ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮುಂದಿನ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ಕೊಡುವ ಜವಾಬ್ದಾರಿ ನಂದು'

|
Google Oneindia Kannada News

ಬೆಂಗಳೂರು, ಸೆ. 27: ಸುದೀರ್ಘ ಚರ್ಚೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ತೋರಿಸಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕರಿಸಲ್ಪಟ್ಟಿತು.

ವಿಶ್ವಾಸಮತ ಗೆದ್ದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ತಾವು ಪ್ರಸ್ತಾಪ ಮಾಡಿರುವ ವಿಷಯವನ್ನು ಸಾಬೀತು ಮಾಡುವ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ನೀವು ಮಾಡಿರುವ ಆರೋಪದ ಸಿಬಿಐಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ ದೂರು ಕೊಡಿ. ಇದರಲ್ಲಿ ನಮ್ಮ ಕುಟುಂಬದ ಬಗ್ಗೆ ಬಂದಿರುವ ಆರೋಪದಲ್ಲಿ ಏನಾದರೂ ಸತ್ಯ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದರು.

ಕಾಂಗ್ರೆಸ್ ನಾಯಕರು ವಿಶ್ವಾಸ ಮೂಡಿಸುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದ್ಯಾಕೆ?ಕಾಂಗ್ರೆಸ್ ನಾಯಕರು ವಿಶ್ವಾಸ ಮೂಡಿಸುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದ್ಯಾಕೆ?

ಮುಂಬರುವ ಉಪ ಚುನಾವಣೆಯಲ್ಲಿ ಜನರ ಮುಂದೆ ಆರೋಪ ಮಾಡಿ. ಅಲ್ಲಿ ಜನರ ತೀರ್ಪು ಏನಿರುತ್ತದೆಯೋ ನೋಡೋಣ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 135 ಸ್ಥಾನ ಗೆದ್ದು ತಂದು ಕೊಡುವ ಜವಾಬ್ದಾರಿ ನನ್ನದು. ಇನ್ನೂ 10 ವರ್ಷ ಕಾಂಗ್ರೆಸ್ ಪ್ರತಿಪಕ್ಷದಲ್ಲಿಯೇ ಕೂಡುವಂತಾಗುತ್ತದೆ. ನಮ್ಮ ಮೇಲೆ ಜನರಿಗೆ ವಿಶ್ವಾಸವಿದೆ. ಇಲ್ಲದಿದ್ದರೆ ಲೋಕಸಭೆಯಲ್ಲಿ ರಾಜ್ಯದಲ್ಲಿ 26 ಸ್ಥಾನ ಕೊಡುತ್ತಿದ್ದರಾ? ಜನರಿಗೆ ವಿಶ್ವಾಸ ಇಲ್ಲದಿದ್ದರೆ ಉಪ ಚುನಾವಣೆಯಲ್ಲಿ 15 ರಲ್ಲಿ 12 ಸ್ಥಾನ ಗೆಲ್ಲಲು ಸಾಧ್ಯವಿತ್ತಾ? ಎಂದು ವಿಧಾನಸಭೆಯಲ್ಲಿ ಯಡಿಯೂರಪ್ಪ ಪ್ರಶ್ನೆ ಮಾಡಿದರು.

ಎಲ್ಲರೂ ನಮ್ಮೊಂದಿಗಿದ್ದಾರೆ

ಎಲ್ಲರೂ ನಮ್ಮೊಂದಿಗಿದ್ದಾರೆ

ಪರಿಶಿಷ್ಟ ಜಾತಿ ಪಂಗಡದ ಜನರು ನಮ್ಮ ಜೊತೆ ಇರುವುದರಿಂದ ಹಾಗೂ ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದರಿಂದ ಇಷ್ಟೊಂದು ಸ್ಥಾನ ಗೆಲ್ಲಲು ಸಾಧ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಉತ್ತಮ ಬೆಳೆ ನಿರೀಕ್ಷೆ ಇದೆ. ಪ್ರವಾಹ ಸಂತ್ರಸ್ಥರಿಗೆ ಎಲ್ಲ ರೀತಿಯ ಪರಿಹಾರ ನೀಡಲಾಗಿದೆ. ಕೊರೊನಾ ಸಂಕಷ್ಟ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಶಕ್ತಿ ಮೀರಿ ಕೆಲಸ ಮಾಡಲಾಗಿದೆ. ಮಳೆಗೆ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗಿದೆ. ಬೆಳೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಲಾಗಿದೆ.

ಇಟ್ಟುದ್ದು 9 ಸಾವಿರ ಕೋಟಿ ಘೋಷಿಸಿದ್ದು ಲಕ್ಷ ಕೋಟಿ

ಇಟ್ಟುದ್ದು 9 ಸಾವಿರ ಕೋಟಿ ಘೋಷಿಸಿದ್ದು ಲಕ್ಷ ಕೋಟಿ

ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಎಸ್ ಡಿ ಆರ್ ಎಫ್ ನಿಧಿಯಿಂದ ಕೇಂದ್ರ ಸರ್ಕಾರ 1800 ಕೋಟಿ ರೂ. ನೀಡಿದೆ. ಯುಪಿಎ ಅವಧಿಯಲ್ಲಿ 700 ಕೋಟಿ ರೂ. ನೀಡಲಾಗಿತ್ತು. ಗೋವಿನ ಜೋಳ ಬೆಳೆಗಾರರಿಗೆ ಕ್ಷೌರಿಕರಿಗೆ, ನೇಕಾರರಿಗೆ, ಟ್ಯಾಕ್ಸಿ ಚಾಲಕರಿಗೆ ಜಾರಿ ಇರುವ ಕಾರ್ಯಕ್ರಮಗಳನ್ನು ಮುಂದುವರೆಸಲು ಯೋಜನೆ ರೂಪಿಸಲಾಗಿದೆ. ಸರ್ಕಾರ ಈಗ ಸಾಲ ಪಡೆದು ಬಜೆಟ್ ನಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ.

ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ!ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರ!

ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತ ಅವಧಿಯಲ್ಲಿ 15 ಲಕ್ಷ ಮನೆ ಹಂಚಿಕೆ ಮಾಡಿ ಹಣ ಇಡದೆ ಹೋದಿರಿ. ನೀರಾವರಿಗೆ 9 ಸಾವಿರ ಕೋಟಿ ರೂ. ಇಟ್ಟು 1 ಲಕ್ಷ ಕೋಟಿ ರೂ. ಯೋಜನೆಗಳಿಗೆ ಅಂಗೀಕಾರ ನೀಡಿದ್ದೀರಿ. ನಿಮ್ಮ ಭ್ರಷ್ಟಾಚಾರ ಕಾರ್ಯವೈಖರಿ ನೋಡಿ ಜನರು ನಿಮ್ಮನ್ನು ಪ್ರತಿಪಕ್ಷದಲ್ಲಿ ನುಡಿದಿದ್ದಾರೆ. ಅಲ್ಲಿಯೇ ಮುಂದುವರೆಯುತ್ತೀರಿ ಎಂದು ತಮ್ಮ ಮಾತು ಮುಗಿಸಿದರು.

ವಿಜಯೇಂದ್ರ ಭ್ರಷ್ಟಾಚಾರದ ಪೆನ್‌ಡ್ರೈವ್ ದಾಖಲೆ

ವಿಜಯೇಂದ್ರ ಭ್ರಷ್ಟಾಚಾರದ ಪೆನ್‌ಡ್ರೈವ್ ದಾಖಲೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಗೂ ಮೊದಲು ಅವಿಶ್ವಾಸ ನಿರ್ಣಯದ ಪ್ರಸ್ತಾಪದ ಮೇಲೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಬಿ.ವೈ. ವಿಜಯೇಂದ್ರ ಅವರ ಮೇಲೆ ಸುಮ್ಮನೆ ಆರೋಪ ಮಾಡುತ್ತಿಲ್ಲ. ನನ್ನ ಬಳಿ ಎಲ್ಲಾ ಸಾಕ್ಷಿಗಳೂ ಇವೆ. ಗುತ್ತಿಗೆದಾರನಿಂದ ಹಣದ ಬೇಡಿಕೆ ಕುರಿತು ಆಡಿಯೋ ಇದೆ ಎಂದು ಆರೋಪಿಸಿ, ಆಡಿಯೋ ಚಾಟಿಂಗ್ ಪೆನ್‌ಡ್ರೈವ್‌ನ್ನು ಸ್ಪೀಕರ್ ಕಾಗೇರಿ ಅವರಿಗೆ ಸಲ್ಲಿಸಿದರು.

RTGS ಮೂಲಕ ಹಣ ವರ್ಗಾವಣೆ ದಾಖಲೆ ಇವೆ. ಅದನ್ನೂ ನೀಡ್ತಿದ್ದೇನೆ ತೆಗೆದುಕೊಳ್ಳಿ. ವಾಟ್ಸಾಪ್ ಸಂಭಾಷಣೆಯ ಆಡಿಯೋ ಇದೆ. ಅದನ್ನೂ ಕೂಡ ನೀಡುತ್ತಿದ್ದೇನೆ ತೆಗೆದುಕೊಳ್ಳಿ. ಇದರ ಬಗ್ಗೆ ತನಿಖೆ ಮಾಡಿಸಿ, ಸತ್ಯಾಂಶ ಹೊರಬರಲಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ರಾಜೀನಾಮೆಗೆ ಸಿದ್ಧ: ಸಿದ್ದರಾಮಯ್ಯ

ರಾಜೀನಾಮೆಗೆ ಸಿದ್ಧ: ಸಿದ್ದರಾಮಯ್ಯ

ದಾಖಲೆ ಇರುವುದರಿಂದ ಇದರ ಸತ್ಯಾಸತ್ಯತೆ ಗೊತ್ತಾಗಬೇಕು. ಸುಪ್ರೀಂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಸಾಬೀತಾದರೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ಕೊಡಲಿ. ನಾನು ಮಾಡಿದ ಆರೋಪ ನಿರಾಧಾರವಾದರೆ ನಾನು ರಾಜೀನಾಮೆ ಕೊಕೊಡುತ್ತೇನೆ ಎಂದು ಸಿದ್ದರಾಮಯ್ಯ ಚರ್ಚೆಯ ವೇಳೆ ಸವಾಲು ಹಾಕಿದರು.

ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆ ಮಾತಾಡಿಲ್ಲ!ಇಲ್ಲಪ್ಪಾ ಮಣಿಪಾಲ್ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಜೊತೆ ಮಾತಾಡಿಲ್ಲ!

ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ಆಗಬೇಕು. ಅದಕ್ಕೆ ಅದಕ್ಕೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿರು.

'ಯಡಿಯೂರಪ್ಪ ಆಪರೇಷನ್ ಕಮಲ ಜನಕ'

'ಯಡಿಯೂರಪ್ಪ ಆಪರೇಷನ್ ಕಮಲ ಜನಕ'

ಒಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ ಮತ್ತೆ 6 ತಿಂಗಳ ವರೆಗೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಇಲ್ಲ ಎಂಬ ಪರಿಜ್ಞಾನ ನಮಗಿದೆ. ವಿಪಕ್ಷಗಳಷ್ಟೇ ಅಲ್ಲ ಆಡಳಿತ ಪಕ್ಷದ ಸದಸ್ಯರಿಗೂ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿವೆ. ಸರ್ಕಾರ ಕೊರೊನಾ ಸೊಂಕು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ನಡೀತಿದೆ. ಕೊರೊನಾ ಕಾಲದ ಮೆಡಿಕಲ್ ಕಿಟ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಿಎಂ ಯಡಿಯೂರಪ್ಪ ಅವರ ಸರ್ಕಾರ ಜನ ಬೆಂಬಲದಿಂದ ಬಂದಿಲ್ಲ. ಜನ ಆಶೀರ್ವಾದ ಮಾಡಿದ ಸರ್ಕಾರ ಇದಲ್ಲ. ಇದು ಆಪರೇಷನ್ ಕಮಲದ ಮೂಲಕ ಬಂದಿರುವ ಸರ್ಕಾರ. ಯಡಿಯೂರಪ್ಪ ಆಪರೇಷನ್ ಕಮಲದ ಜನಕರು ಎಂದು ಆರೋಪಿಸಿದರು.

Recommended Video

TATA company ಇಂದ ಶಾಪೂರ್ಜಿ ಪಲ್ಲೊಂಜಿ OUT | Oneindia Kannada
SDPI ನಿಷೇಧ ಮಾಡಿಲ್ಲ ಯಾಕೆ?

SDPI ನಿಷೇಧ ಮಾಡಿಲ್ಲ ಯಾಕೆ?

ಸರ್ಕಾರ ಕಾನೂನು ಸುವ್ಯಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಡಿ.ಜಿ ಹಳ್ಳಿ, ಕೆ.ಜಿ ಹಳ್ಳಿ ಗಲಭೆಗೆ ಪೊಲೀಸರ ನಿರ್ಲಕ್ಷ ಕಾರಣ. ಗಲಭೆಗೆ ನವೀನ್ ಪೊಸ್ಟ್ ಕಾರಣ. ನವೀನ್ ಬಿಜೆಪಿ, RSS ಕಾರ್ಯಕರ್ತ ಎಂದು ಸಿದ್ದರಾಮ್ಯ ಹೇಳಿದರು. ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಶಾಸಕ ಜಮೀರ್ ಅಹಮದ್ ಅವರು ಧ್ವನಿಗೂಡಿಸಿದರು. ಸಿದ್ದರಾಮಯ್ಯ ಹಾಗೂ ಜಮೀರ್ ಅಹಮ್ಮದ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.

ಯಾಕೆ SDPI ನಿಷೇಧ ಮಾಡಲಿಲ್ಲ? ನಿಷೇಧಕ್ಕೆ ಯಾಕೆ ಶಿಫಾರಸು ಮಾಡಿಲ್ಲ? ಸೂಕ್ತ ದಾಖಲೆ ಇದ್ದರೆ ಯಾಕೆ ನಿಷೇಧ ಮಾಡಲಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

English summary
After a long debate, Chief Minister B.S. Yediyurappa has shown confidence in the assembly. The Opposition Congress motion against the government was rejected by a voice vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X