ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜನ್‌ಗೆ ಮಂಡ್ಯ ವಿಳಾಸದ ಪಾಸ್‌ಪೋರ್ಟ್ ಸಿಕ್ಕ ಬಗ್ಗೆ ತನಿಖೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 18 : ಭೂಗತ ಪಾತಕಿ ಛೋಟಾ ರಾಜನ್‌ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ರಾಜನ್‌ಗೆ ಕರ್ನಾಟಕದ ವಿಳಾಸದಲ್ಲಿ ಹೇಗೆ ಪಾಸ್‌ಪೋರ್ಟ್ ನೀಡಲಾಯಿತು? ಎಂದು ಅಧಿಕಾರಿಗಳು ವಿವರ ಸಂಗ್ರಹಿಸಲಿದ್ದಾರೆ.

ಕರ್ನಾಟಕಕ್ಕೆ ಆಗಮಿಸುವ ಸಿಬಿಐ ಅಧಿಕಾರಿಗಳು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. 2003ರಲ್ಲಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ರಾಜನ್‌ಗೆ ಪಾಸ್‌ಪೋರ್ಟ್ ನೀಡಲಾಗಿದ್ದು, ಅದರಲ್ಲಿ ಮಂಡ್ಯ ವಿಳಾಸವಿದೆ. [ಭಾರತಕ್ಕೆ ಬಂದ ಛೋಟಾ ರಾಜನ್]

chhota rajan

ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆತಂದ ಬಳಿಕ ಆತನ ವಿರುದ್ಧ ಪಾಸ್‌ಪೋರ್ಟ್ ಕಾಯ್ದೆ 1967ರ ಪ್ರಕಾರ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾಸ್‌ಪೋರ್ಟ್ ನೀಡಿರುವ ಅಧಿಕಾರಿಗಳ ತಪ್ಪು ಸಾಬೀತಾದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. [ಛೋಟಾ ರಾಜನ್ ಬಂಧನ]

ಮಂಡ್ಯದ ವಿಳಾಸ : ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ ಹೊಂದಿರುವ ಪಾಸ್‌ಪೋರ್ಟ್ ನಂಬರ್ G9273860. ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಇದನ್ನು ಆತ ಹೊಂದಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯ ವಿಳಾಸವಿದೆ. [ಸಂದರ್ಶನ : ಛೋಟಾ ರಾಜನ್ ಬಂಧನ ಕೇವಲ ಆಕಸ್ಮಿಕ]

ಮೋಹನ್ ಕುಮಾರ್, 107/ಬಿ, ಓಲ್ಡ್ ಎಂ.ಸಿ.ರಸ್ತೆ, ಆಜಾದ್ ನಗರ, ಮಂಡ್ಯ, ಕರ್ನಾಟಕ ವಿಳಾಸ ಪಾಸ್‌ಪೋರ್ಟ್‌ನಲ್ಲಿದೆ. ಈ ಪಾಸ್‌ಪೋರ್ಟ್ ಹೇಗೆ ಪಡೆಯಲಾಯಿತು? ಎಂಬ ಬಗ್ಗೆ ರಾಜನ್ ಹೆಚ್ಚಿನ ಮಾಹಿತಿ ನೀಡಿಲ್ಲ.

ಮಂಡ್ಯಕ್ಕೆ ಆಗಮಿಸುವ ಅಧಿಕಾರಿಗಳು ಪಾಸ್‌ಪೋರ್ಟ್ ನೀಡುವಾಗ ವಿಳಾಸ ಪರಿಶೀಲನೆ ನಡೆಸಲಾಯಿತೇ?. ಪಾಸ್‌ಪೋರ್ಟ್ ಸಿದ್ಧಪಡಿಸಿದ ಅಧಿಕಾರಿಗಳು ರಾಜನ್ ಜೊತೆ ಸಂಪರ್ಕ ಹೊಂದಿದ್ದರೆ ಎಂದು ತನಿಖೆ ನಡೆಸಲಿದ್ದಾರೆ.

English summary
A team of the Central Bureau of Investigation is likely to visit Karnataka to question officials on the issue relating to the passport of underworld don, Chhota Rajan. The CBI team will seek details on how the passport had been issued with a Karnataka address.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X