ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶಕ್ಕೂ ಮೊದಲೇ ವಿಜಯೋತ್ಸವಕ್ಕೆ ಕರೆ ಕೊಟ್ಟ ಎಎಪಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲು 30 ಗಂಟೆಗಳಿಗೂ ಹೆಚ್ಚು ಅವಧಿ ಇದೆ. ಆದರೆ ಗೋವಾ ಮತ್ತು ಪಂಜಾಬ್ ಚುನಾವಣೆಗಳ ಫಲಿತಾಂಶವನ್ನು ಸಂಭ್ರಮಿಸಲು ಕರ್ನಾಟಕ ಎಎಪಿ ಈಗಾಗಲೇ ಬೈಕ್ ರ್ಯಾಲಿಗೆ ಕರೆ ಕೊಟ್ಟಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 9: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲು 30 ಗಂಟೆಗಳಿಗೂ ಹೆಚ್ಚು ಅವಧಿ ಇದೆ. ಆದರೆ ಗೋವಾ ಮತ್ತು ಪಂಜಾಬ್ ಚುನಾವಣೆಗಳ ಫಲಿತಾಂಶವನ್ನು ಸಂಭ್ರಮಿಸಲು ಕರ್ನಾಟಕ ಎಎಪಿ ಈಗಾಗಲೇ ಬೈಕ್ ರ್ಯಾಲಿಗೆ ಕರೆ ಕೊಟ್ಟಿದೆ.

ಐತಿಹಾಸಿಕ ವಿಜಯೋತ್ಸವದಲ್ಲಿ ಪಾಲ್ಗೊಳ್ಳಿ ಎಂದು ಹೇಳಿರುವ ಎಎಪಿ ಮಾರ್ಚ್ 11ರಂದು ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. 'ಕಾಮನ್ ಮ್ಯಾನ್ ವಿನ್ನಿಂಗ್ ಓವರ್ ಕರಪ್ಟ್' ಹೆಸರಿನಲ್ಲಿ ಸಂಭ್ರಮಾಚರಣೆ ರ್ಯಾಲಿ ನಡೆಯಲಿದೆ. ಕರ್ನಾಟಕದಲ್ಲಿಯೂ ಜನರ ಆಡಳಿತ ತರಲು ಈ ಬೈಕ್ ರ್ಯಾಲಿ ನಡೆಸುತ್ತಿರುವುದಾಗಿ ಅದು ಹೇಳಿದೆ.[ಪಂಜಾಬ್ ನಲ್ಲಿ ಬಿಜೆಪಿ ಧೂಳಿಪಟ; ಎಎಪಿ, ಕಾಂಗ್ರೆಸ್ ಗೆ ಮಾತ್ರ ಅವಕಾಶ]

Celebration before results, Karnataka AAP organized Bike Rally on March 11th

ಮಾರ್ಚ್ 11ರಂದು ಬೆಳಿಗ್ಗೆ 12 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಎಪಿ ಕಚೇರಿಯಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು ಶಿವಾಜಿನಗರದಲ್ಲಿ ಅಂತ್ಯವಾಗಲಿದೆ. ರ್ಯಾಲಿಗೆ ಬರುವವರು ಹೆಲ್ಮೆಟ್ ಮತ್ತು ಡ್ರೈವಿಂಗ್ ಲೈಸನ್ಸ್ ಕಡ್ಡಾಯವಾಗಿ ತರಬೇಕು ಎಂದು ಎಎಪಿಯ ಪ್ರಕಟಣೆ ತಿಳಿಸಿದೆ.['ಗೋವಾದಲ್ಲಿ ಬಿಜೆಪಿ ದರ್ಬಾರ್' ಇಂಡಿಯಾ ಟುಡೇ -ಮೈ ಆಕ್ಸಿಸ್]

ಈಗಾಗಲೇ ಪಂಜಾಬಿನಲ್ಲಿ ಎಎಪಿ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದೇ ವೇಳೆಗೆ ರ್ಯಾಲಿಗೆ ಕರೆ ನೀಡಿರುವುದು ಬಹುಶಃ ಎಎಪಿಯ ಆಂತರಿಕ ಸಮೀಕ್ಷೆಯಲ್ಲಿ ಪಕ್ಷ ಗೆಲ್ಲಲಿದೆ ಎಂದು ಹೇಳಿರುವ ಸಾಧ್ಯತೆಗಳು ಕಾಣಿಸುತ್ತಿವೆ. ಏನೇ ಆಗಲಿ ಫಲಿತಾಂಶಕ್ಕೂ ಮೊದಲು ರ್ಯಾಲಿಗೆ ಕರೆ ನೀಡಲಾಗಿದೆ. ಈಗ ಫಲಿತಾಂಶ ಏನಾಗಲಿದೆ ಕಾದು ನೋಡಬೇಕು.

English summary
To celebrate the results of Punjab and Goa assembly elections Karnataka AAP take out a Bike Rally on Saturday 11th March at 12 noon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X