ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ಚಕ್ರವ್ಯೂಹ: ಮಹತ್ವದ ಕ್ಷೇತ್ರದ ಹಿನ್ನೋಟ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

Karnataka Elections 2018 : ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಕ್ಷೇತ್ರದ ಹಿನ್ನೋಟ | Oneindia Kannada

ಮೈಸೂರು, ಏಪ್ರಿಲ್ 6 : ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಹೆಸರಿನ ವಿಧಾನಸಭಾ ಕ್ಷೇತ್ರ ತಾಲ್ಲೂಕು ಹಾಗೂ ನಗರದ ಹೊರವಲಯದ ನೂತನ ಬಡಾವಣೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ.

11 ಬಾರಿ ತಂದೆ - ಮಗ ಗೆದ್ದ ನರಸಿಂಹರಾಜ ಕ್ಷೇತ್ರದ ಹಿನ್ನೋಟ!11 ಬಾರಿ ತಂದೆ - ಮಗ ಗೆದ್ದ ನರಸಿಂಹರಾಜ ಕ್ಷೇತ್ರದ ಹಿನ್ನೋಟ!

ಕ್ಷೇತ್ರ ಪುನರ್ ವಿಂಗಡಣೆಯ ನಂತರ ವರುಣ ವಿಧಾನಸಭಾ ಕ್ಷೇತಕ್ಕೆ ಕೆಲವು ಪ್ರದೇಶಗಳು ಸೇರಿಕೊಂಡವು. ಇದರ ಜತೆಗೆ ನಗರದ ಹೊಸ ಬಡಾವಣೆಗಳು ಇದರ ತೆಕ್ಕೆಗೆ ಬಂದವು. ಜಿಲ್ಲೆಯಲ್ಲಿ ಅತಿದೊಡ್ಡ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ಕ್ಷೇತ್ರ 2,89,111 ಮಂದಿ ಮತದಾರರನ್ನು ಹೊಂದಿದೆ. ಇದರಲ್ಲಿ 1,46,593 ಪುರುಷರು ಹಾಗೂ 1,42,518 ಮಹಿಳೆಯರೂ ಸೇರಿದ್ದಾರೆ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಈ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು, ಸುಮಾರು 65 ಸಾವಿರ ಮತದಾರರಿದ್ದಾರೆ. ವಿಶಿಷ್ಟ ಜಾತಿಯ 45 ಸಾವಿರ, ಪರಿಶಿಷ್ಟ ಪಂಗಡದ 30, ಕುರುಬ ಸಮುದಾಯದವರು 35, ವೀರಶೈವ - ಲಿಂಗಾಯಿತರು 35, ಬ್ರಾಹ್ಮಣರು 15, ವಿಶ್ವಕರ್ಮ ಸಮುದಾಯದ 15 ಸಾವಿರ ಮತದಾರರಿದಮದ್ದಾರೆ, ಅಲ್ಲದೇ ಕೊಡವ, ಕುಂಬಾರ, ಮುಸ್ಲಿಂ, ಕ್ರಿಶ್ಚಿಯನ್ ಮತದಾರರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಸಿದ್ದರಾಮಯ್ಯ್ ಅವರಿಗೆ ಪುನರ್ಜನ್ಮ ನೀಡಿದ ಕ್ಷೇತ್ರ

ಸಿದ್ದರಾಮಯ್ಯ್ ಅವರಿಗೆ ಪುನರ್ಜನ್ಮ ನೀಡಿದ ಕ್ಷೇತ್ರ

ರಾಜ್ಯ ರಾಜಕಾರಣದ ಶಕ್ತಿ ಕೇಂದ್ರಕ್ಕೆ ಮೂವರು ಪ್ರಭಾವಿ ವ್ಯಕ್ತಿಗಳನ್ನು ನೀಡಿದ ಕ್ಷೇತ್ರ ಉಪಚುನಾವಣೆಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಾತ್ಯತೀತ ಜನತಾದಳ ತೊರೆದು, ಕಾಂಗ್ರೆಸ್ ಪಕ್ಷ ಸೇರಿದ ನಂತರ ನಡೆದ 2006 ರ ಉಪಚುನಾವಣೆಯಲ್ಲಿ ಈ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಇತಿಹಾಸ. ಈ ಚುನಾವಣೆ ಅನೇಕ ದಾಖಲೆಗಳನ್ನು ಸೃಷ್ಟಿಸಿತು. ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಪುಟ್ಟಸ್ವಾಮಿ, ಹಣಕಾಸು ಸಚಿವರಾಗಿದ್ದ ಎಂ.ರಾಜಶೇಖರಮೂರ್ತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರಾಗಿದ್ದಾರೆ.

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟ ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟ

ಕ್ಷೇತ್ರದ ಉದಯ

ಕ್ಷೇತ್ರದ ಉದಯ

ಚಾಮುಂಡೇಶ್ವರಿ ಕ್ಷೇತ್ರ 1967ರಲ್ಲಿ ಉದಯವಾಯಿತು. ಅಲ್ಲಿಯವರೆಗೆ ಮೈಸೂರು ನಗರ, ಮೈಸೂರು ನಗರ ಉತ್ತರ ಹಾಗೂ ಬಿಳಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಂಚಿಹೋಗಿತ್ತು. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಿನ ಚಾಮರಾಜ ಕ್ಷೇತ್ರದ ಹಲವು ಪ್ರದೇಶಗಳು ಸೇರಿದ್ದವು. 1978 ರಲ್ಲಿ ಚಾಮರಾಜ ಕ್ಷೇತ್ರ, ಚಾಮುಂಡೇಶ್ವರಿಯಿಂದ ಬೇರ್ಪಟ್ಟಿತು. 1967ರಲ್ಲಿ ಅಸ್ತಿತ್ವಕ್ಕೆ ಬಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಂದಿನ ಮೈಸೂರು ಭಾಗದ ಪ್ರಭಾವಿ ನಾಯಕ ಕೆ.ಪುಟ್ಟಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಎಸ್.ನಿಜಲಿಂಗಪ್ಪ ಸಂಪುಟದಲ್ಲಿ ಸಚಿವರಾದರು. ಮತ್ತೆ 1972ರಲ್ಲಿ ಪುನರಾಯ್ಕೆಯಾಗಿ ವೀರೇಂದ್ರ ಪಾಟೀಲ್ ಅವರ ಸಂಪುಟದಲ್ಲಿ ಸ್ಥಾನ ಪಡೆದರು.1978ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಜಯ ದೇವರಾಜ ಅರಸು ಕಾಂಗ್ರೆಸ್ಸ್(ಐ) ಅಭ್ಯರ್ಥಿಯಾಗಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಪಭಾವಿ ನಾಯಕ ಎಂ.ರಾಜಶೇಖರ ಮೂರ್ತಿ ಅವರನ್ನು ಪರಾಭವಗೊಳಿಸಿದರು. ಡಿ.ದೇವರಾಜ ಅರಸು ಅವರು ಮುಖ್ಯಮಂತಿಯಾಗಿದ್ದ ಅವಧಿಯಲ್ಲಿ ಜಯದೇವರಾಜ ಅರಸು, ಮೈಸೂರಿನ ಮುಖ್ಯಮಂತ್ರಿ ಎಂದೇ ಪ್ರಭಾವಿಯಾಗಿದ್ದರು.

1989 ರಲ್ಲಿ ಸೋತಿದ್ದ ಸಿದ್ದರಾಮಯ್ಯ

1989 ರಲ್ಲಿ ಸೋತಿದ್ದ ಸಿದ್ದರಾಮಯ್ಯ

ರಾಮಕೃಷ್ಣ ಹೆಗಡೆ ಅವರು ಮುಖ್ಯ ಮಂತ್ರಿಯಾಗಿದ್ದಾಗ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಿದ್ದರಾಮಯ್ಯ ಹಂತ ಹಂತವಾಗಿ ಮೇಲೇರಿದರು. ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸತತವಾಗಿ ಉಪ ಚುನಾವಣೆ ಸೇರಿ 7 ಬಾರಿ ಸ್ಪರ್ಧಿಸಿ 5 (1983, 1985, 1994, 2004, 2006) ಬಾರಿ ಆಯ್ಕೆಯಾಗಿದ್ದಾರೆ. 1989ರ ಚುನಾವಣೆಯಲ್ಲಿ ಎಂ.ರಾಜಶೇಖರ ಮೂರ್ತಿ ವಿರುದ್ಧ ಜನತಾದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಪರಾಭವಗೊಂಡರು. ವೀರೇಂದ್ರ ಪಾಟೀಲ್ ಸಂಪುಟದಲ್ಲಿ ರಾಜಶೇಖರಮೂರ್ತಿ ಹಣಕಾಸು ಹಾಗೂ ಅಬಕಾರಿ ಸಚಿವರಾದರು. 1994ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಭಾವ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು.

ಮತ್ತೆ ಗೆದ್ದ ಸಿದ್ದರಾಮಯ್ಯ

ಮತ್ತೆ ಗೆದ್ದ ಸಿದ್ದರಾಮಯ್ಯ

ಚಾಮುಂಡೇಶ್ವರಿಯಿಂದ ಮತ್ತೆ ಸಿದ್ದರಾಮಯ್ಯ ಸುಮಾರು 32 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಜಯಗಳಿಸಿದರು. ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಸಂಪುಟದಲ್ಲಿ ನಂ.2ನೇ ಸ್ಥಾನಕ್ಕೆ ಏರಿದರು. ನಂತರ ಜೆ.ಎಚ್.ಪಟೇಲ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾದರು. 1999ರ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಎ.ಎಸ್.ಗುರುಸ್ವಾಮಿ ಆಯ್ಕೆಯಾದರು. ಜಾ.ದಳದ ಸಿದ್ದರಾಮಯ್ಯ 50907, ಹಾಗೂ ಬಿಜೆಪಿಯ ಎಂ.ಅಪ್ಪಣ್ಣ 45855 ಮತ ಪಡೆದರು. 2004 ರಲ್ಲಿ ಪುನರಾಯ್ಕೆಯಾದ ಸಿದ್ದರಾಮಯ್ಯ ರಾಜ್ಯದ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಾಗೂ ಹಣಕಾಸು ಸಚಿವರಾಗಿ ನೇಮಕಗೊಂಡರು.

2008ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹೊಸದಾಗಿ ರಚನೆಗೊಂಡ ವರುಣ ವಿಧಾನಸಭಾ ಕ್ಷೇತ್ರ ಆಯ್ದುಕೊಂಡರು. ಇಲ್ಲಿಗೆ ಅವರೇ ಸೂಚಿಸಿದ ಎಂ.ಸತ್ಯನಾರಾಯಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ಈಗ ಮತ್ತೆ ಚಾಮುಂಡೇಶ್ವರಿಯಿಂದ ಸ್ಪರ್ಧೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈಗಾಗಲೇ ಕ್ಷೇತದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರದ ಯೋಜನೆಗಳ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ಜೆಡಿಎಸ್ ನಿಂದ ತೀವ್ರ ಪ್ರತಿಸ್ಪರ್ಧೆ?

ಜೆಡಿಎಸ್ ನಿಂದ ತೀವ್ರ ಪ್ರತಿಸ್ಪರ್ಧೆ?

ಆದರೆ ಈ ಬಾರಿ ಸಿದ್ದರಾಮಯ್ಯ ಅಂದುಕೊಂಡಷ್ಟು ಸುಲಭವಲ್ಲ ಚಾಮುಂಡೇಶ್ವರಿ ಕ್ಷೇತ್ರ. ಯಾಕಂದ್ರೆ 2006ರ ಚುನಾವಣೆಯಲ್ಲೇ ಕೇವಲ 256 ವೋಟ್​ಗಳಿಂದ ಸಿದ್ದರಾಮಯ್ಯ ತಿಣುಕಾಡಿ ಗೆದ್ದಿದ್ದರು. ಈಗ ಜೆಡಿಎಸ್​ನಿಂದ ಹಾಲಿ ಶಾಸಕ ಜಿ ಟಿ ದೇವೇಗೌಡ ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ. ಜಿ.ಟಿ. ದೇವೇಗೌಡರು ಪ್ರಬಲ ಪ್ರತಿ ಸ್ಪರ್ಧಿ ಆಗಿರುವುದರಿಂದ ಸಿಎಂಗೆ ಭಯ ಶುರುವಾದಂತಿದೆ.

ಇದೇ ಕಾರಣಕ್ಕೆ ಏನೋ ಸಿಎಂ ಸಿದ್ದರಾಮಯ್ಯ, ಜಿಟಿ ದೇವೇಗೌಡರ ಮೇಲೆ ಎಸಿಬಿ ಮೂಲಕ ಕೆಹೆಚ್​ಬಿ ಭೂಹಗರಣದ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಇದು ಕೂಡಾ ದೇವೇಗೌಡರನ್ನ ಕುಗ್ಗಿಸುವ ರಣತಂತ್ರ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಬಿಜೆಪಿಗೆ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಾ ಶಕ್ತಿ ಇಲ್ಲ. ಬಿಜೆಪಿಗೆ ಇಲ್ಲೂ ಕಾಮನ್ ಶತ್ರು ಸಿದ್ದರಾಮಯ್ಯ. ಕೊನೇ ಕ್ಷಣದಲ್ಲಿ ಬಿಜೆಪಿ ನಾಮಕಾವಸ್ಥೆಗೆ ಸ್ಪರ್ಧಿಸಿ, ಹಿಂಬಾಗಿಲಿನ ಮೂಲಕ ಜೆಡಿಎಸ್ ಬೆಂಬಲಿಸಲೂಬಹುದು. ಆದರೆ, ಏನೇ ಆಗಲಿ ಸಿದ್ದರಾಮಯ್ಯ ಸೋಲಿಸಿಯೇ ತೀರುವುದು ಅಂತಿದ್ದಾರೆ ಜಿಟಿ ದೇವೇಗೌಡ..

ಸಿದ್ದರಾಮಯ್ಯ ಸೋಲಿಸುವುದೇ ಗುರಿ!

ಸಿದ್ದರಾಮಯ್ಯ ಸೋಲಿಸುವುದೇ ಗುರಿ!

ಸಿದ್ದರಾಮಯ್ಯ ಸೋಲಿಸುವುದಕ್ಕೆ ಶ್ರೀನಿವಾಸ್​ ಪ್ರಸಾದ್ ಅಷ್ಟೇ ಅಲ್ಲ. ಅಲ್ಲಿನ ಸ್ಥಳೀಯ ನಾಯಕರುಗಳೂ ಸಿದ್ಧವಾಗಿದ್ದಾರಂತೆ. ಇದೆಲ್ಲ ಗೊತ್ತಿರುವ ಸಿದ್ದರಾಮಯ್ಯ , ಜೆಡಿಎಸ್​ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಜೆಡಿಎಸ್​ ಜೊತೆ ಗಲಾಟೆ ಮಾಡಿಕೊಳ್ಳಬೇಡಿ. ಚೆನ್ನಾಗಿರಿ ಅಂತಾ ಸೂಚನೆ ಕೊಟ್ಟಿದ್ದಾರೆ ಎಂಬ ಮಾತುಗಳೂ ಇವೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದರೆ ಚಾಮುಂಡೇಶ್ವರಿ ಚಕ್ರವ್ಯೂಹವನ್ನ ಹೇಗೆ ಬೇಧಿಸಿ ಗೆಲ್ತಾರೆ ಎನ್ನುವ ರಾಜಕೀಯ ಚರ್ಚೆ ಜೋರಾಗಿದೆ

ಇನ್ನು ಸಿಎಂ ಮುಂದೆ ಸ್ಪರ್ಧಿಸಲು ಇರುವ ಬಿಜೆಪಿ ನಾಯಕರು ಯಾರು ?
ಇತ್ತ ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿ ನಿರ್ಧಾರವಾಗಿಲ್ಲ. ಬಿಜೆಪಿಯಿಂದ ಪರಿಶಿಷ್ಟ ಪಂಗಡಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಅಪ್ಪಣ್ಣ, ಎಂ.ಎಸ್.ಧನಂಜಯ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರಲ್ಲದೆ ಹೇಮಂತಕುಮಾರ್ ಗೌಡ, ಅರುಣ್ ಗೌಡ ಮೊದಲಾದವರೂ ಆಕಾಂಕ್ಷಿಗಳಾಗಿದ್ದಾರೆ.

ಈ ಹಿಂದೆ ಗೆದ್ದವರು

ಈ ಹಿಂದೆ ಗೆದ್ದವರು

1967 - ಕೆ. ಪುಟ್ಟಸ್ವಾಮಿ - ಕಾಂಗ್ರೆಸ್ - 15721 ಮತಗಳು
1972 - ಕೆ. ಪುಟ್ಟಸ್ವಾಮಿ - ಕಾಂಗ್ರೆಸ್ - 20891 ಮತಗಳು
1978 - ಜಯದೇವರಾಜ ಅರಸು - ಕಾಂಗ್ರೆಸ್ (ಐ) 20,529 ಮತಗಳು
1983 - ಸಿದ್ದರಾಮಯ್ಯ - ಪಕ್ಷೇತರ - 26,614 ಮತಗಳು
1985 ಸಿದ್ದರಾಮಯ್ಯ - ಜನತಾ - 33,725 ಮತಗಳು
1989 - ಎಂ.ರಾಜಶೇಖರಮೂರ್ತಿ - ಕಾಂಗ್ರೆಸ್ - 42,892 ಮತಗಳು
1994 - ಸಿದ್ದರಾಮಯ್ಯ - ಜನತಾ - 76,823 ಮತಗಳು
1999 - ಎ.ಎಸ್.ಗರುಸ್ವಾಮಿ - ಕಾಂಗ್ರೆಸ್ - 57,107 ಮತಗಳು
2004 - ಸಿದ್ದರಾಮಯ್ಯ - ಜಾ.ದಳ - 90,727 ಮತಗಳು
2008- ಎಂ.¸ಸತ್ಯನಾರಾಯಣ - ಕಾಂಗ್ರೆಸ್ - 55,828 ಮತಗಳು
2013 - ಜಿ.ಟಿ.ದೇವೇಗೌಡ - ಜಾ.ದಳ - 75,864ಮತಗಳು

English summary
Karnataka assembly elections 2018: As Karnataka chief minister Siddaramaiah is contesting from thic constituency, Chamundeshwari has its own importance in Karnataka politics. Here is history and importance of the constituency which is in Mysuru district. JDS's G T Deve Gowda will contest against siddaramaiah here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X