ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದೀಯ ಕಾರ್ಯದರ್ಶಿ ಹುದ್ದೆ ರದ್ದು: ಸಂಕಷ್ಟದಲ್ಲಿ ಯಡಿಯೂರಪ್ಪ

|
Google Oneindia Kannada News

Recommended Video

ಫೆಬ್ರವರಿ 01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ | BUDGET 20-21 | ONEINDIA KANNADA

ಬೆಂಗಳೂರು, ಜನವರಿ 09: ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಿಕ್ಕ-ಸಿಕ್ಕಂತೆ ಸಚಿವ ಸ್ಥಾನಗಳು, ಸಂಸದೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸುತ್ತಿದ್ದ ಸರ್ಕಾರಗಳನ್ನು ನ್ಯಾಯಾಲಯದ ತೀರ್ಪು ಇಕ್ಕಟ್ಟಿಗೆ ಸಿಲುಕಿಸಿದೆ.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಶಾಸಕರನ್ನು, ವಿಧಾನಪರಿಷತ್ ಸದಸ್ಯರನ್ನು ಸಂದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದನ್ನು ಹೈಕೋರ್ಟ್ ರದ್ದು ಮಾಡಿದೆ. ಇಂತಹಾ ನೇಮಕ ಮುಖ್ಯಮಂತ್ರಿಯ ಅಧಿಕಾರ ಅಲ್ಲ ಎಂದು ಹೇಳಿದೆ.

ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಬಹುದೊಡ್ಡ ಸಂಕಷ್ಟ..!ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಬಹುದೊಡ್ಡ ಸಂಕಷ್ಟ..!

ಬೇಕಾಬಟ್ಟಿ ಸಂಸದೀಯ ಕಾರ್ಯದರ್ಶಿ ಸ್ಥಾನ ನೇಮಕ ಅಸಾಂವಿಧಾನಿಕ ಎಂದು ಹೈಕೋರ್ಟ್‌ ಆದೇಶಿಸಿರುವ ಕಾರಣ ಪ್ರಸ್ತುತ ಸರ್ಕಾರದಲ್ಲಿ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ, ಎಸ್‌.ಆರ್.ವಿಶ್ವನಾಥ್, ಶಂಕರಗೌಡ ಪಾಟೀಲ್ ಅವರ ಸ್ಥಾನಗಳು ಸಹ ತೂಗುಯ್ಯಾಲೆಯಲ್ಲಿವೆ.

ಒಟ್ಟು ಶಾಸಕರ 15% ಮಾತ್ರ ಸಚಿವರಿರಬೇಕು

ಒಟ್ಟು ಶಾಸಕರ 15% ಮಾತ್ರ ಸಚಿವರಿರಬೇಕು

ಒಟ್ಟು ಶಾಸಕರ ಸಂಖ್ಯೆಯ 15% ರಷ್ಟು ಮಾತ್ರವೇ ಸಚಿವರಿರಬೇಕು ಎಂದು ಸಂವಿಧಾನದ 164 (1ಎ) ಹೇಳುತ್ತದೆ. ಆದರೆ ಸರ್ಕಾರಗಳು ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಹೆಚ್ಚುವರಿ ಸ್ಥಾನಗಳನ್ನು ಸೃಷ್ಟಿಸುತ್ತಿತ್ತು, ರಾಜಕೀಯ ಕಾರ್ಯದರ್ಶಿ ಸೇರಿದಂತೆ ಇನ್ನೂ ಕೆಲವು ಸ್ಥಾನಗಳಿಗೆ ಮುಖ್ಯಮಂತ್ರಿಗಳೇ ಶಾಸಕರನ್ನು ನೇಮಕ ಮಾಡಿಬಿಡುತ್ತಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಆದಿನಾರಾಯಣ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಆದಿನಾರಾಯಣ

ಆದರೆ ಇದರ ವಿರುದ್ಧ ವಿಜಯನಗರದ ನಿವಾಸಿ ಎಂ.ಬಿ.ಆದಿನಾರಾಯಣ ಎಂಬುವರು ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆದು ಮನಸೋಇಚ್ಛೆ ಸಂಸದೀಯ ಕಾರ್ಯದರ್ಶಿ ನೇಮಕ ಅಸಾಂವಿಧಾನಿಕ ಎಂದು ಹೈಕೋರ್ಟ್ ಆದೇಶಿಸಿದೆ.

ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ ಸಾಧ್ಯತೆ : ಕಾರಣವೇನು?ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ ಸಾಧ್ಯತೆ : ಕಾರಣವೇನು?

ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಯಡಿಯೂರಪ್ಪಗೆ ಸಂಕಷ್ಟ

ಸಂಪುಟ ವಿಸ್ತರಣೆ ಹೊಸ್ತಿಲಲ್ಲಿ ಯಡಿಯೂರಪ್ಪಗೆ ಸಂಕಷ್ಟ

ಹೈಕೋರ್ಟ್ ಆದೇಶದಿಂದ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಹಂತದ ಸಂಪುಟ ವಿಸ್ತರಣೆ ಹೊಸ್ತಿಲಲ್ಲಿರುವಾಗ ಹೈಕೋರ್ಟ್ ಆದೇಶ ಹೊರಬಿದ್ದಿರುವ ಕಾರಣ ಹೆಚ್ಚುವರಿ ಸಂಸದೀಯ ಕಾರ್ಯದರ್ಶಿ ಸ್ಥಾನ ಸೃಷ್ಟಿ ಅಸಾಧ್ಯವಾಗಲಿದೆ.

ಮಾಜಿ ಅನರ್ಹ ಶಾಸಕರಿಗೆ ಅವಕಾಶ ನಿಡುವ ಇಕ್ಕಟ್ಟಿನಲ್ಲಿ ಬಿಎಸ್‌ವೈ

ಮಾಜಿ ಅನರ್ಹ ಶಾಸಕರಿಗೆ ಅವಕಾಶ ನಿಡುವ ಇಕ್ಕಟ್ಟಿನಲ್ಲಿ ಬಿಎಸ್‌ವೈ

ಈಗ ಇರುವ ಮೂವರು ಸಂಸದೀಯ ಕಾರ್ಯದರ್ಶಿಗ ಸ್ಥಾನಗಳು ರದ್ದಾಗುವ ಮೂಲಕ ಅತೃಪ್ತರ ಸಂಖ್ಯೆ ಹೆಚ್ಚಾಗಲಿದೆ. ಮಾಜಿ ಅನರ್ಹರಿಗೆ ಸಚಿವ ಸ್ಥಾನ ನೀಡಿ, ಅತೃಪ್ತ ಮೂಲ ಬಿಜೆಪಿ ಶಾಸಕರನ್ನು ನಿಭಾಯಿಸುವುದು ಯಡಿಯೂರಪ್ಪ ಅವರಿಗೆ ಸವಾಲಾಗಲಿದೆ.

ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾದ ಎಂಟಿಬಿ ನಾಗರಾಜ್: ಏನೇನು ಚರ್ಚೆ?ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾದ ಎಂಟಿಬಿ ನಾಗರಾಜ್: ಏನೇನು ಚರ್ಚೆ?

English summary
Karnataka high court said chief minister can not appoint parliamentary secretary said high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X