ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟ್ಯಾಂತರ ರೂಪಾಯಿ ವಂಚನೆ; ಸಚಿವ ಶ್ರೀರಾಮುಲು ಪಿಎ ಬಂಧನ

|
Google Oneindia Kannada News

ಬೆಂಗಳೂರು, ಜುಲೈ 01; ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪಿಎ ರಾಜಣ್ಣ ಎಂಬುವವರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಚಿವರು, ಸಿಎಂ ಕಚೇರಿ ಹೆಸರಿನಲ್ಲಿ ಹಲವರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಸಚಿವ ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ವಿಜಯೇಂದ್ರ ಈ ಕುರಿತು ದೂರು ನೀಡಿದ್ದರು.

ವಿದೇಶದಲ್ಲಿ ಕೆಲಸದ ಆಸೆ ತೋರಿಸಿ ನಿರುದ್ಯೋಗಿ ಯುವಕರಿಗೆ ವಂಚನೆವಿದೇಶದಲ್ಲಿ ಕೆಲಸದ ಆಸೆ ತೋರಿಸಿ ನಿರುದ್ಯೋಗಿ ಯುವಕರಿಗೆ ವಂಚನೆ

ಎರಡು ದಿನಗಳ ಹಿಂದೆ ರಾಜಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬೆಂಗಳೂರಿನಲ್ಲಿ ಗುರುವಾರ ಸಚಿವ ಶ್ರೀರಾಮುಲು ನಿವಾಸದ ಸಮೀಪವೇ ರಾಜಣ್ಣ ಬಂಧಿಸಲಾಗಿದೆ. ಪೊಲೀಸರು ಬಂಧಿಸಲು ಹೋದಾಗ ರಾಜಣ್ಣ ಹೈಡ್ರಾಮವನ್ನೂ ನಡೆಸಿದ್ದಾರೆ.

ವಶಿಷ್ಠ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್‌ನಿಂದ 430 ಕೋಟಿ ರೂ. ವಂಚನೆ! ವಶಿಷ್ಠ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್‌ನಿಂದ 430 ಕೋಟಿ ರೂ. ವಂಚನೆ!

Cheating Case Minister Sriramulu PA Arrested By CCB

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲುಗೆ ಕುಟುಂಬದ ಜೊತೆ ಹಲವು ವರ್ಷಗಳಿಂದ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಶ್ರೀರಾಮುಲು ಸಚಿವರಾಗಿದ್ದಾಗಲೂ ಪಿಎ ಆಗಿದ್ದರು.

ಐಸಿಯು ಬೆಡ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದವ ಬಂಧನ ಐಸಿಯು ಬೆಡ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದವ ಬಂಧನ

ಕೆಲಸದ ಆಮಿಷ, ವರ್ಗಾವಣೆ ಭರವಸೆ ನೀಡಿ ಹಲವರಿಂದ ಹಣವನ್ನು ಪಡೆದು ರಾಜಣ್ಣ ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಈ ಮೊದಲು ರಾಜಣ್ಣ ಜನಾರ್ದನ ರೆಡ್ಡಿ ಆರಂಭಿಸಿದ್ದ ಎನೋಬಲ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು.

ಬಳ್ಳಾರಿಯಲ್ಲಿ ರಾಜಣ್ಣ ಕುಡಿಯುವ ನೀರಿನ ಬಾಟಲ್ ಪ್ಲಾಂಟ್ ಮತ್ತು ಮೊಬೈಲ್ ಶಾಪ್‌ಗಳನ್ನು ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ವಂಚನೆ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

35 ವರ್ಷದ ರಾಜು ಅಲಿಯಾಸ್ ರಾಜಣ್ಣ ಬಿ. ವೈ. ವಿಜಯೇಂದ್ರ ತನಗೆ ಆಪ್ತರೆಂದು ಹೇಳಿಕೊಳ್ಳುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರ ಬಳಿ ಕೆಲವೇ ದಿನಗಳ ಹಿಂದೆ ಹಣ ಪಡೆದಿದ್ದರು.

ವರ್ಗಾವಣೆ ಮಾಡಿಸಿಕೊಡುವುದಾಗಿ ಹಲವಾರು ಅಧಿಕಾರಿಗಳ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪ ಸಹ ಇದೆ. ಉದ್ಯಮಿಯೊಬ್ಬರ ಜೊತೆ ರಾಜಣ್ಣ ನಡೆಸಿದ ಮಾತುಕತೆಯ ಆಡಿಯೋ ಕೆಲವು ದಿನಗಳ ಹಿಂದೆ ಲೀಕ್ ಆಗಿತ್ತು.

Recommended Video

ಭಾರತ ಇಂಗ್ಲೆಂಡ್ ವಿರುದ್ಧ ಯಾವ ಆರಂಭಿಕರನ್ನ ಕಣಕ್ಕಿಳಿಸಿದೆ | Oneindia Kannada

ವಿಜಯೇಂದ್ರ ಮೂಲಕವೇ ನಿಮಗೆ ಹಣ ಕೊಡಿಸುತ್ತೇನೆ ಎಂದು ಆಡಿಯೋದಲ್ಲಿ ಹೇಳಿದ್ದರು. ಇದನ್ನು ನಂಬಿದ್ದ ಉದ್ಯಮಿ ಹಣವನ್ನು ಸಹ ನೀಡಿದ್ದರು. ಇದು ವಿಜಯೇಂದ್ರ ಗಮನಕ್ಕೆ ಬಂದ ಬಳಿಕ ದೂರನ್ನು ನೀಡಲಾಗಿತ್ತು.

English summary
CCB police arrested social welfare minister B. Sriramulu personal assistant Rajanna in connection with the cheating case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X