ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಕರ್ನಾಟಕಕ್ಕೆ 949 ಕೋಟಿ ರೂ. ಬರ ಪರಿಹಾರ

|
Google Oneindia Kannada News

ಳೂರು, ಜನವರಿ 29: ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಕ್ಕೆ ಬರ ಪರಿಹಾರವಾಗಿ 949 ಕೋಟಿ ರೂ. ಅನುದಾನವನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ರೆಸಾರ್ಟ್ ಮೋಜು ಮುಗಿಸಿಬಂದ ಬಿಜೆಪಿ ಬರಗಾಲ ವೀಕ್ಷಣೆಗೆ ಸಜ್ಜು ರೆಸಾರ್ಟ್ ಮೋಜು ಮುಗಿಸಿಬಂದ ಬಿಜೆಪಿ ಬರಗಾಲ ವೀಕ್ಷಣೆಗೆ ಸಜ್ಜು

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯು ಈ ನಿರ್ಣಯ ಕೈಗೊಂಡಿದ್ದು, ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿ ಒಟ್ಟು 7,214 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ.

ಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆಬರ ತಾಲೂಕುಗಳಿಗೆ ಹೆಚ್ಚುವರಿ 50 ಲಕ್ಷ ಅನುದಾನ: ದೇಶಪಾಂಡೆ ಘೋಷಣೆ

2018-19ನೇ ಸಾಲಿನಲ್ಲಿ ಉಂಟಾದ ಬರ, ಪ್ರವಾಹ, ಪ್ರಕೃತಿ ವಿಕೋಪಗಳಿಗೆ ರಾಜ್ಯಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಇಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಘೋಯಲ್ , ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು ಇಂದು ಸಭೆ ಸೇರಿ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಂಡಿದ್ದಾರೆ.

Central government agrees to give 949 crore rs drought relief to Karnataka

ಅತಿ ಹೆಚ್ಚು ಅನುದಾನವನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, ಮಹಾರಾಷ್ಟ್ರಕ್ಕೆ ಬರ ಪರಿಹಾರವಾಗಿ 4,714 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕರ್ನಾಟಕಕ್ಕೆ 949 ಕೋಟಿ, ಆಂಧ್ರಪ್ರದೇಶಕ್ಕೆ 900 ಕೋಟಿ, ಗುಜರಾತ್‌ಗೆ 127 ಕೋಟಿ, ಉತ್ತರ ಪ್ರದೇಶಕ್ಕೆ 191 ಕೋಟಿ ನೀಡಲಾಗಿದೆ.

ಚಿಗುರಿದ ಕನಸು! ಹಳ್ಳಿಯ ಬರದ ಬವಣೆ ನೀಗಿಸಿದ ಎಂಜಿನಿಯರ್ ಯುವಕನ ಯಶೋಗಾಥೆಚಿಗುರಿದ ಕನಸು! ಹಳ್ಳಿಯ ಬರದ ಬವಣೆ ನೀಗಿಸಿದ ಎಂಜಿನಿಯರ್ ಯುವಕನ ಯಶೋಗಾಥೆ

ಹಿಮಾಚಲ ಪ್ರದೇಶಕ್ಕೆ ನೆರೆ ಮತ್ತು ಭೂಕುಸಿತಕ್ಕೆ ಪರಿಹಾರವಾಗಿ 317 ಕೋಟಿ, ಪುದುಚೆರಿಗೆ ಸೈಕ್ಲೋನ್ ಹಾನಿಗೆ ಪರಿಹಾರವಾಗಿ 13 ಕೋಟಿ ನೀಡಲಾಗಿದೆ.

English summary
Central government today agrees to give 949 crore rs drought relief to Karnataka. Central government giving total 7,214 crore rs to 6 states and one union territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X