ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂ ಆ್ಯಪ್ ಬಗ್ಗೆ ಸಿಎಂ ಮೆಚ್ಚುಗೆ, ವಿಜೃಂಭಣೆಯಿಂದ ಕನ್ನಡ ಹಬ್ಬ

|
Google Oneindia Kannada News

ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದ ಕೆಲವು ಖ್ಯಾತನಾಮರು ಹಾಗೂ ಹಲವು ಕನ್ನಡದ ಹೃದಯಗಳೊಟ್ಟಿಗೆ ನವೆಂಬರ್ 1 ರಂದು ಕೂ ಆ್ಯಪ್ ವಿಜೃಂಭಣೆಯಿಂದ ಆಚರಿಸಲಾಯಿತು.

ಕೂ ಅಪ್ಲಿಕೇಶನ್ ಒಂದು ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿದ್ದು, ಇದು ಕನ್ನಡ ಮತ್ತು ಇತರ ಕೆಲವು ಭಾರತೀಯ ಭಾಷೆಗಳನ್ನೊಳಗೊಂಡಿದೆ. ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಹಾಯ ಮಾಡುತ್ತದೆ. ಮಾರ್ಚ್ 2020 ರಲ್ಲಿ ಕನ್ನಡದಲ್ಲಿ ಕೂ ವೇದಿಕೆಯನ್ನು ಪ್ರಾರಂಭಿಸಲಾಯಿತು ಅಂದಿನಿಂದ ಇಂದಿನ ವರೆಗೆ ಕೂನಲ್ಲಿ ಅನೇಕ ಗಮನಾರ್ಹ ವ್ಯಕ್ತಿಗಳು ಸೇರಿದ್ದಾರೆ ಮತ್ತು ಕೂ ಇದೀಗ ಕನ್ನಡದ ಅತಿದೊಡ್ಡ ಸಮುದಾಯವಾಗಿದೆ.

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

ನಟಿ ಮತ್ತು ನರ್ತಕಿ ರೂಪಿಕಾ ಅವರ ಕಿರು ಟಿಪ್ಪಣಿಯೊಂದಿಗೆ ಆಚರಣೆ ಪ್ರಾರಂಭವಾಯಿತು. ನಂತರ ಕೂ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ರವರು ಸ್ವಾಗತ ಭಾಷಣದ ಮೂಲಕ ಸಮುದಾಯವನ್ನು ಸ್ವಾಗತಿಸಿದರು ಮತ್ತು ಕೊರೋನಾ ಕಾರಣದಿಂದಾಗಿ ವೈಯಕ್ತಿಕವಾಗಿ ಎಲ್ಲರೂ ಸೇರಿ ಆಚರಿಸಬೇಕಾದ ಕನ್ನಡ ರಾಜ್ಯೋತ್ಸವ ಆಚರಣೆ ಆನ್ಲೈನ್ ಮೂಲಕ ಆಚರಿಸಲಾಗುತ್ತಿದ್ದು ಈ ಮೂಲಕ ನಾಡಿನ ಕನ್ನಡಿಗರೊಂದಿಗೆ ಹಾಗೂ ಪ್ರಪಂಚದಾದ್ಯಂತ ಪಸರಿಸಿರುವ ಕನ್ನಡ ಹೃದಯಗಳನ್ನು ಒಟ್ಟಿಗೆ ಬೆಸೆಯಲು ಒದಗಿಬಂದ ಮಹತ್ವಪೂರ್ಣ ಸಂದರ್ಭಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮೆಚ್ಚುಗೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮೆಚ್ಚುಗೆ

ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ನವರು ಕನ್ನಡ ಭಾಷೆಯನ್ನು ಮಾತನಾಡುವ ಮಹತ್ವದ ಕುರಿತು ಹಾಗೂ ನಮ್ಮ ಸಂಸ್ಕೃತಿಯ ಬೇರುಗಳನ್ನು ಭದ್ರಗೊಳಿಸುವ ಇಂತಹ ಆಚರಣೆಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಹಾಗೂ ಕೂನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಪ್ರಮೇಯ ರಾಧಾಕೃಷ್ಣ ರವರಿಗೆ ಧನ್ಯವಾದ ತಿಳಿಸಿದರು.

ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್

ಕನ್ನಡ-ಇಂಗ್ಲಿಷ್ ನಿಘಂಟು ಬಗ್ಗೆ ತಿಳಿಸಿದ ಜಗದೀಶ್

ಕನ್ನಡ-ಇಂಗ್ಲಿಷ್ ನಿಘಂಟು ಬಗ್ಗೆ ತಿಳಿಸಿದ ಜಗದೀಶ್

ಹಿರಿಯ ಗಾಯಕ ಶಶಿಧರ್ ಕೋಟೆಯವರು ರಾಷ್ಟ್ರಕವಿ ಕುವೆಂಪು ರವರಿಂದ ರಚಿಸಲ್ಪಟ್ಟ ಭಾರಿಸು ಕನ್ನಡ ಡಿಂಡಿಮವ ಎಂಬ ಸೊಗಸಾದ ಗೀತೆಯನ್ನು ಹಾಡಿದರು. ಜನಪ್ರಿಯ ಕನ್ನಡ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ್ ಅವರು ಕನ್ನಡವನ್ನು ಓದುವ ಮಹತ್ವದ ಬಗ್ಗೆ ಮಾತನಾಡಿದರು. ಸಾಹಿತ್ಯ, ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಿ ಮತ್ತು ಮುಂದಿನ ಪೀಳಿಗೆಗೆ ಕನ್ನಡವನ್ನು ಕಲಿಸುವ ನಮ್ಮ ಜವಾಬ್ದಾರಿಯ ಬಗ್ಗೆ ತಿಳಿಸಿದರು. ನಟ ಮತ್ತು ನಿರ್ದೇಶಕ ಜಗದೀಶ್ ಮಲ್ನಾಡ್ ಅವರು ಬ್ರಿಟಿಷ್ ಅಧಿಕಾರಿ ಫರ್ಡಿನ್ಯಾಂಡ್ ಕಿಟ್ಟೆಲ್ ರವರ ಬಗ್ಗೆ ಹಾಗೂ ಅವರು ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಹೇಗೆ ಬರೆದಿದ್ದಾರೆ ಎಂಬುದಾಗಿ ವಿವರಿಸಿದರು.

ಗಾಯಕಿ ಕಾತ್ಯಾಯಿನಿ ಭಟ್ ಅವರು ಸುಂದರವಾದ ಕನ್ನಡ ಹಾಡನ್ನು ಹಾಡಿದರು.

ಕನ್ನಡದ ನಟಿ ನೀತೂ ಶೆಟ್ಟಿ

ಕನ್ನಡದ ನಟಿ ನೀತೂ ಶೆಟ್ಟಿ

ಕನ್ನಡದ ನಟಿ ನೀತೂ ಶೆಟ್ಟಿ ಭಾಷೆಯನ್ನು ಮಾತನಾಡುವ ಮೂಲಕ ಜೀವಂತವಾಗಿರಿಸಿಕೊಳ್ಳಬೇಕು ಮತ್ತು ನಾವು ಕನ್ನಡಿಗರಾಗಿರುವುದಕ್ಕೆ ಹೆಮ್ಮೆಪಡಬೇಕೆಂದು ಸಮುದಾಯವನ್ನು ವಿನಂತಿಸಿದರು.

ವಿಶ್ವವಿಖ್ಯಾತ ಜಾದೂಗಾರರಾದ ಕುದ್ರೋಳಿ ಗಣೇಶ್ ರವರು ತಮ್ಮ ಪುಟ್ಟ ಪ್ರದರ್ಶನವನ್ನು ಪ್ರಸ್ತುತ ಪಡಿಸಿ ಕನ್ನಡಿಗರೆಲ್ಲರೂ ಕನ್ನಡದಲ್ಲಿಯೇ ಸಂವಹನ ನಡೆಸಬೇಕೆಂದು ಕೋರಿದರು.


ಗಾಯಕ ಗಣೇಶ್ ಕಾರಂತ್ ರವರು ಹಾಡಿನ ಕೆಲವು ಸಾಲುಗಳನ್ನು ಹಾಡಿದರು ಮತ್ತು ಕನ್ನಡದ ಮಹತ್ವವನ್ನು ಚರ್ಚಿಸಿದರು. ಈ ಸುಂದರವಾದ ರಾಜ್ಯವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡ ಕನ್ನಡಿಗರಲ್ಲದವರೆಲ್ಲರಿಗೂ ಕನ್ನಡ ಭಾಷೆ ಕಲಿಸಬೇಕೆಂದು ಜನಪ್ರಿಯ ನಟ ನವೀನ್ ಕೃಷ್ಣ ಕನ್ನಡಿಗರಿಗೆ ಮನವಿ ಮಾಡಿದರು, ಕಾರ್ಯಕ್ರಮ ನಟಿ-ನರ್ತಕಿ ರೂಪಿಕಾ ಹಾಗೂ ಅವರ 'ಗೆಜ್ಜೆ' ತಂಡದ ಅಭಿನಯದೊಂದಿಗೆ ಸಂಪನ್ನಗೊಂಡಿತು.

ಕೂ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ

ಕೂ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ

ಈ ಸಂದರ್ಭದಲ್ಲಿ ಕೂ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ವಿಶ್ವದಾದ್ಯಂತ ಪಸರಿಸಿರುವ ಕನ್ನಡ ಹೃದಯಗಳೊಡನೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಈ ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ನಾವೆಲ್ಲ ವೈಯಕ್ತಿಕವಾಗಿ ರಾಜ್ಯೋತ್ಸವ ಆಚರಿಸಲು ಸಾದ್ಯವಾಗದಿದ್ದರೂ ಆನ್ಲೈನ್ ಮೂಲಕ ಪ್ರಪಂಚದಾದ್ಯಂತ ಕನ್ನಡಿಗರೆಲ್ಲರೂ ಒಟ್ಟಿಗೇ ಸೇರಿ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ವರದಾನವಾಗಿ ಪರಿಣಮಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸುಸಂದರ್ಭದಲ್ಲಿ ನಮ್ಮೊಡನೆ ಜೊತೆಯಾದ ಗೌರವಾನ್ವಿತ ಮುಖ್ಯಮಂತ್ರಿಗಳು ಹಾಗೂ ಇತರ ಎಲ್ಲಪ್ರಕಾಶಕರಿಗೂ ಧನ್ಯವಾದ ಅರ್ಪಿಸುತ್ತ ಪ್ರತೀ ವರ್ಷವೂ ಕೂ ನಲ್ಲಿ ಕನ್ನಡರಾಜ್ಯೋತ್ಸವವನ್ನು ಆಚರಿಸುವುದಲ್ಲದೇ ಮುಂಬರುವ ದಿನಗಳಲ್ಲಿ ಇನ್ನಷ್ಟು ಭವ್ಯವಾಗಿ ಆಚರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

English summary
CM Yediyurappa spoke about the importance of speaking Kannada and celebrating our roots and thanked Aprameya for hosting this celebration on Koo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X