ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರ

|
Google Oneindia Kannada News

ಪಣಜಿ, ಡಿಸೆಂಬರ್ 25: ಕಳಸಾ-ಬಂಡೂರಿ ಕುಡಿಯುವ ಯೋಜನೆಗೆ ನೀಡಿದ್ದ ಅನುಮತಿಗೆ ತಡೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, 'ಅರಣ್ಯ ಇಲಾಖೆಯ ಅಗತ್ಯ ಒಪ್ಪಿಗೆ ಪಡೆದು, ನ್ಯಾಯಮಂಡಳಿ ಗೆಜೆಟ್ ಹೊರಡಿಸಿದ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಬಹುದು' ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಕಳಸಾ-ಬಂಡೂರಿ ಯೋಜನೆಗೆ ತಡೆ ನೀಡಿದೆ ಎಂಬ ಮಾಹಿತಿ ರಾಜ್ಯದಲ್ಲಿ ಹರಿದಾಡಿತ್ತು, ಇದು ಜನರಲ್ಲಿ ಆತಂಕ ಉಂಟುಮಾಡಿತ್ತು, ವಿಪಕ್ಷಗಳೂ ಇದನ್ನು ಖಂಡಿಸಿದ್ದವು.

Central Not Canceled Mahadayi Project: Minister Prakash Javdekar

ಕೂಡಲೇ ಸಿಎಂ ಯಡಿಯೂರಪ್ಪ ಅವರು ಜಾವಡೇಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಬಸವರಾಜ ಬೊಮ್ಮಾಯಿ ಸಹ ದೆಹಲಿಗೆ ತೆರಳಿ ಜಾವಡೇಕರ್ ಅವರನ್ನು ಭೇಟಿ ಆಗಿ ಬಂದಿದ್ದರು. ಅದರ ಫಲವೇ ಈಗ ಜಾವಡೇಕರ್ ಅವರು ರಾಜ್ಯಕ್ಕೆ ಪತ್ರ ಬರೆದಿದ್ದಾರೆ.

'ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆಯಿಂದ ಇಸಿ ಪಡೆಯುವ ಅಗತ್ಯ ಇಲ್ಲ, 2006 ರ ನಿಯಮದಂತೆ ಕೇಂದ್ರವು ಕಳಸಾ-ಬಂಡೂರಿ ಯೋಜನೆಗೆ ಅನುಮತಿ ರದ್ದು ಮಾಡಿದೆ ಎಂಬುದು ಸುಳ್ಳು' ಎಂದು ಜಾವಡೇಕರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

English summary
Central minister Prakash Javdekar wrote letter to state minister Basavaraj Bommai that central did no cancel permission to Mahadayi project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X