ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್: ಅನಂತ್ ಕುಮಾರ್

|
Google Oneindia Kannada News

Recommended Video

ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್ | Oneindia Kannada

ಬೆಂಗಳೂರು, ಜುಲೈ 11 : ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಕೇಂದ್ರ ಸರ್ಕಾರ 40 ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಘೋಷಿಸಿದರು.

ಮಂಗಳವಾರ ಕೌಶಲ ಮತ್ತು ತಾಂತ್ರಿಕ ಬೆಂಬಲದ ಕೇಂದ್ರ (ಸಿಎಸ್ ಟಿಎಸ್) ಉದ್ಘಾಟಿಸಿದ ಅನಂತ್ ಕುಮಾರ್, ಡೆಹ್ರಾಡೂನಿನ ದೀವಾಲದಲ್ಲಿ ಹೊಸ ಸಿಐಪಿಇಟಿ ಕಟ್ಟಡಕ್ಕೆ ಅಡಿಪಾಯ ಹಾಕಿದರು. ಇದು ದೇಶದ 32ನೆ ಸಿಐಪಿಇಟಿ ಕೇಂದ್ರವಾಗಿದೆ.

ರಾಜಕೀಯ ಪ್ರೇರಿತ ಮುಂಗಡಪತ್ರ : ಅನಂತಕುಮಾರ್ ಆಕ್ರೋಶರಾಜಕೀಯ ಪ್ರೇರಿತ ಮುಂಗಡಪತ್ರ : ಅನಂತಕುಮಾರ್ ಆಕ್ರೋಶ

ಇಂದಿನ ಆಧುನಿಕ ಜಗತ್ತಿನಲ್ಲಿ ಸಣ್ಣ ಚಮಚದಿಂದ ಆರಂಭಿಸಿ ಆಟೊ ಮೊಬೈಲ್, ವಿಮಾನಯಾನ ಹಾಗೂ ಬಯೊಮೆಡಿಕಲ್ ಸಾಧನಗಳು ಪ್ಲಾಸ್ಟಿಕ್‌ನಿಂದಲೇ ತಯಾರಿಯಾಗುತ್ತಿವೆ. ನಮ್ಮ ಜೀವನ ಶೈಲಿಯ ಶೇಕಡಾ 50ರಷ್ಟು ಭಾಗ ಪ್ಲಾಸ್ಟಿಕ್‌ಮಯವಾಗಿದೆ ಎಂದು ಅನಂತ್ ಕುಮಾರ್ ಹೇಳಿದರು.

ಪ್ಲಾಸ್ಟಿಕ್ ಎಂಜಿನಿಯರಿಂಗ್ ಬಿ.ಟೆಕ್

ಪ್ಲಾಸ್ಟಿಕ್ ಎಂಜಿನಿಯರಿಂಗ್ ಬಿ.ಟೆಕ್

ಡೆಹ್ರಾಡೂನ್ ಸಿಐಪಿಇಟಿ ಕೇಂದ್ರದಲ್ಲಿ ಮೊದಲ ವರ್ಷ 1500 ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಬಹುದು. ಮುಂದಿನ ಬಾರಿ ಆ ಸಂಖ್ಯೆ 2500ಕ್ಕೆ ಏರಲಿದೆ. ಮೂರನೇ ವರ್ಷದಲ್ಲಿ 3000 ವಿದ್ಯಾರ್ಥಿಗಳು ಪರಿಣತಿ ಹೊಂದಲಿದ್ದಾರೆ. ರಾಜ್ಯ ಸರ್ಕಾರದ ನೆರವಿನೊಂದಿಗೆ ಮುಂದೆ ಪ್ಲಾಸ್ಟಿಕ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಕೋರ್ಸ್ ಆರಂಭಿಸಲಾಗುವುದು ಎಂದರು.

2014ರಿಂದ ಇಲ್ಲಿಯವರೆಗೆ 9 ಸಿಐಪಿಇಟಿ ಕೇಂದ್ರಗಳನ್ನು ನೂತನವಾಗಿ ಪ್ರಾರಂಭಿಸಲಾಗಿದೆ. ದೇಶದಲ್ಲಿ 23 ಸಿಐಪಿಇಟಿ ಕೇಂದ್ರಗಳು 40 ಸಾವಿರ ಪರಿಣಿತರನ್ನು ತಯಾರಿಸುತ್ತಿತ್ತು.

ಮತ್ತೊಂದು ಸಿಐಪಿಐಟಿ ಕೇಂದ್ರ

ಮತ್ತೊಂದು ಸಿಐಪಿಐಟಿ ಕೇಂದ್ರ

ಇದೀಗ ಕಳೆದ 4 ವರ್ಷಗಳಲ್ಲಿ 2.5 ಲಕ್ಷ ಮಂದಿಗೆ ತರಬೇತಿ ನೀಡಿದ್ದು ಪ್ರತಿವರ್ಷ 1 ಲಕ್ಷ ತಜ್ಞರು ಹೊರ ಬರುತ್ತಿದ್ದಾರೆ. ಈ ಕೇಂದ್ರಗಳ ಸಂಖ್ಯೆಯನ್ನು ಸದ್ಯದಲ್ಲೇ 50ಕ್ಕೆ ಏರಿಸಲಾಗುವುದು. ಉತ್ತರಾಖಂಡದಲ್ಲೇ ಇನ್ನೊಂದು ಸಿಐಪಿಇಟಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಅನನುಭವಿ ರಾಹುಲ್ ಗಾಂಧಿಯಿಂದ ಸಂಸತ್ ಕಲಾಪ ಹಾಳು: ಅನಂತ್ ಕುಮಾರ್ಅನನುಭವಿ ರಾಹುಲ್ ಗಾಂಧಿಯಿಂದ ಸಂಸತ್ ಕಲಾಪ ಹಾಳು: ಅನಂತ್ ಕುಮಾರ್

ಪ್ಲಾಸ್ಟಿಕ್ ಮರುಬಳಕೆ ಕೇಂದ್ರ

ಪ್ಲಾಸ್ಟಿಕ್ ಮರುಬಳಕೆ ಕೇಂದ್ರ

ಜೈವಿಕ ವಿಘಟನೆಯಾಗುವ ಪ್ಲಾಸ್ಟಿಕ್‌ಗಳನ್ನೇ ಬಳಸಿ ಪರಿಸರ ಉಳಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಸಿತಾರ್ ಗಂಜ್‌ನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ 40 ಕೋಟಿ ಮೀಸಲಿಡಲಾಗಿದ್ದು, ಇದರಲ್ಲಿ ಪ್ಲಾಸ್ಟಿಕ್ ಮರುಬಳಕೆಯ ಕೇಂದ್ರವನ್ನು ಪ್ರಾರಂಭಿಸಲಾಗುವುದು.

5000 ಮಂದಿಗೆ ಉದ್ಯೋಗ

5000 ಮಂದಿಗೆ ಉದ್ಯೋಗ

ಇದು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಈ ಪಾರ್ಕ್ ನಿರ್ಮಾಣದಿಂದ 5000 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಟಿ.ತ್ರಿವೇಂದ್ರ ಸಿಂಗ್ ರಾವತ್, ಸಂಸತ್ ಸದಸ್ಯ ಡಾ.ರಾಮೇಶ್ ಪೋಕ್ರಿಯಾಲ್ ನಿಶಾಂತ್ ಉಪಸ್ಥಿತರಿದ್ದರು .

ಅನಂತ್ ಕುಮಾರ್ ಮಾಡಿದ ಘೋಷಣೆಗಳು

ಅನಂತ್ ಕುಮಾರ್ ಮಾಡಿದ ಘೋಷಣೆಗಳು

* ಐಡಿಪಿಎಲ್‌ನ 800 ಎಕರೆ ಭೂಮಿಯನ್ನು ಉತ್ತರಾಖಂಡ ರಾಜ್ಯ ಸರ್ಕಾರಕ್ಕೆ ಎಐಎಂಎಂಎಸ್ ವಿಸ್ತರಣೆ ಹಾಗು ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕಾಗಿ ಯಾವುದೇ ವೆಚ್ಚವಿಲ್ಲದೆ ನೀಡುವುದು.

* ದ್ವಾರಹತ್ನಲ್ಲಿ ಮತ್ತೊಂದು ಸಿಐಪಿಇಟಿ ಕೇಂದ್ರ (ಅಲ್ಮೋರಾ)

* ಸಿತಾರ್‌ಗಂಜ್, ಉಧಮ್ ಸಿಂಗ್ ನಗರ್, ಉತ್ತರಾಖಂಡದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕಾಗಿ 40 ಕೋಟಿ ಬಿಡುಗಡೆ.

* ಉತ್ತರಾಖಂಡಕ್ಕೆ 100 ಜನ ಜನೌಷಧಿ ಕೇಂದ್ರಗಳು.

English summary
Union Minister Ananath kumar said that the government will grant Rs.40 crores to build a plastic park in Sitarganj of Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X