ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಡಿಯೋದಲ್ಲಿ ಸಿಎಂ ಸಿದ್ದು ರೈತರನ್ನು ಉದ್ದೇಶಿಸಿ ’ಮನ್ ಕಿ ಬಾತ್’

|
Google Oneindia Kannada News

ಬೆಂಗಳೂರು, ಜುಲೈ 18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ "ಮನ್‌ ಕೀ ಬಾತ್‌' ರೇಡಿಯೋ ಭಾಷಣದ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ (ಜು 18) ರಾಜ್ಯದ ರೈತರನ್ನು ಉದ್ದೇಶಿಸಿ ಆಕಾಶವಾಣಿ ಮೂಲಕ ಭಾಷಣ ಮಾಡಿದ್ದಾರೆ.

ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈತರಿಗೆ ಧೈರ್ಯ ತುಂಬಲು ಬೆಳಗ್ಗೆ 8.35ಕ್ಕೆ ಭಾಷಣ ಆರಂಭಿಸಿದ ಸಿದ್ದರಾಮಯ್ಯ, ಯಾವ ಕಾರಣಕ್ಕೂ ಆತ್ಮಹತ್ಯೆಯ ಮೊರೆ ಹೋಗಬೇಡಿ ಎಂದು ರೈತರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

CM Siddaramaiah requested farmers not to commit suicide, through Akashvani speech

ಸಿದ್ದರಾಮಯ್ಯ ರೇಡಿಯೋ ಮೂಲಕ ಮಾಡಿದ ಭಾಷಣದ ಪ್ರಮುಖಾಂಶ:
> ರೈತನ ಸಾವು ನನಗೆ ತೀವ್ರ ನೋವು ತಂದಿದೆ, ಇದರಿಂದ ಬಹಳ ನೊಂದಿದ್ದೇನೆ.
> ರೈತನ ಮಗನಾಗಿ ಇನ್ನೊಬ್ಬ ರೈತನ ನೋವು, ಕಷ್ಟ ನನಗೆ ಅರ್ಥವಾಗುತ್ತೆ, ಆದರೆ ಆತ್ಮಹತ್ಯೆ ಇದಕ್ಕೆ ಪರಿಹಾರವಲ್ಲ.
> ಅಧಿಕಾರದಲ್ಲಿ ಇರಲಿ, ಬಿಡಲಿ ನಾನು ಮೊದಲು ರೈತನ ಮಗ.
> ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ತಕ್ಷಣಕ್ಕೆ ಅನುಕೂಲವಾಗುವಂತೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೇವೆ.
> ರೈತರನ್ನು ಶೋಷಣೆ ಮಾಡುವವರ ವಿರುದ್ದ ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು.
> ಅಕ್ರಮ ಬಡ್ಡಿ ದಂಧೆಕೋರರಿಗೆ ಬಿಸಿ ಮುಟ್ಟಿಸಲು ಡಿಸಿಗಳಿಗೆ ಸೂಚನೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು.
> ಎಂಟು ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಇದುವರೆಗೆ 1800 ಕೋಟಿ ರೂಪಾಯಿ ರೈತರ ಸಾಲವನ್ನು ಸರಕಾರ ಭರಿಸಿದೆ.
> ಬಡ್ಡಿಕೋರರಿಂದಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಲೇವಾದೇವಿ ನಡೆಸುವವರಿಗೆ ಸರಿಯಾದ ಶಿಕ್ಷೆ ವಿಧಿಸಲಾಗುವುದು. ಲೇವಾದೇವಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು.
> ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ದ ರೈತರು ದೂರು ದಾಖಲಿಸ ಬಹುದು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
> ಕೃಷಿ ಮತ್ತು ಆರೋಗ್ಯ ಸಚಿವಾಲಯದಡಿಯಲಿ ರೈತ ಸಂಪರ್ಕ ಸಭೆಯನ್ನು ನಡೆಸಲಾಗುವುದು.

> ಸಾಲದ ಶೂಲದಿಂದ ಪಾರು ಮಾಡುವುದೇ ನಮ್ಮ ಉದ್ದೇಶ.

> ನಿಮ್ಮೊಂದಿಗೆ ನಾವಿದ್ದೇವೆ, ದಯವಿಟ್ಟು ಆತ್ಮಹತ್ಯೆಗೆ ಶರಣಾಗಬೇಡಿ.
> ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಆತ್ಮಭಲದಿಂದ ಬದುಕುತ್ತೇನೆಂದು ಶಪಥ ಮಾಡಲು ರೈತರಿಗೆ ಸಿಎಂ ಮನವಿ.

English summary
Chief Minister Siddaramaiah requested farmers not to commit suicide, through Akashvani speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X