ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಕ್ಕೆ 13 ಲಕ್ಷ ಟನ್ ಗೊಬ್ಬರ ತಯಾರಿಸಲು ಯೋಜನೆ

By Kiran B Hegde
|
Google Oneindia Kannada News

ಹುಬ್ಬಳ್ಳಿ, ಡಿ. 8: ದೇಶ ಎದುರಿಸುತ್ತಿರುವ ಗೊಬ್ಬರದ ಕೊರತೆ ನೀಗಿಸಲು ಬೃಹತ್ ಗೊಬ್ಬರ ನಿರ್ಮಾಣ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಗೊಬ್ಬರಕ್ಕಾಗಿ ಪ್ರತಿವರ್ಷ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾವೇರಿಯಲ್ಲಿ ಓರ್ವ ರೈತ ಗೋಲಿಬಾರ್‌ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಬ್ಬರ ಉತ್ಪಾದನೆ ಘಟಕ ಸ್ಥಾಪನೆ ಪ್ರಾಮುಖ್ಯತೆ ಪಡೆದಿದೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ವಿವರಣೆ ನೀಡಿರುವ ಕೇಂದ್ರ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಅನಂತಕುಮಾರ್, ಉತ್ತರ ಕರ್ನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಗೊಬ್ಬರ ಉತ್ಪಾದನೆ ಘಟಕ ಸ್ಥಾಪಿಸುವ ಉದ್ದೇಶವಿದೆ ವರ್ಷಕ್ಕೆ 13 ಲಕ್ಷ ಟನ್‌ಗಳಷ್ಟು ಗೊಬ್ಬರ ಉತ್ಪಾದಿಸಲಾಗುವುದು. ಇದಕ್ಕಾಗಿ ಅಂದಾಜು 5,500 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಘಟಕ ನಿರ್ಮಾಣಕ್ಕೆ 500 ಎಕರೆ ಭೂಮಿ ಅಗತ್ಯ. ರಾಜ್ಯ ಸರ್ಕಾರ ಶೇ. 10ರಷ್ಟು ಬಂಡವಾಳ ಹೂಡಲಿದೆ ಎಂದು ತಿಳಿಸಿದರು. [ರೈತರ ಬದುಕಿಗೆ ಆಸರೆಯಾದ ಎರೆಹುಳು ಗೊಬ್ಬರ]

ananth

ಘಟಕ ನಿರ್ಮಾಣಕ್ಕೆ ನೀಡಲಾಗುವ ಭೂಮಿಯ ಕುರಿತು ತಿಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಯೋಜನೆ ಕುರಿತು ರೂಪುರೇಷೆಯನ್ನು ಇನ್ನಷ್ಟೇ ತಯಾರಿಸಬೇಕಿದೆ. ನೈಸರ್ಗಿಕ ಅನಿಲದ ಲಭ್ಯತೆಯ ಆಧಾರದ ಮೇಲೆ ಘಟಕ ನಿರ್ಮಾಣಕ್ಕಾಗಿ ಭೂಮಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. [ಪಂಚಗವ್ಯ - ರೈತರಿಗೆ ವರದಾನ]

ದಾಬೊಲ್‌ನಿಂದ ಬಿಡಾಡಿವರೆಗೆ ಬೆಂಗಳೂರು ಮೂಲಕ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಯೋಜನೆ ಜಾರಿ ಕುರಿತು ಗೊಂದಲವಿದೆ. ಆದರೆ, ಯೋಜಿತ ಗೊಬ್ಬರ ತಯಾರಿಕಾ ಘಟಕ ನಿರ್ಮಾಣವು ಗ್ಯಾಸ್ ಲಭ್ಯತೆಯನ್ನೇ ಆಧರಿಸಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಘಟಕ ನಿರ್ಮಿಸುವ ಪ್ರದೇಶವನ್ನು ಅಂತಿಮಗೊಳಿಸಲಾಗುವುದೆಂದು ತಿಳಿಸಿದರು.

ಯೋಜನೆಗೆ ಖಾಸಗಿ ಸಹಭಾಗಿತ್ವ?: ಗೊಬ್ಬರ ನಿರ್ಮಾಣ ಘಟಕದ ರೂಪುರೇಷೆಯನ್ನು ಅಂತಿಮಗೊಳಿಸಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಆರಂಭಿಸುವ ಯೋಚನೆಯೂ ಇದೆ. ಸಂಪೂರ್ಣ ಸರ್ಕಾರಿ ಒಡೆತನವೋ ಅಥವಾ ಖಾಸಗಿ ಮತ್ತು ಸರ್ಕಾರಿ ಒಡೆತನವೋ ಎಂಬುದರ ಕುರಿತು ಇನ್ನಷ್ಟೇ ಚರ್ಚಿಸಬೇಕಾಗಿದೆ ಎಂದು ಅನಂತಕುಮಾರ್ ತಿಳಿಸಿದರು.

ಈ ಘಟಕ ನಿರ್ಮಾಣದ ನಂತರ ಗೊಬ್ಬರಕ್ಕೆ ನೀಡುತ್ತಿರುವ ಧನಸಹಾಯ ನೀತಿಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕಳಪೆ ಗೊಬ್ಬರ-ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು...
ರಾಜ್ಯದಲ್ಲಿ ವಿತರಣೆಯಾಗುತ್ತಿರುವ ಕಳಪೆ ಗುಣಮಟ್ಟದ ಗೊಬ್ಬರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅನಂತಕುಮಾರ್, ಗೊಬ್ಬರ ಮಾರುವಾಗ ಅದರ ಗುಣಮಟ್ಟದ ಕುರಿತು ಖಾತ್ರಿಪಡಿಸಿಕೊಳ್ಳುವುದು ಮಾರಾಟ ಕೇಂದ್ರದ ಕರ್ತವ್ಯ ಎಂದು ತಿಳಿಸಿದರು. [ಒಂದು ಎಕರೆ ಭೂಮಿಯಲ್ಲಿ ಕೃಷಿ ಬ್ರಹ್ಮಾಂಡ]

ಅಲ್ಲದೆ, ಕಳಪೆ ಗೊಬ್ಬರ ಹಾಗೂ ಇಂತಹ ಗೊಬ್ಬರ ತಯಾರಿಸಿ, ಪೂರೈಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.

English summary
A fertilizer plant with an annual production capacity of 13 lach tonnes is being planned in north Karnataka jointly by the State and the Union governments. Union Minister for Chemicals and Fertilizers Ananth Kumar told that state government has agreed to provide 10 per cent equity for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X