ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಿಕೆಗಳು ಮತದಾನದ 48 ತಾಸು ಮುಂಚೆ ಪಕ್ಷಗಳ ಜಾಹಿರಾತು ಹಾಕುವಂತಿಲ್ಲ!

By Nayana
|
Google Oneindia Kannada News

ಬೆಂಗಳೂರು, ಮೇ 05: ಪತ್ರಿಕೆಗಳು ಮತದಾನದ 48 ಗಂಟೆಗಳಿರುವಾಗಿನಿಂದ ಪಕ್ಷಗಳ ಕುರಿತಾದ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.

ಪರಸ್ಪರ ಆರೋಪ, ಪ್ರತ್ಯಾರೋಪ ಹಾಗೂ ಹಾದಿ ತಪ್ಪಿಸುವ ಚುನಾವಣಾ ಪ್ರಚಾರದ ಜಾಹಿರಾತುಗಳನ್ನು ರಾಜಕೀಯ ಪಕ್ಷಗಳು ಪ್ರಕಟಿಸುತ್ತಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಇ-ಮೇಲ್ ಮತದಾನ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ಇ-ಮೇಲ್ ಮತದಾನ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಚುನಾವಣೆ ಹಿಂದಿನ ದಿನ ಸಂದರೆ ಮೇ 11 ಹಾಗೂ ಚುನಾವಣೆ ದಿನ ಮೇ 12 ರಂದು ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಅಥವಾ ಇತರೆ ಸಂಘಟನೆಗಳು ಅಥವಾ ವ್ಯಕ್ತಿಗಳು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹಿರಾತುಗಳನ್ನು ಪ್ರಕಟಿಸದಂತೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿ ಕೆಲವು ಷರತ್ತುಗಳನ್ನು ವಿಧಿಸಿದೆ.

CEC restricts advertisement in print media on May 11 and 12

ಇಂತಹ ಜಾಹಿರಾತುಗಳ ಸಾರಾಂಶಗಳನ್ನು ಅವಲೋಕಿಸಿ, ಪರಾಮರ್ಶಿಸಿ ನಂತರ ಸಮಿತಿಯು ತ್ವರಿತ ದೃಢೀಕರಣ ನೀಡಬೇಕೆಂದೂ ಆಯೋಗ ಸಲಹೆ ಮಾಡಿದೆ. ಚುನಾವಣಾ ಪ್ರಕ್ರಿಯೆ ಕೊನೆ ಹಂತದಲ್ಲಿರುವ ಸಂದರ್ಭದಲ್ಲಿ ಇಂಥ ಜಾಹಿರಾತುಗಳು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುತ್ತದೆ.

ಹೀಗಾಗಿ ಉಮೇದುವಾರ, ಪಕ್ಷಗಳು ಇಂಥ ಪ್ರಕರಣಗಳಲ್ಲಿ ಸ್ಪಷ್ಟೀಕರಣ ಅಥವಾ ನಿರಾಕರಣೆ ನೀಡಲು ಸಮಯಾವಕಾಶ ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಈಂಥ ಪ್ರಕರಣಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ಸೂಚನೆ ನೀಡಿದೆ.

English summary
Election commission has imposed restrictions on print media to publish advertisements on May 11 and 12. Same time commission has imposed some restrictions among news papers publishing defamatory advertising against anybody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X