ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಟ್ಟೆ ಕಳಚುತ್ತಿರುವ ಕಾಂಗ್ರೆಸ್: ಅಂದು ಜೈಶ್ರೀರಾಮ್, ಈಗ ಜೈ 'ಸಿಡಿ' ರಾಮ್

|
Google Oneindia Kannada News

ಬೆಂಗಳೂರು, ಮಾರ್ಚ್ 24: ಅಶ್ಲೀಲ ಸಿಡಿ ಪ್ರಕರಣ, ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದು, ಸಚಿವ ಡಾ.ಸುಧಾಕರ್ ಹೇಳಿಕೆಯನ್ನು ಇಟ್ಟುಕೊಂಡು, ವಿರೋಧ ಪಕ್ಷ ಕಾಂಗ್ರೆಸ್, ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದೆ.

ಕಳೆದ ಎರಡು ದಿನಗಳಿಂದ ಸದನದ ಎರಡೂ ಮನೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ, ಉತ್ತಮ ವಾಗ್ಮಿ ಸಿ.ಎಂ.ಇಬ್ರಾಹಿಂ ತಮ್ಮದೇ ದಾಟಿಯಲ್ಲಿ ಬಿಜೆಪಿಯನ್ನು ಹುರಿದು ಮುಕ್ಕಿದ್ದು ಹೀಗೆ:

ಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ಏರುತ್ತಿರುವ ಕೊರೊನಾ ಕೇಸ್‌ ಲೆಕ್ಕ ಹಾಕಿಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ಏರುತ್ತಿರುವ ಕೊರೊನಾ ಕೇಸ್‌ ಲೆಕ್ಕ ಹಾಕಿ

"ನಮ್ಮ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಲು ಬಿಜೆಪಿಯವರ ಬಳಿ ಏನಾದರೂ ಉತ್ತರವಿದ್ದರೆ ತಾನೆ. ಈ ಹಿಂದೆ ಜೈಶ್ರೀರಾಮ್ ಎಂದು ಹೇಳುತ್ತಿದ್ದವರು, ಈಗ ಜೈ ಸಿಡಿ ರಾಮ್ ಎನ್ನುತ್ತಿದ್ದಾರೆ"ಎಂದು ವ್ಯಂಗ್ಯ ವಾಡಿದರು.

"ಆರು ಜನ ಹೋಗಿ ಕೋರ್ಟ್ ನಲ್ಲಿ ಯಾಕೆ ತಡೆ ತರಬೇಕಿತ್ತು ಎನ್ನುವುದು ನಮ್ಮ ಪ್ರಶ್ನೆಯಾಗಿತ್ತು. ಸಿಡಿಯಲ್ಲಿ ಅಂತಹ ಅಂಶ ಏನಿತ್ತು, ದೇಶದ್ರೋಹ, ಮಾನವದ್ರೋಹದ ಅಂಶಗಳೇನಾದರೂ ಇತ್ತಾ"ಎಂದು ಇಬ್ರಾಹಿಂ, ಬಿಜೆಪಿ ಸಚಿವರನ್ನು ಪ್ರಶ್ನಿಸಿದ್ದಾರೆ.

ಮಹಾನಾಯಕರಿಗೆ ಅರ್ಥವಾದರೆ ಸಾಕು; ಸಚಿವ ಸುಧಾಕರ್ ಸ್ಪಷ್ಟನೆಮಹಾನಾಯಕರಿಗೆ ಅರ್ಥವಾದರೆ ಸಾಕು; ಸಚಿವ ಸುಧಾಕರ್ ಸ್ಪಷ್ಟನೆ

 ಕರ್ನಾಟಕದ ಇತಿಹಾಸ

ಕರ್ನಾಟಕದ ಇತಿಹಾಸ

"ಭಾರತ ಅಥವಾ ಕರ್ನಾಟಕದ ಇತಿಹಾಸದಲ್ಲಿ ಇಂತಹ ಒಂದು ಮಂಚ ಮುರಿಯುವ ಸಿಡಿಯ ಬಗ್ಗೆ ಕೋರ್ಟ್ ನಲ್ಲಿ ತಡೆ ತಂದಿರುವುದು ಇದೇ ಮೊದಲು. ಹಾಗಾಗಿ, ಮೇಲ್ಮನೆ ಅಥವಾ ಕೆಳಮನೆಯಲ್ಲಿ ಸರಕಾರ ಉತ್ತರವನ್ನು ಕೊಡಲಿಲ್ಲ"ಎಂದು ಇಬ್ರಾಹಿಂ ಹೇಳಿದರು.

 ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ

ಅನಿರ್ದಿಷ್ಟಾವಧಿಗೆ ಸದನ ಮುಂದೂಡಿಕೆ

"ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಲಾಗಿದೆ ಎಂದು ಹೇಳಿ ಬಿಜೆಪಿಯವರು ತಪ್ಪಿಸಿಕೊಂಡು ಓಡಿ ಹೋದರು. ಆದರೆ, ಜನರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ. ಗಲ್ಲಿಗಲ್ಲಿಯಲ್ಲಿ ನಾವು ಈ ವಿಚಾರವನ್ನು ಸಾರ್ವಜನಿಕರ ಮುಂದೆ ಇಡುತ್ತೇವೆ"ಎಂದು ಇಬ್ರಾಹಿಂ ಅವರು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

 ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ, ಉತ್ತಮ ವಾಗ್ಮಿ ಸಿ.ಎಂ.ಇಬ್ರಾಹಿಂ

ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ, ಉತ್ತಮ ವಾಗ್ಮಿ ಸಿ.ಎಂ.ಇಬ್ರಾಹಿಂ

ಈಗ ನಡೆಯುತ್ತಿರುವ ವಿದ್ಯಮಾನಗಳು ಉಪಚುನಾವಣೆಯ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುವುದಲ್ಲ, ಇದು ಇಡೀ ರಾಜ್ಯದ ವಿಚಾರ. ಸಿಡಿ ವಿಚಾರದಲ್ಲಿ ರಾಜ್ಯದ ಮಾನ ಮರ್ಯಾದೆ ಬಲಿಯಾಯಿತು. ಎಂತೆಂತಹ ನಾಯಕರು ಬಿಜೆಪಿಯಲ್ಲಿ ಮತ್ತು ಸಂಘ ಪರಿವಾರದಲ್ಲಿ ಇದ್ದರು. ಈಗಿನ ಬಿಜೆಪಿಯೇ ಬೇರೆ"ಎಂದು ಇಬ್ರಾಹಿಂ ಅಭಿಪ್ರಾಯ ಪಟ್ಟರು.

Recommended Video

ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ ಹಿತೇಶ | Zomato Case | Oneindia Kannada

ಕೆಪಿಸಿಸಿ ಕೂಡಾ ಟ್ವಿಟ್ಟರ್ ನಲ್ಲಿ ವ್ಯಂಗ್ಯ

"ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ಕೊಟ್ಟು ಕಳಂಕ ತೊಳೆದುಕೊಂಡು ಬನ್ನಿ, ಅಂದಹಾಗೆ ಕಂಡವರ ಹೆಂಡಿರ ಲೆಕ್ಕ ಹಾಕುವ ಮೊದಲು ರಾಜ್ಯದಲ್ಲಿ ಏರುತ್ತಿರುವ ಕೊರೊನಾ ಕೇಸ್‌ಗಳ ಲೆಕ್ಕ ಗಮನಿಸಿ"ಎಂದು ಕೆಪಿಸಿಸಿ ಕೂಡಾ ಟ್ವಿಟ್ಟರ್ ನಲ್ಲಿ ಬಿಜೆಪಿಯನ್ನು ವ್ಯಂಗ್ಯವಾಡಿತ್ತು.

English summary
CD, Six Ministers Court Stay, Dr.Sudhakar Statement: Congress Leader C M Ibrahim Reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X