ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ನಂಬಿ ಸಾಲಮನ್ನಾ ಮಾಡುತ್ತಿಲ್ಲ: ಕುಮಾರಸ್ವಾಮಿ

|
Google Oneindia Kannada News

Recommended Video

ಮೋದಿಯನ್ನು ನಂಬಿ ಸಾಲಮನ್ನಾ ಮಾಡುತ್ತಿಲ್ಲ: ಕುಮಾರಸ್ವಾಮಿ..! | Oneindia Kannada

ಬೆಂಗಳೂರು, ಡಿಸೆಂಬರ್ 04: ಮೋದಿಯನ್ನು ನಂಬಿಕೊಂಡು ಸಾಲಮನ್ನಾ ಮಾಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಹೇಳಿದರು.

ವಿಧಾನಸೌದದಲ್ಲಿ ಸದ್ದಿಗಾರರೊಂದಿಗೆ ರೈತರ ಸಾಲಮನ್ನಾ ಬಗೆಗಿನ ಮಾಹಿತಿ ಹಂಚಿಕೊಳ್ಳುವ ವೇಳೆ ಮಾತನಾಡಿದ ಅವರು, ರೈತರಿಗೆ ಮಾತು ಕೊಟ್ಟಿದ್ದಾಗಿ ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ರಾಜ್ಯದ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆಯಿರಿ: ಸಂಸದರಿಗೆ ಸಿಎಂ ಮನವಿರಾಜ್ಯದ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆಯಿರಿ: ಸಂಸದರಿಗೆ ಸಿಎಂ ಮನವಿ

ಡಿಸೆಂಬರ್ 8 ರಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಕಾರ್ಯ ಪ್ರಾರಂಭವಾಗಲಿದ್ದು, ಮೊದಲ ಹಂತವಾಗಿ ರೈತರ 50000 ರೂಪಾಯಿ ಸಾಲಮನ್ನಾ ಆಗಲಿದೆ ಎಂದು ಅವರು ಹೇಳಿದರು.

Central government did not support loan waive off: Kumaraswamy

ಸಾಲಮನ್ನಾಕ್ಕೆ 6500 ಕೋಟಿ ಹಣವನ್ನು ಈ ಆರ್ಥಿಕ ವರ್ಷದಲ್ಲಿ ಮೀಸಲಿಡಲಾಗಿದೆ. ಸರ್ಕಾರಕ್ಕೆ ಆರ್ಥಿಕ ಕೊರತೆ ಇಲ್ಲ, 17 ಲಕ್ಷ ರೈತರ ರಾಷ್ಟ್ರೀಯ ಬ್ಯಾಂಕುಗಳಿಲ್ಲನ 50,000 ಸಾಲಮನ್ನಾ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

ಸಾಲಮನ್ನಾದಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಎಚ್ಡಿಕೆ ನಿರ್ದೇಶನಸಾಲಮನ್ನಾದಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಎಚ್ಡಿಕೆ ನಿರ್ದೇಶನ

ಮೊದಲ ಹಂತವಾಗಿ ದೊಡ್ಡಬಳ್ಳಾಪುರ ಹಾಗೂ ಸೇಡಂ ತಾಲ್ಲೂಕಿನಲ್ಲಿ ಸಾಲಮನ್ನಾ ಜಾರಿ ಆಗಲಿದೆ. ಆ ನಂತರ ಪೂರ್ಣ ರಾಜ್ಯದ ರೈತರ ಸಾಲಮನ್ನಾ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಾಲಮನ್ನಾಕ್ಕೆ ಸಹಾಯ ಮಾಡುವಂತೆ ಎರಡು ಬಾರಿ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಮನವಿ ಮಾಡಿದ್ದೇವೆ ಆದರೆ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಆದರೆ ನಾವು ಮಾತುಕೊಟ್ಟಿದ್ದೇವೆ ಸಾಲಮನ್ನಾ ಮಾಡಿಯೇ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು.

ರೈತರ ಸಾಲಮನ್ನಾ: ಕುಮಾರಣ್ಣ ನೀಡಿದ್ದ ಡೆಡ್ ಲೈನ್ ಮುಗೀತು! ರೈತರ ಸಾಲಮನ್ನಾ: ಕುಮಾರಣ್ಣ ನೀಡಿದ್ದ ಡೆಡ್ ಲೈನ್ ಮುಗೀತು!

ಸಾಲಮನ್ನಾ ಆಗಿಲ್ಲವೆಂದು ಬೊಬ್ಬೆ ಇಡುತ್ತಿರುವ ಬಿಜೆಪಿ ನಾಯಕರು ತಮ್ಮ ಕೇಂದ್ರ ಸರ್ಕಾರದ ಬಳಿ ಕೇಳಬೇಕು, ಏಕೆ ಸಹಾಯ ಮಾಡಲಿಲ್ಲ ಎಂದು ಅವರು ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

English summary
CM Kumaraswamy said we ask central government to help state in farmer loan waive but Central government did not helped us. He also said loan waive off will be start from December 09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X