ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲಮಟ್ಟಿ-ಚಿತ್ರದುರ್ಗ ನೂತನ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ

|
Google Oneindia Kannada News

ಕೊಪ್ಪಳ, ಮಾರ್ಚ್ 09 : ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸರ್ವೆ ಕಾರ್ಯಕ್ಕಾಗಿ 1.32 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೇಂದ್ರ ಸರ್ಕಾರ ಹೊಸ ಮಾರ್ಗ ಮಂಜೂರು ಮಾಡಿದ್ದು, ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಹೊಸಪೇಟೆ ಜನರಿಗೆ ಈ ರೈಲು ಮಾರ್ಗದಿಂದ ಅನುಕೂಲವಾಗಲಿದೆ' ಎಂದರು.

ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಿರಿರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಿರಿ

ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರಕ್ಕೆ ಹೊಸ ರೈಲು ಮಾರ್ಗಕ್ಕಾಗಿ ಮನವಿ ಸಲ್ಲಿಸಿದ್ದರು. ಮನವಿಗೆ ಸರ್ಕಾರ ಸ್ಪಂದಿಸಿದ್ದು, ಅದರಂತೆ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಹೊಸ ರೈಲು ಮಾರ್ಗವನ್ನು ಮಂಜೂರು ಮಾಡಿದೆ, ಸರ್ವೇ ಕಾರ್ಯಕ್ಕಾಗಿ ರೂ. 1.32 ಕೋಟಿಗಳನ್ನು ಬಿಡುಗಡೆ ಮಾಡಿದೆ.

Centre gives green signal for Alamatti Chitradurga new railway line

ಈ ರೈಲು ಮಾರ್ಗದಿಂದ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಾಯಕವಾಗಲಿದೆ. ಪ್ರಸ್ತುತ ಇರುವ ಗುಂಟಕಲ್ ಮತ್ತು ಹುಬ್ಬಳ್ಳಿ ಮೂಲಕ ಇರುವ ಮಾರ್ಗಕ್ಕಿಂತ 170 ಕಿ.ಮೀ. ಅಂತರ ಹೊಸ ಮಾರ್ಗದಿಂದ ಕಡಿಮೆಯಾಗಲಿದೆ.

ಹಾಸನ ರೈಲು ಅಭಿವೃದ್ಧಿಗಾಗಿ ಗೌಡರಿಂದ ಗೋಯಲ್ ಭೇಟಿಹಾಸನ ರೈಲು ಅಭಿವೃದ್ಧಿಗಾಗಿ ಗೌಡರಿಂದ ಗೋಯಲ್ ಭೇಟಿ

ಇದರಿಂದಾಗಿ ಸುಮಾರು 2.30 ಗಂಟೆಗಳ ಕಾಲದ ಪ್ರವಾಸದ ಅವಧಿಯೂ ಕಡಿಮೆಯಾಗಿ ಜನರಿಗೆ ಅನುಕೂಲವಾಗಲಿದೆ. ಹೊಸ ಮಾರ್ಗಕ್ಕೆ ಒಪ್ಪಿಗೆ ನೀಡಿದ ರೈಲ್ವೆ ಇಲಾಖೆ, ಇಲಾಖೆಯ ಅಧಿಕಾರಿಗಳಿಗೆ ಕೊಪ್ಪಳ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.

ಆಲಮಟ್ಟಿ-ಚಿತ್ರದುರ್ಗ ಈ ಹೊಸ ರೈಲು ಮಾರ್ಗ ಕೂಡಲಸಂಗಮ, ಹುನಗುಂದಾ, ಇಲಕಲ್, ಕುಷ್ಟಗಿ, ಕುಕನಪಳ್ಳಿ, ಹಿಟ್ನಾಳ, ಟಿ.ಬಿ. ಡ್ಯಾಂ ಮತ್ತು ಕೂಡ್ಲಿಗಿ ಮೂಲಕ ಹಾದು ಹೋಗಲಿದೆ.

English summary
The Union government has allocated Rs 1.32 crore to the new railway line survey between Alamatti to Chitradurga, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X