ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಲ್ಲ!

|
Google Oneindia Kannada News

ಬೆಂಗಳೂರು, ಜೂನ್.12: ಕೊರೊನಾವೈರಸ್ ಸೋಂಕು ನಿಯಂತ್ರಣ ಹಾಗೂ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿತು. ಅಂತರ್-ರಾಜ್ಯಗಳ ಸಂಚಾರಕ್ಕೆ ಈ ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರವು ತನ್ನ ತೀರ್ಮಾನವನ್ನು ಬದಲಿಸಿದೆ.

Recommended Video

Haveri people neglect all the rules and participate in Bandi Run | Haveri | Oneindia Kannada

ವಿಮಾನ ಮತ್ತು ರೈಲ್ವೆ ಸಂಚಾರಕ್ಕೆ ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್ ಗೆ ಸ್ಪಷ್ಟನೆ ನೀಡಿದೆ. ಅನಿವರ್ ಅರವಿಂದ್ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಅನ್ ಲಾಕ್ ಇಂಡಿಯಾ: ವಿಮಾನ ಸಂಚಾರ ಆರಂಭಕ್ಕೂ ಮುನ್ನ ಎಚ್ಚರ!ಅನ್ ಲಾಕ್ ಇಂಡಿಯಾ: ವಿಮಾನ ಸಂಚಾರ ಆರಂಭಕ್ಕೂ ಮುನ್ನ ಎಚ್ಚರ!

ಕೇಂದ್ರ ಸರ್ಕಾರವು ಪರಿಚಯಿಸಿದ ಆರೋಗ್ಯ ಸೇತು ಅಪ್ಲಿಕೇಷನ್ 100 ಮಿಲಿಯನ್ ಗಿಂತಲೂ ಅಧಿಕ ಡೌನ್ ಲೋಡ್ ಆಗಿದೆ. ಈ ಆ್ಯಪ್ ನಿಂದಾಗಿ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಮಾಡುವುದಕ್ಕೆ ಆಗುತ್ತದೆಯೇ ಎಂದು ಪಿಐಎಲ್ ಅರ್ಜಿಯಲ್ಲಿ ಪ್ರಶ್ನೆ ಮಾಡಲಾಗಿತ್ತು.

Central Government Aarogya Setu Mobile application Is not mandatory for air, rail travel

ವಿಮಾನ ಸಂಚಾರಕ್ಕೂ ಆರೋಗ್ಯ ಸೇತು ಆಪ್ ಕಡ್ಡಾಯವಲ್ಲ:

ವಿಮಾನ ಸಂಚಾರಕ್ಕೆ ಕೂಡಾ ಆರೋಗ್ಯ ಸೇತು ಆಪ್ ಹೊಂದುವುದು ಕಡ್ಡಾಯವಲ್ಲ. ಬದಲಿಗೆ ವಿಮಾನ ಪ್ರಯಾಣಕ್ಕೂ ಮೊದಲು ಪ್ರಯಾಣಿಕರು ಸ್ವಯಂ ಘೋಷಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಸೇತು ಆ್ಯಪ್ ನ್ನು ಸಾರ್ವಜನಿಕ ಪ್ರದೇಶ ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಳಸುವುದಕ್ಕೆ ಬೇಕಿದ್ದಲ್ಲಿ ಕಡ್ಡಾಯಗೊಳಿಸಲಿ ಎಂದು ಕೋರ್ಟ್ ತಿಳಿಸಿದೆ. ಜುಲೈ.11ಕ್ಕೆ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದಕ್ಕೂ ಮೊದಲು ಆರೋಗ್ಯ ಸೇತು ಆ್ಯ ಅಪಯಾಕಾರಿ ಮತ್ತು ಅಸುರಕ್ಷಿತವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

English summary
Central Government Aarogya Setu Mobile application Is not mandatory for air, rail travel: Karnataka Highcourt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X