ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲು ಬಾಯಿ ಜ್ವರ: JDS ಪಾದಯಾತ್ರೆ ಪರಿಹಾರ ವಿತರಣೆ

By ರಾಜೇಶ್ ಕೊಂಡಾಪುರ
|
Google Oneindia Kannada News

ಚನ್ನಪಟ್ಟಣ, ಅಕ್ಟೋಬರ್ 9: ರೈತರ ಜೀವನಾಧಾರವಾಗಿರುವ ಜಾನುವಾರುಗಳು ಕಾಲು ಬಾಯಿ ಜ್ವರದಿಂದ ಸಾವಿಗೀಡಾಗುತ್ತಿದ್ದು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಾಲೂಕಿನಲ್ಲಿ ಮಾಕಳಿ, ಕೋಟಮಾರನಹಳ್ಳಿ, ತಿಟ್ಟಮಾರನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಜ್ಚರದಿಂದ ಮೃತಪಟ್ಟ ರಾಸುಗಳ ಮಾಲೀಕರಿಗೆ ತಮ್ಮ JDS ಪಕ್ಷದ ವತಿಯಿಂದ 5 ಸಾವಿರ ರೂ ಪರಿಹಾರದ ಚೆಕ್ ನೀಡಿದ ಬಳಿಕ ಅವರು ಮಾತನಾಡಿದರು.

Channapatna cattle foot-and-mouth disease- JDS padayatra- HD Kumaraswamy,

ಸರಕಾರ ಮೃತಪಟ್ಟ ರಾಸುಗಳ ಮಾಲೀಕರಿಗೆ 30 ಸಾವಿರ ಪರಿಹಾರ ನೀಡಬೇಕು. ಜತಗೆ ಅವುಗಳನ್ನು ಸಾಕಲು ಸಾಲ ಮಾಡಿರುವ ರೈತರ ಸಾಲಮನ್ನ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಲು ತಾವು ಸಿದ್ದವಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ರೈತಪರ, ಜನಪರ ಆಡಳಿತ ನೀಡುತ್ತೆವೆ ಎಂದು ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ ರೈತರ ಗೋಳು, ಬವಣೆ ಕೇಳುವ ಬದಲು ಅಧಿಕಾರದ ನಿಶೆಯಲ್ಲಿ ತೇಲಾಡುತ್ತಾ ರೈತರ ಕಷ್ಟವನ್ನು ಕೇಳುವ ಸೌಜನ್ಯ ಸಹ ಮಾಡದಿರುವುದು ನಮ್ಮೆಲ್ಲರ ದುರ್ದೈವವಾಗಿದ್ದು, ಬಿಟ್ಟಿ ಪ್ರಚಾರಕ್ಕಾಗಿ ಬಂದು ಒಂದೆರಡು ಗ್ರಾಮಗಳಿಗೆ ಭೇಟಿ ನೀಡಿ ಹೋದಾಕ್ಷಣ ಸಮಸ್ಯೆ ಬಗೆಹರಿಯುತ್ತದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಜೀವನಾಧಾರವಾಗಿರುವ ರಾಸುಗಳು ಕಾಲು ಬಾಯಿ ಜ್ವರದಿಂದ ಸಾವಿಗಿಡಾಗುತ್ತಿದ್ದು, ಸರ್ಕಾರ ಈ ಬಗ್ಗೆ ಮೌನವಹಿಸಿದ್ದು ರೈತರಿಗೆ ಅ. 15 ರೊಳಗೆ ಸೂಕ್ತ ಪರಿಹಾರವನ್ನು ಘೋಷಿಸಿದೇ ಇದ್ದಲ್ಲಿ ಜೆಡಿಎಸ್ ವತಿಯಿಂದ ಶ್ರೀರಂಗಪಟ್ಟಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಹಮ್ಮಿಕೊಳ್ಳುವುದಾಗಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಸ್ ಲಿಂಗೇಶ್‌ ಕುಮಾರ್, ಜಿಪಂ ಸದಸ್ಯ ರಘುಕುಮಾರ್, ತಾಪಂ ಸದಸ್ಯ ಗುರುಕುಮಾರ್, ಹಾಲು ಒಕ್ಕೂಟ್ಟದ ಡಾ. ಕೆ.ಸಿ. ಶ್ರೀಧರ್, ವಡ್ಡರಹಳ್ಳಿ ರಾಜಣ್ಣ, ಸತ್ಯನಾರಾಯಣ, ನಾಗವಾರ ರಂಗಸ್ವಾಮಿ ಹಾಜರಿದ್ದರು.

English summary
Channapatna cattle foot-and-mouth disease- JDS padayatra- HD Kumaraswamy. Sofar Foot-and-mouth disease claimed over 500 cattle in Karnataka. But the Congress govt has not taken any steps to cintrol the disease. Neither the govt assisted the affected farmers- claims Leader of Opposition HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X