ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕಪುರ, ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ವಿಚಾರಕ್ಕೆ ಮಾತಿನ ಚಕಮಕಿ

|
Google Oneindia Kannada News

ರಾಮನಗರ, ಮಾರ್ಚ್ 04 : ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಡೆದ ಸಭೆಯಲ್ಲಿ ಗೊಂದಲ ಉಂಟಾಗಿದೆ. ಎರಡೂ ಕ್ಷೇತ್ರಗಳ ಕಾಯಕರ್ತರು ಪಕ್ಷದ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿಯೇ ಮಾತಿನ ಚಕಮಕಿ ನಡೆಸಿದರು.

ಶನಿವಾರ ಬಿಡದಿಯ ಮ್ಯಾಗ್ನೋಲಿಯಾ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲು ಸಭೆ ನಡೆಯಿತು. ಮೊದಲು ಕನಕಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವನ್ನ ತೆಗೆದುಕೊಂಡ ತಕ್ಷಣವೇ ಕಾರ್ಯಕರ್ತರು ಗದ್ದಲವನ್ನು ಮಾಡಿದರು.

ಕ್ಷೇತ್ರ ಪರಿಚಯ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಲಗಾಮು ಹಾಕುವವರಾರು?ಕ್ಷೇತ್ರ ಪರಿಚಯ: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆ ಲಗಾಮು ಹಾಕುವವರಾರು?

ಸಂಭಾವನೀಯ ಅಭ್ಯರ್ಥಿ ಡಿ.ಎಂ.ವಿಶ್ವನಾಥ್ ಹೆಸರು ಘೋಷಿಸುವಂತೆ ಬೆಂಬಲಿಗರು ವೇದಿಕೆಯನ್ನೇರಿ ಮಾತಿನ ಚಕಮಕಿ ನಡೆಸಿದರು. ಈ ವೇಳೆ ದೇವೇಗೌಡರು ಕಾರ್ಯಕರ್ತರ ವಿರುದ್ದ 'ನಿಮಗೆ ಮಾನ ಮರ್ಯಾದೆ ಇದ್ಯಾ?' ಎಂದು ಗದರಿದರು.

Channapatna, Kanakapura JDS candidates announced on March 6

ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಸಹ ಅನಿತಾ ಕುಮಾರಸ್ವಾಮಿ ಹಾಗೂ ಎಚ್.ಸಿ ಜಯಮುತ್ತು ಬೆಂಬಲಿಗರು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಕಾರ್ಯಕರ್ತರೆಲ್ಲರೂ ಅಲ್ಲದೇ ಸ್ವತಃ ಜಯಮುತ್ತು ಸಹ ಅನಿತಾ ಕುಮಾರಸ್ವಾಮಿಯವರನ್ನೇ ಅಭ್ಯರ್ಥಿಯಾಗಿ ಘೋಷಿಸುವಂತೆ ಮನವಿ ಮಾಡಿದರು.

ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?

ಬಳಿಕ ಮಾತನಾಡಿದ ವರಿಷ್ಠ ಎಚ್.ಡಿ ದೇವೇಗೌಡರು, 'ಇದೇ ತಿಂಗಳ 6ನೇ ತಾರೀಕು ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಅಲ್ಲಿ ಎರಡೂ ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಷಣೆ ಮಾಡುವುದಾಗಿ ತಿಳಿಸಿದರು'.

'ಮಾಧ್ಯಮದವರು ಜೆಡಿಎಸ್ ಪಕ್ಷವನ್ನ ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರವಾಗಿ ಎಚ್.ಡಿ.ಕೆ ಅವರಿಗೆ ಮಾಧ್ಯಮದವರ ಮೇಲೆ ನೋವಿದೆ' ಎಂದು ಮಾಧ್ಯಮದವರ ವಿರುದ್ದ ಗುಡುಗಿದರು.

ಚನ್ನಪಟ್ಟಣ ಟಿಕೆಟ್ ಬಯಸಿರುವ ಡಿಕೆಶಿ ಬಾವ ಶರತ್ ಚಂದ್ರಚನ್ನಪಟ್ಟಣ ಟಿಕೆಟ್ ಬಯಸಿರುವ ಡಿಕೆಶಿ ಬಾವ ಶರತ್ ಚಂದ್ರ

English summary
JD(S) supremo H.D.Deve Gowda said that, Channapatna and Kanakapura assembly constituency party candidates will be announced on March 6 for Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X