• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮ ಘಟ್ಟದ ಗಣಿಗಾರಿಕೆ: ವಾಣಿಜ್ಯ ಚಟುವಟಿಕೆಗಳಿಗೆ ಶೀಘ್ರ ಬ್ರೇಕ್

|

ಬೆಂಗಳೂರು, ಅಕ್ಟೋಬರ್ 17: ಪಶ್ಚಿಮಘಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದ ಸೇರಿ ಒಟ್ಟು 6 ರಾಜ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.

ಅಪರೂಪದ ಜೀವ ವೈವಿಧ್ಯವನ್ನು ಹೊಂದಿರುವ ಪಶ್ಚಿಮಘಟ್ಟ ಶ್ರೇಣಿಯ ಪೈಕಿ 57 ಸಾವಿರ ಚದರ ಕಿ.ಮೀ ವ್ಯಾಪ್ತಿಯಷ್ಟು ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ನಿರ್ಧರಿಸಿದೆ. ಈ ಕುರಿತು ಕರಡು ಸಿದ್ಧವಾಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲಿನ ಕ್ವಾರಿ, ವಿದ್ಯುತ್ ಉತ್ಪಾದನೆಯಂತಹ ಯೋಜನೆಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಲಿವೆ.

ಡಾ.ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿದ ಕರ್ನಾಟಕ ಸರ್ಕಾರ

ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ತೊಂದರೆ ಉಂಟು ಮಾಡುವಂತಹ ಚಟುವಟಿಕೆಗಳಿಗೆ ಪರಿಸರ ಅನುತಿ ನೀಡದಂತೆ ಆರು ರಾಜ್ಯಗಳಿಗೆ ನಿರ್ಬಂಧ ವಿಧಿಸಿ ಸೆ.4ರಂದು ಆದೇಶ ಹೊರಡಿಸಿತ್ತು.

ಗಾಡಗೀಳ್ ಸಮಿತಿ ವರದಿಯನ್ನು ಪರಾಮರ್ಶೆಗೆ ಒಳಪಡಿಸಲು 2013ರಲ್ಲಿ ಯುಪಿಎ ಸರ್ಕಾರ ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚನೆ ಮಾಡಿತ್ತು. ಪಶ್ಚಿಮಘಟ್ಟ ವ್ಯಾಪ್ತಿಯ ಶೇ.37ರಷ್ಟು ಭಾಗ ಅಂದರೆ 60 ಸಾವಿರ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬೇಕು ಎಂದು ಕಸ್ತೂರಿ ರಂಗನ್ ಸಮಿತಿ ಶಿಫಾರಸ್ಸು ಮಾಡಿತ್ತು.

ಈ ಯೋಜನೆಗಳಿಗೆ ನಿಷೇಧ

ಈ ಯೋಜನೆಗಳಿಗೆ ನಿಷೇಧ

ಪರಿಸರ ಸೂಕ್ಷ್ಮ ಪ್ರದೇಶ ಎಂದು ಒಂದೊಮ್ಮೆ ಘೋಷಿಸಿದರೆ ಅಂತಹ ಪ್ರದೇಶಗಳಲ್ಲಿ ಗಣಿಗಾರಿಕೆ, ಕ್ವಾರಿ, ಉಷ್ಣ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತಿಲ್ಲ.

ಆಕ್ಷೇಪಣೆ ಸಲ್ಲಿಸಲು60 ದಿನಗಳ ಅವಕಾಶ

ಆಕ್ಷೇಪಣೆ ಸಲ್ಲಿಸಲು60 ದಿನಗಳ ಅವಕಾಶ

ಕರಡು ಅಧಿಸೂಚನೆ ಆಕ್ಷೇಪಣೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪರಿಸರ ಸೂಕ್ಷ್ಮ ಘೋಷಣೆಗೆ ಕರ್ನಾಟಕ, ಕೇರಳ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಸರ್ಕಾರಗಳ ನಿಲುವು ಏನು ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಡಾ.ಕಸ್ತೂರಿ ರಂಗನ್ ವರದಿಗೆ ಕೊಡವರ ವಿರೋಧ

57 ಸಾವಿ ಚದರ ಕಿ.ಮೀ ವ್ಯಾಪ್ತಿ ಪರಿಸರ ಸೂಕ್ಷ್ಮ ವಲಯ

57 ಸಾವಿ ಚದರ ಕಿ.ಮೀ ವ್ಯಾಪ್ತಿ ಪರಿಸರ ಸೂಕ್ಷ್ಮ ವಲಯ

ಕರ್ನಾಟಕ ಸೇರಿ ಆರು ರಾಜ್ಯಗಳ 57 ಸಾವಿರ ಚದರ ಕಿ.ಮೀ ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದಾಗಿ ಪರಿಸರ ಸಚಿವಾಲಯ ತಿಳಿಸಿದೆ.

ಅಧಿಸೂಚನೆಗೆ ನಿಧಾನ, ಹಸಿರು ನ್ಯಾಯಾಧೀಕರಣ ತರಾಟೆ

ಅಧಿಸೂಚನೆಗೆ ನಿಧಾನ, ಹಸಿರು ನ್ಯಾಯಾಧೀಕರಣ ತರಾಟೆ

ಕೇರಳ ಜಲಪ್ರಳಯದ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ತರುವಾಯ ಕೇಂದ್ರ ಪರಿಸರ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.

ಕಸ್ತೂರಿ ರಂಗನ್ ವರದಿ: ಕೇಂದ್ರದ ಅಧಿಸೂಚನೆಗೆ ಕರ್ನಾಟಕದ ವಿರೋಧ

ಕಸ್ತೂರಿ ರಂಗನ್ ವರದಿ ಮುಖ್ಯಾಂಶ

ಕಸ್ತೂರಿ ರಂಗನ್ ವರದಿ ಮುಖ್ಯಾಂಶ

ಪಶ್ಚಿಮ ಘಟ್ಟ ವ್ಯಾಪ್ತಿಯ ಶೇ.63 ಭಾಗದಲ್ಲಿ ಈಗಾಗಲೇ ಜನ ವಸತಿ ಹೆಚ್ಚಾಗಿದ್ದು, ನೈಸರ್ಗಿಕ ಪರಿಸರ ಹಾಳಾಗಿರುವುದರಿಂದ ಇಲ್ಲಿ ಯಾವುದೇ ಸಂರಕ್ಷಣಾ ಕಾರ್ಯದ ಅಗತ್ಯವಿಲ್ಲ. ಉಳಿದ ಶೇ 37 ಭಾಗದಲ್ಲಿ ಮಾತ್ರ ಸಂರಕ್ಷಣಾ ಕಾರ್ಯ ಕೈಗೊಳ್ಳಬಹುದು, 4156 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಗ್ರಾಮಗಳೆಂದು ವರದಿ ಗುರುತಿಸಿದೆ. ಗ್ರಾಮಗಳಲ್ಲಿ ಮರಳು ತೆಗೆದಯುವುದು, ಕಲ್ಲು ಕ್ವಾರಿ ನಡೆಸುವುದು, ಯಾವ ಬಗೆಯ ಗಣಿಗಾರಿಕೆಗೂ ಅವಕಾಶವಿರುವುದಿಲ್ಲ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸುವಂತಿಲ್ಲ, ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡುವ 45 ರೆಡ್‌ ಕೆಟಗರಿ ಸೇರಿದ ಕೈಗಾರಿಕೆಗಳನ್ನು ಸ್ಥಾಪಿಸುವಂತಿಲ್ಲ

ಈ ವರದಿ ಅನುಷ್ಠಾನವಾದರೆ ಸಮಸ್ಯೆ ಏನಾಗುತ್ತದೆ

ಈ ವರದಿ ಅನುಷ್ಠಾನವಾದರೆ ಸಮಸ್ಯೆ ಏನಾಗುತ್ತದೆ

ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹೊಂದಿಕೊಂಡಂತೆ ವರದಿಯ ಆಧಾರದಲ್ಲಿ ಅನೇಕ ನಿಬಂಧನೆಗಳು ಕಂಡುಬರುತ್ತದೆ. ಇಲ್ಲಿ ಯಾವುದೇ ದೂರವಾಣಿ ಸಂಪರ್ಕ ಇಲ್ಲ, ಜೊತೆಗೆ ಮೊಬೈಲ್‌ ಸಿಗ್ನಲ್ ಇರುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ, ಹಕ್ಕುಪತ್ರ ಸಿಗುವುದಿಲ್ಲ, ಸರ್ಕಾರದ ಮನೆ, ಪರಿಹಾರ, ಧನಸಹಾಯ ಸಿಗುವುದಿಲ್ಲ, ಡಾಂಬರು ರಸ್ತೆ ಮಾಡುವಂತಿಲ್ಲ, ಕೃಷಿ ಚಟುವಟಿಕೆಗಳಿಗೆ ಕೀಟನಾಶಕಗಳನ್ನು ಬಳಸುವಂತಿಲ್ಲ ಮೊದಲಾದ ನಿಬಂಧನೆಗಳು ಬರಲಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central government had been prepared to notify western ghats as eco sensitive zone which will abandon mining, hydro electric project and quarry activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more