೇವೆ.. ನಿಮ್ಮ ಸರಕಾರಕ್ಕೆ ವೊಟ್ ಹಾಕಿ ತಪ್ಪು ಮಾಡಿದ್ದೇವೆ - ಟ್ವೀಟುಗಳು.

   English summary
   Karnataka Chief Minister Siddaramaiah's Makara Sankranti wishes through Twitter and twitterite reply for the CM tweet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X