ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಕ್ಕಲಿಗರ ಬಗ್ಗೆ ಮಾತಾಡಿ ಜಮೀರ್ ಎಡವಟ್ಟು ಮಾಡಿಕೊಂಡರೇ?

|
Google Oneindia Kannada News

ಬೆಂಗಳೂರು, ಜು. 25: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿ ವಿಚಾರದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್‌ರನ್ನು ಪದೇ ಪದೇ ಕೆಣಕುತ್ತಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಈ ಬಾರಿ ಒಕ್ಕಲಿಗ ಸಮುದಾಯವನ್ನು ಕೆಣಕಿ ಎಡವಟ್ಟು ಮಾಡಿಕೊಂಡಿದ್ದಾರೆ.

ಒಕ್ಕಲಿಗ ಸಮುದಾಯದ ಬಗ್ಗೆ ಜಮೀರ್ ನೀಡಿರುವ ಹೇಳಿಕೆ ಬಗ್ಗೆ ಒಕ್ಕಲಿಗ ಸಮುದಾಯದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಸಾಮಾಧಾನ ಹೊರ ಹಾಕಿದ್ದರು. ತಮ್ಮ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ ಜಮೀರ್ ಬಗ್ಗೆ ಸುಮ್ಮನಿರುವ ಒಕ್ಕಲಿಗ ನಾಯಕರ ಮೌನದ ಬಗ್ಗೆ ಪ್ರಸ್ತಪಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಚೆಲುವರಾಯಸ್ವಾಮಿ, ಡಿ. ಕೆ. ಶಿವಕುಮಾರ್, ಆರ್‌. ಅಶೋಕ ಜೊತೆ ದೂರವಾಣಿ ಮೂಲಕ ಸ್ವತಃ ಸ್ವಾಮೀಜಿಗಳೇ ನೇರವಾಗಿ ಮಾತನಾಡಿದ್ದು, ಅಸಮಾಧಾನ ತೋಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಒಕ್ಕಲಿಗ ಸಮುದಾಯದ ನಾಯಕರು ಜಮೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಸಿಎಂ ಹುದ್ದೆ ಅಲಂಕರಿಸಲು ಅರ್ಹರಲ್ಲ. ಒಕ್ಕಲಿಗ ಸಮುದಾಯ ನಂಬಿಕೊಂಡರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಒಕ್ಕಲಿಗ ಸಮುದಾಯಕ್ಕಿಂತಲೂ ಮುಸ್ಲಿಂಮರ ಮತಗಳು ಜಾಸ್ತಿ ಇವೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ ಎಂದು ಜಮೀರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಡಿಕೆ ಬಗ್ಗೆ ಮಾತ್ರವಲ್ಲದೇ ಒಕ್ಕಲಿಗ ಸಮುದಾಯದ ಬಗ್ಗೆ ಕೆಣಕಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

Chamrajpete MLA BZ Zameer Ahmed Khan controversy on Vokkaliga community

ಚೆಲುವರಾಯಸ್ವಾಮಿ ಟಾಂಗ್; ಡಿ. ಕೆ. ಶಿವಕುಮಾರ್‌ಗೆ ಟಾಂಗ್ ನೀಡುವ ಭರದಲ್ಲಿ ಒಕ್ಕಲಿಗ ಸಮುದಾಯದ ಅಸ್ಮಿತೆಗೆ ಧಕ್ಕೆ ತಂದ ಜಮೀರ್‌ಗೆ ಅವರ ಪರಮಾಪ್ತ ಚಲುವರಾಯ ಸ್ವಾಮಿ ಟಂಗ್ ಕೊಟ್ಟಿದ್ದಾರೆ, "ಅವನಿಗೆ ಹೇಳುತ್ತೇನೆ. ಅವನು ಸಿಟಿಯಲ್ಲಿ ಬೆಳೆದವ. ಬುದ್ದಿವಂತ. ನಾವು ಹಳ್ಳಿಯಲ್ಲಿ ಬೆಳೆದವರು. ನಾವು ದಡ್ಡರು. ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯಾಗಲಿ, ಒಕ್ಕಲಿಗ ಸಮುದಾಯಕ್ಕಿಂತ ಹೆಚ್ಚು ಮತಗಳಿವೆ ಎಂಬುದಕ್ಕೆ ಜಮೀರ್ ಬದ್ಧರಿದ್ದಾರಾ ?. ಇವೆಲ್ಲಾ ಬೇಡ ಅಂತ ಹೇಳಿದ್ದೀನಿ. ಈ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದೀನಿ ಅಂತ ಚೆಲುವರಾಯಸ್ವಾಮಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಿಕೊಳ್ಳಲಿ. ಅವರಿಗೆ ಅವರು ಬದ್ಧರಿರಬಹುದು. ಆದ್ರೆ, ಒಕ್ಕಲಿಗ ಸಮುದಾಯದ ಬಗ್ಗೆ ಪ್ರಶ್ನೆ ಎತ್ತುವಂತಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.

Chamrajpete MLA BZ Zameer Ahmed Khan controversy on Vokkaliga community

ಡಿಕೆ ಕೂಡ ಜಮೀರ್‌ಗೆ ಸೈಲೆಂಟ್ ವಾರ್ನಿಂಗ್: "ಅಲ್ಪ ಸಂಖ್ಯಾತ ಸಮುದಾಯದ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಅವನ ಬಗ್ಗೆ ಏನೂ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಬೇರೆಯಾರದರೂ ಮಾನತಾಡಿದ್ದರೆ, ಪಕ್ಷದಿಂದಲೇ ಹೊರ ಹಾಕುತ್ತಿದ್ದೆ. ಮುಸ್ಲಿಂ ಸಮುದಾಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಸಿದ್ದರಾಮಯ್ಯ ಬೆಂಬಲಿಗರು ಮುಖ್ಯಮಂತ್ರಿಗಳ ಬಗ್ಗೆ ಪದೇ ಪದೇ ನೀಡುತ್ತಿರುವ ಹೇಳಿಕೆ ಗೊಂದಲ ಸೃಷ್ಟಿಸುತ್ತಿದೆ. ಮೈಸೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಹುದ್ದೆ ಬಗ್ಗೆ ಹೇಳಿಎಕ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳಿಂದ ಪಕ್ಷದಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ. ನಾನು ಒಬ್ಬನೇ ಎಷ್ಟು ಅಂತ ಹೊಡೆದಾಡಲೀ. ಎಲ್ಲರೂ ಇದೇ ರೀತಿ ಮಾಡುತ್ತಾ ಹೋದರೆ ಮುಂದೆ ಹೇಗೆ? ಬಿಜೆಪಿಗಿಂತಲೂ ಅಲ್ಪ ಕಾಂಗ್ರೆಸ್ ಬಹುಮತ ಸಾಬೀತು ಎಂದು ಹೇಳಿದೆ. ಇದಕ್ಕೆ ಎಲ್ಲರ ಪ್ರಯತ್ನ ಬೇಕು. ಇದೇ ರೀತಿಯ ಹೇಳಿಕೆ ನೀಡಿದರೆ ಏನೂ ಪ್ರಯೋಜನ ಇಲ್ಲ" ಎಂದು ಡಿ. ಕೆ. ಶಿವಕುಮಾರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Chamrajpete MLA BZ Zameer Ahmed Khan controversy on Vokkaliga community

ಆರ್‌. ಅಶೋಕ್ ಕೂಡ ಗರಂ: ಇನ್ನು ಒಕ್ಕಲಿಗರ ಸಮುದಾಯದ ಬಗ್ಗೆ ಮಾತಾಡಿರುವ ಜಮೀರ್ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ಕೂಡ ಕಿರಿ ಕಾರಿದ್ದಾರೆ. "ಜಮೀರ್‌ನ ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡಿದ್ದು ತಪ್ಪು ಎಂದಿದ್ದಾರೆ ಅಲ್ಲದೇ, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಪ್ರಸ್ತಾಪಿಸಿದ್ದಾರೆ" ಎಂದು ಜಮೀರ್ ಮಾತನ್ನು ಖಂಡಿಸಿದ್ದಾರೆ.

Chamrajpete MLA BZ Zameer Ahmed Khan controversy on Vokkaliga community

ಜಮೀರ್ ಪದೇ ಪದೇ ಸಿಎಂ ಖುರ್ಚಿ ಪ್ರಸ್ತಾಪಿಸಿ ಡಿ. ಕೆ. ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ, ಡಿ. ಕೆ. ಕೂಡ ಪರೋಕ್ಷವಾಗಿ ವಾರ್ನಿಂಗ್ ಮಾಡಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ನಾಯಕ ಎಂಬ ಕಾರಣಕ್ಕೆ ಡಿ. ಕೆ. ಶಿವಕುಮಾರ್ ಸಹ ಅನಿವಾರ್ಯವಾಗಿ ಕೈ ಕಟ್ಟಿಕೊಂಡು ಕೂತಿದ್ದಾರೆ.

Recommended Video

ವಿಶ್ವಕಪ್ ಮುಗಿದ್ಮೇಲೆ ಏಕದಿನ‌ ಕ್ರಿಕೆಟ್ ಗೆ Hardik Pandya ಗುಡ್ ಬೈ | *Cricket | OneIndia Kannada

English summary
Congress and BJP leaders slammed Zameer Ahmed Khan, who made controversy statement about Vokkkaliga community. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X