ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಇ.ಟಿ ಮತ್ತು ನೀಟ್ ಪರೀಕ್ಷೆ: ಆನ್ ಲೈನ್ ನಲ್ಲಿ ಉಚಿತ ತರಬೇತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಮೇ 3 ರವರೆಗೂ ಲಾಕ್ ಡೌನ್ ಮುಂದುವರೆಸಲಾಗಿದೆ. ಮೇ 3 ರ ಬಳಿಕ ಲಾಕ್ ಡೌನ್ ಸಡಿಲಗೊಳ್ಳುತ್ತಾ.? ಎಂಬ ಪ್ರಶ್ನೆಗೆ ಈಗಲೇ ಉತ್ತರ ಕೊಡುವುದು ಕಷ್ಟ.

ಆದ್ರೆ, ಈ ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ತರಬೇತಿಗೆ ಅಡ್ಡಿಯುಂಟಾಗಿರುವುದು ಮಾತ್ರ ಸ್ಪಷ್ಟ. ಹೀಗಾಗಿ, ಶಿಕ್ಷಣ ಸಂಸ್ಥೆಗಳು ಆನ್ ಲೈನ್ ತರಬೇತಿಗಳಿಗೆ ಹೆಚ್ಚು ಒತ್ತು ಕೊಡುತ್ತಿವೆ.

ಸಿಇಟಿ ಪರೀಕ್ಷಾ ದಿನಾಂಕ ಘೋಷಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಸಿಇಟಿ ಪರೀಕ್ಷಾ ದಿನಾಂಕ ಘೋಷಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಇತ್ತ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗಳಿಗೂ ತೊಂದರೆ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರ ಮುಂದಾಗಿದೆ. ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗೆ ಆನ್ ಲೈನ್ ನಲ್ಲಿ ತರಬೇತಿ ಕೊಡುವುದಕ್ಕೆ ಸರ್ಕಾರ ನಿರ್ಧರಿಸಿದೆ.

cet-and-neet-exam-free-coaching-online

''ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದಿದ್ದು, GetCETGo ಆಪ್ ನಲ್ಲಿ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆ ಮತ್ತು ತರಬೇತಿ ಕುರಿತಾದ ಎಲ್ಲಾ ವಿವರಗಳು ಲಭ್ಯವಿದೆ. ಸೀಟ್ ಪಡೆಯಲು ಅನುಕೂಲ ಆಗುವ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಸುಮಾರು 20 ಸಾವಿರ ಕೊಚಿಂಗ್ ಫೀ ಆಗುತ್ತೆ. ಆದ್ರೆ ಸರ್ಕಾರ ಉಚಿತವಾಗಿ ಕೊಚಿಂಗ್ ಕೊಡುತ್ತಿದೆ. ಇದರಿಂದ 1,91,000 ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ'' ಎಂದು ವಿಧಾನ ಸೌಧದಲ್ಲಿ ಡಿ.ಸಿ.ಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

English summary
CET and NEET Exam: Free Coaching available in Online says DCM Dr.Ashwath Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X