ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವೈದ್ಯಕೀಯ ಕಾಲೇಜು ಆರಂಭಕ್ಕೆ ಒಪ್ಪಿಗೆ ಸಿಕ್ಕಿತು

|
Google Oneindia Kannada News

ಕಲಬುರಗಿ, ಏಪ್ರಿಲ್ 29 : ರಾಜ್ಯದಲ್ಲಿ ನೂತನವಾಗಿ ಮೂರು ವೈದ್ಯಕೀಯ ಕಾಲೇಜು ಆರಂಭಿಸಲು ಎಂಸಿಐ ಅನುಮತಿ ನೀಡಿದೆ. ಪ್ರಸ್ತಕ ಶೈಕ್ಷಣಿಕ ವರ್ಷದಿಂದಲೇ ಮೂರು ಕಾಲೇಜುಗಳು ಕಾರ್ಯಾರಂಭ ಮಾಡಲಿವೆ.

ಕಲಬುರಗಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, 'ಚಾಮರಾಜನಗರ, ಕೊಡಗು, ಕಾರವಾರದಲ್ಲಿ ನೂತನವಾಗಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ಸಿಕ್ಕಿದೆ'. ಎಂದು ಹೇಳಿದರು. [ರಾಜ್ಯದಲ್ಲಿ ಮೂರು ವೈದ್ಯಕೀಯ ಕಾಲೇಜು ಈ ವರ್ಷ ಆರಂಭ]

sharan prakash patil

'ಕಳೆದ ವರ್ಷ ಕಲಬುರಗಿ, ಗದಗ ಮತ್ತು ಕೊಪ್ಪಳಗಳಲ್ಲಿ ಪ್ರಾರಂಭಿಸಲಾಗಿದ್ದ ವೈದ್ಯಕೀಯ ಕಾಲೇಜುಗಳಿಗೆ ಎಂಸಿಐ ದಿಂದ ನವೀಕರಣ ದೊರೆತ್ತಿದ್ದು, ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಟ್ಟು 6 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದಂತಾಗಿದೆ' ಎಂದರು. [ಆರು ಜಿಲ್ಲೆಗಳಲ್ಲಿ ನೂತನ ಮೆಡಿಕಲ್ ಕಾಲೇಜು ಸ್ಥಾಪನೆ]

'ರಾಜ್ಯದಲ್ಲಿರುವ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ಮತ್ತು ಮೈಸೂರು ಕಾಲೇಜುಗಳಿಂದ 700 ಸೀಟುಗಳು, ಕಳೆದ ವರ್ಷ ಮತ್ತು ನೂತನವಾಗಿ ಪ್ರಾರಂಭಿಸುವ 6 ಕಾಲೇಜುಗಳಿಂದ 900 ಸೀಟುಗಳು ಹಾಗೂ ರಾಜ್ಯದಲ್ಲಿರುವ ಇತರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ 600 ಸೀಟುಗಳು ಹೀಗೆ ಒಟ್ಟು ರಾಜ್ಯದಲ್ಲಿನ 2,200 ಸೀಟುಗಳು ಸರ್ಕಾರಿ ಕೋಟಾಕ್ಕೆ ಲಭ್ಯವಿದೆ' ಎಂದು ಸಚಿವರು ತಿಳಿಸಿದರು. [ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು]

'ಮುಂದಿನ ವರ್ಷಗಳಲ್ಲಿ ಯಾದಗಿರಿ, ಬಾಗಲಕೋಟೆ, ಹಾವೇರಿ, ತುಮಕೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವುಗಳು ಪ್ರಾರಂಭವಾದರೆ ಇಡೀ ರಾಜ್ಯದಲ್ಲಿ ಒಟ್ಟು 22 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದಂತಾಗುತ್ತದೆ' ಎಂದರು.

English summary
Chamarajanagar, Kodagu and Karwar government medical colleges get approval of the Medical Council of India (MCI), admission will begin in this academic year said, Karnataka Medical education minister Sharan Prakash Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X