ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರೇಸಂದ್ರ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಸಾವು

By Srinath
|
Google Oneindia Kannada News

Chickballapur Peresandra Morarji Desai Residential School student Salauddin killed
ಚಿಕ್ಕಬಳ್ಳಾಪುರ, ಡಿ. 21: ಊಟದ ವಿಷಯದಲ್ಲಿ ಉಂಟಾದ ವೈಮನಸ್ಯ ಅತಿರೇಕಕ್ಕೆ ತಿರುಗಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಬಾಗೇಪಲ್ಲಿ ರಸ್ತೆಯ ಪೆರೇಸಂದ್ರದ ಸಮೀಪವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 14 ವರ್ಷದ ಮೊಹಮದ್ ಸನಾವುಲ್ಲಾ ಮೃತಪಟ್ಟ ಬಾಲಕ. ನಿನ್ನೆ ರಾತ್ರಿ ಊಟದ ವೇಳೆ ಸಹಪಾಠಿಗಳ ಮಧ್ಯೆ ಜಗಳ ನಡೆದಿದೆ. 8ನೇ ತರಗತಿಯ ಸಲಾವುದ್ದೀನ್ ತಲೆ ಗೋಡೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಆದರೆ 'ಚೆಂಡಾಟವಾಗುತ್ತಿದ್ದಾಗ ಇಬ್ಬರು ಬಾಲಕರ ಮಧ್ಯೆ ನಡೆದ ಆಕಸ್ಮಿಕದಲ್ಲಿ ಈ ದುರಂತ ನಡೆದಿದೆ' ಎಂದು ಮೊರಾರ್ಜಿ ವಸತಿ ಶಾಲೆಯ ವಾರ್ಡನ್ ಮಂಜುನಾಥ್ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲೆಯ ಉನ್ನತಾಧಿಕಾರಿಗಳು ಆಗಮಿಸಿದ್ದು, ವಿಚಾರಣೆ ನಡೆಸಿದ್ದಾರೆ. visit Morarji Desai Residential School

English summary
Chickballapur Peresandra Morarji Desai Residential School student Salauddin killed on Friday night during a quarrel with classmate. student Salauddin's head banged on to the wall and he collapsed on the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X