ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ

|
Google Oneindia Kannada News

ಬೆಂಗಳೂರು, ಮೇ 11: ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ಯೋಜನೆ ಜುಲೈ 9-16ರ ಅವಧಿಯಲ್ಲಿ ಉಡಾವಣೆಯಾಗಲಿದ್ದು, ಇದರಲ್ಲಿ 14 ಅಧ್ಯಯನ ಉಪಕರಣಗಳನ್ನು ರವಾನಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಕ್ಷಾಗಾಮಿ ಒಳಗೊಂಡಿರುವ 3,800 ಕೆಜಿ ತೂಕದ ನೌಕೆ, ಚಂದ್ರನಿಂದ 100 ಕಿ.ಮೀ ದೂರದಲ್ಲಿ ಸುತ್ತುಹಾಕಲಿದೆ. ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 6ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಗ್ಯಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ: EMISAT ಸೇರಿ 29 ಉಪಗ್ರಹಗಳ ಉಡಾವಣೆ

ಮೂರೂ ಸಾಧನಗಳು ಅಧ್ಯಯನ ಉಪಕರಣಗಳನ್ನು ಕೊಂಡೊಯ್ಯಲಿವೆ ಎಂದು ಇಸ್ರೋ ತಿಳಿಸಿದೆ. ಆದರೆ, ಅವುಗಳ ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಕಕ್ಷಾಗಾಮಿಯೊಂದೇ ಎಂಟು ಅಧ್ಯಯನ ಉಪಕರಣಗಳನ್ನು ಹೊತ್ತೊಯ್ಯಲಿದೆ. ಗ್ರಹನೌಕೆಯು ನಾಲ್ಕು ಮತ್ತು ರೋವರ್ ಎರಡು ಉಪಕರಣಗಳನ್ನು ಸಾಗಿಸಲಿವೆ. ಈ ಎಲ್ಲ ಸಾಧನಗಳೂ ಚಂದ್ರಯಾನ-2ರ ಉಡಾವಣೆಗೆ ಸಜ್ಜುಗೊಳ್ಳುತ್ತಿವೆ ಎಂದು ಅದು ವಿವರಿಸಿದೆ.

chandrayaan-2 lunar lander mission isro 14 indian playloads to be launched during july 9-16

ಇದುವರೆಗೂ ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ.

ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ

ಚಂದ್ರಯಾನ-2, ಚಂದ್ರ ಉಪಗ್ರಹದಲ್ಲಿ ಭಾರತದ ಎರಡನೆಯ ಅಧ್ಯಯನವಾಗಲಿದೆ. ಶ್ರೀಹರಿಕೋಟಾದಿಂದ ಅತ್ಯಂತ ತೂಕವನ್ನು ಹೊರಬಲ್ಲ MkIII ರಾಕೆಟ್ ಮೂಲಕ ಈ ನೌಕೆಯನ್ನು ಉಡಾವಣೆ ಮಾಡಲಾಗುವುದು.

ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ

2008ರ ಅಕ್ಟೋಬರ್‌ನಲ್ಲಿ ಇಸ್ರೋ ತನ್ನ ಮೊದಲ ಯೋಜನೆ ಚಂದ್ರಯಾನ-1ಅನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿತ್ತು. ಅದರಲ್ಲಿ 11 ಅಧ್ಯಯನ ಉಪಕರಣಗಳಿದ್ದವು. ಅಮೆರಿಕದ ಒಂದು ಅಧ್ಯಯನ ಉಪಕರಣವನ್ನೂ ಇದು ಒಳಗೊಂಡಿತ್ತು. ಈ ನೌಕೆಯು ಚಂದ್ರನಲ್ಲಿ ಹಿಮದ ನೀರು ಇರುವುದನ್ನು ಖಚಿತಪಡಿಸಿತ್ತು.

English summary
Chandrayaan-2 planned to be launched during July 9-16. It will have 14 playloads, ISRO has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X