• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಯಾಪೈಸೆ ಕೊಟ್ಟಿಲ್ಲ, ಮಸ್ತಕಾಭಿಷೇಕಕ್ಕೆ ಮೋದಿ ಯಾಕೆ ಬರ್ಬೇಕು? ಕಾಂಗ್ರೆಸ್ ಅಪಸ್ವರ

|
   ಮೋದಿ ಮಹಾಮಸ್ತಕಾಭಿಷೇಕಕ್ಕೆ ಬರಬಾರದು ಅಂತಿದೆ ಕಾಂಗ್ರೆಸ್ | Oneindia Kannada

   ಹಾಸನ, ಫೆ 15: ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವುದು ಅಂತಿಮವಾಗುತ್ತಿದ್ದಂತೇ, ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಕೆಲವು ಮುಖಂಡರು ಅಪಸ್ವರ ಎತ್ತಲಾರಂಭಿಸಿದ್ದಾರೆಂದು ತಿಳಿದುಬಂದಿದೆ.

   ಸೋಮವಾರ (ಫೆ 19) ಮಧ್ಯಾಹ್ನ 12.30ಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಶ್ರವಣಬೆಳಗೊಳಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಮೋದಿಯವರ ಪ್ರವಾಸ ಖಚಿತವಾದ ಹಿನ್ನಲೆಯಲ್ಲಿ ಎಸ್ಪಿಜಿ (ವಿಶೇಷ ಭದ್ರತಾ ಪಡೆ) ಅಧಿಕಾರಿಗಳು, ಜಿಲ್ಲಾಡಳಿತದೊಂದಿಗೆ ಶ್ರವಣಬೆಳಗೊಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

   In Pics: ಬಾಹುಬಲಿ ಮಹಾಮಜ್ಜನಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ

   ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಆರ್ಥಿಕ ನೆರವು ನೀಡುವಂತೆ, ರಾಜ್ಯ ಸರಕಾರ ಮತ್ತು ಹಾಸನ ಸಂಸದ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಮೋದಿಯವರಲ್ಲಿ ಹಲವು ಬಾರಿ ಮನವಿ ಮಾಡಿದ್ದರು.

   ಆದರೆ, ಕೇಂದ್ರ ಸರಕಾರದಿಂದ ಯಾವುದೇ ಹಣ ಬಿಡುಗಡೆಯಾಗಲಿಲ್ಲ. ಹಲವು ಬಾರಿ ಮನವಿ ಮಾಡಿದ ನಂತರವೂ ಕೇಂದ್ರದಿಂದ ಮಹಾಮಸ್ತಕಾಭಿಷೇಕಕ್ಕೆ ಆರ್ಥಿಕ ನೆರವು ಬಂದಿಲ್ಲ. ಸಹಾಯ ಮಾಡದ ಪ್ರಧಾನಿ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯಾಕೆ ಬರಬೇಕೆಂದು ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರು ಅಪಸ್ವರ ಎತ್ತುತ್ತಿದ್ದಾರೆಂದು ವರದಿಯಾಗಿದೆ.

   ಶ್ರವಣಬೆಳಗೊಳದಲ್ಲಿ ಜನಪ್ರತಿನಿಧಿಗಳ ಇದೆಂಥ ಪ್ರತಿಷ್ಠೆ ಮೇಲಾಟ?

   ಜೈನಕಾಶಿಯಲ್ಲಿ 12 ವರ್ಷಕ್ಕೊಮ್ಮೆ ಮಹಾವಿರಾಗಿಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿದ್ದು, ಆರೋಗ್ಯದ ಸಮಸ್ಯೆಯ ನಡುವೆಯೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾಡಳಿತದ ಜೊತೆ ಸೇರಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ. ಮುಂದೆ ಓದಿ..

   ಪ್ರಧಾನಿ ಆಗಮಿಸುತ್ತಿರುವುದು ಅತೀವ ಸಂತಸ ತಂದಿದೆ

   ಪ್ರಧಾನಿ ಆಗಮಿಸುತ್ತಿರುವುದು ಅತೀವ ಸಂತಸ ತಂದಿದೆ

   ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಿಯವರನ್ನು ಕರೆತರಲು ಕಾರ್ಯಕ್ರಮದ ಸ್ವಾಗತ ಸಮಿತಿ ಮತ್ತು ಚಾರುಕೀರ್ತಿ ಶ್ರೀಗಳು ವಿಶೇಷ ಪರಿಶ್ರಮ ಹಾಕಿದ್ದರು. ಫೆ.19 ರಂದು ಪ್ರಧಾನಿ ಆಗಮಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಶ್ರವಣಬೆಳಗೊಳ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಆರ್ಥಿಕ ನೆರವು ನೀಡದ ಮೋದಿ, ಯಾಕೆ ಬರಬೇಕು ಎನ್ನುವ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೂಗು, ಮೋದಿ ಆಗಮನದ ದಿನದಂದು ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಭಯ/ಕುತೂಹಲ ಕಾಡಲಾರಂಭಿಸಿದೆ.

   ಹಿಂದಿನಿಂದಲೂ ಕೇಂದ್ರ ಆರ್ಥಿಕ ನೆರವು ನೀಡುವ ಪದ್ದತಿಯಿದೆ

   ಹಿಂದಿನಿಂದಲೂ ಕೇಂದ್ರ ಆರ್ಥಿಕ ನೆರವು ನೀಡುವ ಪದ್ದತಿಯಿದೆ

   ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಿಂದಿನಿಂದಲೂ ಕೇಂದ್ರ ಸರಕಾರ ಆರ್ಥಿಕ ನೆರವು ನೀಡುವ ಪದ್ದತಿಯಿದೆ. ಅದರಂತೇ, ರಾಜ್ಯ ಸರಕಾರ ಮತ್ತು ದೇವೇಗೌಡರು ಪ್ರತ್ಯೇಕವಾಗಿ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ್ದರು. ಆದರೆ, ಕೇಂದ್ರದಿಂದ ಕಾರ್ಯಕ್ರಮಕ್ಕೆ ಯಾವುದೇ ಹಣ ಬಿಡುಗಡೆಯಾದ ಬಗ್ಗೆ ಮಾಹಿತಿಯಿಲ್ಲ.

   ಮೋದಿ ಈ ವೇದಿಕೆಗೆ ಬಂದು ಮಾತನಾಡುವುದು ಎಷ್ಟು ಸರಿ

   ಮೋದಿ ಈ ವೇದಿಕೆಗೆ ಬಂದು ಮಾತನಾಡುವುದು ಎಷ್ಟು ಸರಿ

   ಕೇಂದ್ರದಿಂದ ಹಣ ಬರದೇ ಇರುವ ಹಿನ್ನಲೆಯಲ್ಲಿ ಮೋದಿ ಈ ವೇದಿಕೆಗೆ ಬಂದು ಮಾತನಾಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡರು ತಕರಾರು ಎಬ್ಬಿಸಲಾರಂಭಿಸಿದ್ದಾರೆಂದು ವರದಿಯಾಗಿದೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ ಮೋದಿ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸುತ್ತಿದೆ.

   ಕಾಂಗ್ರೆಸ್ ಸಚಿವರು ಇದುವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ

   ಕಾಂಗ್ರೆಸ್ ಸಚಿವರು ಇದುವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ

   ಮೋದಿ ಆಗಮಿಸುತ್ತಿರುವುದಕ್ಕೆ ಮೇಲ್ಪಂಕ್ತಿಯ ಕಾಂಗ್ರೆಸ್ ನಾಯಕರಾಗಲಿ ಅಥವಾ ಸಚಿವರಾಗಲಿ ಇದುವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಕಳೆದ ವರ್ಷ ಫೆಬ್ರವರಿ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರಧಾನಿಯವರನ್ನು ಭೇಟಿಯಾಗಿದ್ದ ದೇವೇಗೌಡರು ಒಮ್ಮೆ ಐನೂರು ಮತ್ತೊಮ್ಮೆ ನೂರು ಕೋಟಿ ಆರ್ಥಿಕ ನೆರವು ನೀಡಿ ಎಂದು ಮನವಿ ಮಾಡಿದ್ದರು.

   ಎಲ್ಲಿ ನೋಡಿದರಲ್ಲಿ ಜನಸಾಗರ ಜೊತೆಗೆ, ಪೊಲೀಸ್ ಬಿಗಿ ಬಂದೋಬಸ್ತ್

   ಎಲ್ಲಿ ನೋಡಿದರಲ್ಲಿ ಜನಸಾಗರ ಜೊತೆಗೆ, ಪೊಲೀಸ್ ಬಿಗಿ ಬಂದೋಬಸ್ತ್

   ಹಾಸನ ಜಿಲ್ಲೆಯ ಪುಟ್ಟ ಪಟ್ಟಣ ಶ್ರವಣಬೆಳಗೊಳದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಜನಸಾಗರ ಜೊತೆಗೆ, ಪೊಲೀಸ್ ಬಿಗಿ ಬಂದೋಬಸ್ತ್​ನ ಹಿಡಿತಕ್ಕೆ ಸ್ಥಳೀಯರು ನಲುಗಿ ಹೋಗಿದ್ದಾರೆ. ಅದರಲ್ಲೂ ಪ್ರಧಾನಿ ಬರುವುದು ಖಚಿತವಾಗುತ್ತಿದ್ದಂತೇ, ಖಾಕಿ ಸರ್ಪಗಾವಲು ದುಪ್ಪಟ್ಟಾಗಿದೆ.

   English summary
   Union government has not extended the financial assistance to Maha Mastakabhisheka event at Shravanabelagola. Why should Prime Minister Narendra Modi attend this event? Local Congress leaders unhappy with Center.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X