ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಸಿಇಟಿ ಆಗಲಿದೆ ಆನ್‌ಲೈನ್, ಪೆನ್‌-ಪೇಪರ್ ವ್ಯವಸ್ಥೆಗೆ ತಿಲಾಂಜಲಿ

|
Google Oneindia Kannada News

ಬೆಂಗಳೂರು, ಜನವರಿ 10: ಶೀಘ್ರದಲ್ಲಿ ಸಿಇಟಿ ಪ್ರವೇಶ ಪರೀಕ್ಷೆ ಆನ್‌ಲೈನ್ ಮೂಲಕ ನಡೆಸಲು ಉನ್ನತ ಶಿಕ್ಷಣ ಇಲಾಖೆ ಸಿದ್ಧವಾಗಿದೆ.

ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಇದಾಗಿದೆ.

ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ

ಸಿಇಟಿ ಆನ್‌ಲೈನ್ ಮಾಡಲು ನಿರ್ಧರಿಸಲಾಗಿದೆ. ಈಗಿರುವ ಪೆನ್‌-ಪೇಪರ್ ವ್ಯವಸ್ಥೆಯನ್ನು ತೆಗೆದು ಹಾಕಿ ಆನ್‌ಲೈನ್‌ ಮೂಲಕವೇ ಪರೀಕ್ಷೆ ನಡೆಸುತ್ತೇವೆ, ಈ ಮೂಲಕ ಪರೀಕ್ಷೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಸಾಫ್ಟ್‌ವೇರ್ ಸಿದ್ಧವಾದರೆ ಆನ್‌ಲೈನ್ ಕಷ್ಟವಲ್ಲ

ಸಾಫ್ಟ್‌ವೇರ್ ಸಿದ್ಧವಾದರೆ ಆನ್‌ಲೈನ್ ಕಷ್ಟವಲ್ಲ

ಪರೀಕ್ಷೆಗೆ ಅಗತ್ಯವಿರುವ ಸಾಫ್ಟ್‌ವೇರ್ ಸಿದ್ಧವಾದರೆ ಆನ್‌ಲೈನ್ ಪರೀಕ್ಷೆ ಕಷ್ಟವೇನಾಲ್ಲ, ಸಿಇಟಿ ಆನ್‌ಲೈನ್ ಬಗ್ಗೆ ಜ.19ರಂದು ಮಹತ್ವದ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿವಿ ಮಹಿಳಾ ಹಾಸ್ಟೆಲ್‌ನಲ್ಲಿ ಜಗಳ, ಹಲ್ಲೆ ಬೆಂಗಳೂರು ವಿವಿ ಮಹಿಳಾ ಹಾಸ್ಟೆಲ್‌ನಲ್ಲಿ ಜಗಳ, ಹಲ್ಲೆ

ಬಿಎಗೆ ನೂತನ ಸಿಲಬಸ್

ಬಿಎಗೆ ನೂತನ ಸಿಲಬಸ್

ಪದವಿ ಹಂತದ ಬಿಎ ಕೋರ್ಟ್ ಪಠ್ಯಕ್ರಮ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ತಜ್ಞರ ಸಮಿತಿ ರಚಿಸಲಾಗುತ್ತದೆ. ಗುರುವಾರ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ಒಟ್ಟಾರೆ 3800 ಉಪನ್ಯಾಸಕರನ್ನು ನೇಮಿಸಲಾಗುತ್ತದೆ.

ಬೆಂಗಳೂರು ವಿವಿಯಲ್ಲಿ ಪರೀಕ್ಷೆ ಮುಗಿದು 1 ಗಂಟೆಯಲ್ಲಿ ಫಲಿತಾಂಶ ಬೆಂಗಳೂರು ವಿವಿಯಲ್ಲಿ ಪರೀಕ್ಷೆ ಮುಗಿದು 1 ಗಂಟೆಯಲ್ಲಿ ಫಲಿತಾಂಶ

ಕುಲಪತಿಗಳ ಜೊತೆ ಸಭೆ ಇಂದು

ಕುಲಪತಿಗಳ ಜೊತೆ ಸಭೆ ಇಂದು

ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಗುರುವಾರ ನಡೆಯಲಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾದ ಅನುದಾನದ ಕ್ರಿಯಾಯೋಜನೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಜೊತೆಗೆ ಈ ಹಿಂದೆ ವಿಶ್ವವಿದ್ಯಾಲಯಗಳಿಗೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂದು ಗಮನಿಸಲಾಗುತ್ತದೆ.

ಪರೀಕ್ಷೆಯ ಮುಖ್ಯಾಂಶಗಳು ಹೀಗಿವೆ

ಪರೀಕ್ಷೆಯ ಮುಖ್ಯಾಂಶಗಳು ಹೀಗಿವೆ

-ಪರೀಕ್ಷೆಗೆ ಸರ್ಕಾರಿ ಕಾಲೇಜು , ಎಂಜಿನಿಯರಿಂಗ್ ಕಾಲೇಜಿನ ಮೂಲಸೌಕರ್ಯ ಬಳಕೆ
-ಸುಮಾರು 2 ಲಕ್ಷ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ
-ತಕ್ಷಣವೇ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿ, 2019ನೇ ಸಿಇಟಿ ನಡೆಸುವ ಬಗ್ಗೆ ಚಿಂತನೆ
-ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೀಟ್ ಮಾದರಿಯಲ್ಲೇ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ7

English summary
Higher education minister GT Devegouda announced that KEA will start online exam for CET students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X