ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಾನ್ ನಾಯಕ'ನ ರಾಜಕೀಯ ಭವಿಷ್ಯಕ್ಕೆ ಇತಿಶ್ರೀ ಹಾಡುತ್ತಾ 'ಸಂತ್ರಸ್ತ ಯುವತಿ'ಯ 'ಆ' ಹೇಳಿಕೆ?

|
Google Oneindia Kannada News

ಬೆಂಗಳೂರು, ಮಾ. 17: ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ 'ಸಿಡಿ' ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರು ಆರೋಪ ಮಾಡಿದ್ದ ಆ 'ಮಹಾನ್ ನಾಯಕ' ಯಾರು ಎಂಬುದು ಇಡೀ ನಾಡಿಗೆ ಪರೋಕ್ಷವಾಗಿ ಅರ್ಥವಾಗಿದೆ. ಇದೇ ಸಂದರ್ಭದಲ್ಲಿ ಆ ಒಂದು ಹೇಳಿಕೆ, ಆ ಮಹಾನ್ ನಾಯಕನ ರಾಜಕೀಯ ಭವಿಷ್ಯಕ್ಕೆ ಮುಳುವಾಗಲಿದೆಯಾ? ಎಂಬ ಚರ್ಚೆಗಳು ಇದೀಗ ಆರಂಭವಾಗಿವೆ.

Recommended Video

ಸಿಡಿ ಪ್ರಕರಣದ ಯುವತಿಯ ಪೋಷಕರಿಗೆ ಎಸ್‌ಐಟಿ ನೊಟೀಸ್‌ ನೀಡುವ ಸಾಧ್ಯತೆ... | Oneindia Kannada

ಹೌದು, 'ಸಿಡಿ' ರಾಜಕೀಯ ಇದೀಗ ರಾಜ್ಯ ರಾಜಕೀಯದಲ್ಲಿ ಅಲ್ಲೋಕ ಕಲ್ಲೋಲ ಸೃಷ್ಟಿಸಿದೆ. ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯವಾದಾಗ ಇಡೀ ಸಮಾಜ ಸಂತ್ರಸ್ತ ಯುವತಿಗೆ ಬಂಬಲವಾಗಿ ನಿಲ್ಲುವುದು ಸಹಜ. ಆದರೆ ಈ ಸಿಡಿ ಪ್ರಕರಣದಲ್ಲಿ ಅನುಕಂಪ ದೊರೆಯುತ್ತಿರುವುದು ರಮೇಶ್ ಜಾರಕಿಹೊಳಿ ಅವರಿಗೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಚರ್ಚೆಗಳು ಅದಕ್ಕೆ ಪುಷ್ಠಿಕೊಡುವಂತಿವೆ. ಅದೇ ರೀತಿ ಈ ಪ್ರಕರಣ ಯಾವುದೇ ರೀತಿಯ ತಾರ್ಕಿಕ ಅಂತ್ಯ ಕಾಣುವುದಿಲ್ಲ ಎನ್ನುತ್ತಾರೆ ಕಾನೂನು ಬಲ್ಲವರು. ಹಾಗಾದರೆ ಮುಂದೆ ಆಗುವುದು ಏನು?

ಆಕ್ರೋಶದ ಬದಲು ಅನುಕಂಪವೇಕೆ?

ಆಕ್ರೋಶದ ಬದಲು ಅನುಕಂಪವೇಕೆ?

ಸಿಡಿ ಬಿಡುಗಡೆ ಆಗುತ್ತಿದ್ದಂತೆಯೆ ಸಹಜವಾಗಿ ರಮೇಶ್ ಜಾರಕಿಹೊಳಿ ಅವರ ಮೇಲೆ ಆಕ್ರೋಶ ಉಂಟಾಗಿತ್ತು. ಆದರೆ ಇಡೀ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದಂತೆಯೆ ಆ ಆಕ್ರೋಶ ಅನುಕಂಪವಾಗಿ ಮಾರ್ಪಾಡಾಗಿರುವಂತೆ ಕಂಡು ಬರುತ್ತಿದೆ. ಅದಕ್ಕೆ ಕಾರಣ 'ಸಿಡಿ'ಯಲ್ಲಿ ಬಹಿರಂಗವಾಗಿರುವ ಯುವತಿಯ ವರ್ತನೆ.

ಜೊತೆಗೆ ರಮೇಶ್ ಜಾರಕಿಹೊಳಿ ಅವರು ದೂರು ಕೊಡುತ್ತಿದ್ದಂತೆಯೆ ಯುವತಿಯ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು. ರಮೇಶ್ ಜಾರಕಿಹೊಳಿ ಅವರು ದೂರು ಕೊಡುತ್ತಿದ್ದಂತೆಯೆ ಸಂತ್ರಸ್ತ ಯುವತಿಯ ಮತ್ತೊಂದು ಹೇಳಿಕೆ ಬಿಡುಗಡೆ ಆಗಲಿದೆ ಎಂದು ಮೊದಲೇ ಮೂಲಗಳಿಂದ ಬಂದಿದ್ದ ಮಾಹಿತಿ ಆಧರಿಸಿ 'ಒನ್‌ಇಂಡಿಯಾ ಕನ್ನಡ' ವರದಿ ಮಾಡಿತ್ತು. ಅದರಂತೆಯೆ ದೂರು ಸಲ್ಲಿಕೆಯಾಗಿ ಎಫ್‌ಐಆರ್ ಆಗುತ್ತಿದ್ದಂತೆಯೆ ಯುವತಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ಮಹಾನ್ ನಾಯಕ'ನ ರಾಜಕೀಯಕ್ಕೆ ಮುಳುವಾಗುತ್ತಾ ಆ ಹೇಳಿಕೆ?

'ಮಹಾನ್ ನಾಯಕ'ನ ರಾಜಕೀಯಕ್ಕೆ ಮುಳುವಾಗುತ್ತಾ ಆ ಹೇಳಿಕೆ?

'ಸಿಡಿ' ಸಂತ್ರಸ್ತ ಯುವತಿಯ ಹೇಳಿಕೆಯಿಂದ ರಮೇಶ್ ಜಾರಕಿಹೊಳಿ ಅವರು ಹೇಳುತ್ತಿರುವ ಆ 'ಮಹಾನ್ ನಾಯಕ'ನ ರಾಜಕೀಯ ಭವಿಷ್ಯವೇ ಆತಂಕದಲ್ಲಿದೆಯಾ? ಆ ನಾಯಕನ ರಾಜಕೀಯ ಭವಿಷ್ಯಕ್ಕೆ ದೊಡ್ಡ ಏಟು ಕೊಡಲಿದೆಯಾ ಯುವತಿಯ ಹೇಳಿಕೆ ಎಂಬ ಚರ್ಚೆಗಳು ಇದೀಗ ನಡೆದಿವೆ.

ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಅವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ಹತ್ತಿರವಾಗಿವೆ. ಹೀಗಾಗಿ ಅತ್ಯಂತ ಆತ್ಮವಿಶ್ವಾಸದಿಂದಲೇ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಹೀಗಾಗಿ ಇಡೀ ಪ್ರಕರಣ ಇದೀಗ ಬೇರೆಯದ್ದೆ ದಿಕ್ಕಿನತ್ತ ಸಾಗುತ್ತಿದೆ. ಜೊತೆಗೆ ಸ್ವಪಕ್ಷದಲ್ಲಿಯೂ ಆ ಮಹಾನ್ ನಾಯಕನಿಗೆ ಪ್ರಬಲ ಪೈಪೋಟಿಯ ರಾಜಕೀಯ ಶತ್ರುಗಳಿದ್ದಾರೆ. ಹೀಗಾಗಿ ಅವರ ರಾಜಕೀಯ ಭವಿಷ್ಯವೂ 'ಸಿಡಿ' ಪ್ರಕರಣದಲ್ಲಿ ಸವಾಲಿನಲ್ಲಿದೆ ಎಂಬ ಮಾಹಿತಿಯಿದೆ.

ಸಂತ್ರಸ್ತ ಯುವತಿ ಹಾಗೂ ಆಕೆಯ ಪಾಲಕರ ಹೇಳಿಕೆ!

ಸಂತ್ರಸ್ತ ಯುವತಿ ಹಾಗೂ ಆಕೆಯ ಪಾಲಕರ ಹೇಳಿಕೆ!

ಸಂತ್ರಸ್ತ ಯುವತಿ ಹಾಗೂ ಆಕೆಯ ಪಾಲಕರು ಕೊಟ್ಟಿರುವ ಹೇಳಿಕೆಗಳು ಒಂದಕ್ಕೊಂದು ಭಿನ್ನವಾಗಿಯೇ. ಅದು ತನಿಖೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಅನುಕೂಲವಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಹೇಳಿಕೆ ಬಿಡುಗಡೆಯಾಗಿತ್ತು. ಹೇಳಿಕೆಯಲ್ಲಿ ರಮೇಶ್ ಜಾರಕಿಹೊಳಿ ಅವರ ಮೇಲೆ ಆರೋಪಿಸಲಾಗಿತ್ತು.

ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿಕೆ ನೀಡಿದ್ದರು. ಜೊತೆಗೆ ತನ್ನ ತಂದೆ-ತಾಯಿಗಳು ಹಾಗೂ ತಾನು ನಾಲ್ಕೈದು ಬಾರಿ ಆತ್ಮಹತ್ಯಗೆ ಪ್ರಕಯತ್ನಿಸಿದ್ದೇವೆ ಎಂದು ಹೇಳಿಯಲ್ಲಿ ತಿಳಿಸಿದ್ದರು. ಆದರೆ ಸಂತ್ರಸ್ತ ಯುವತಿಯ ತಂದೆ-ತಾಯಿ ಹೇಳುತ್ತಿರುವುದೇ ಬೇರೆ.

ಆ ಯುವತಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಆಕೆಯ ತಂದೆ ತಾಯಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಆತ್ಮಹತ್ಯೆಯ ಕುರಿತು ಅವರು ಮಾತನಾಡಿಲ್ಲ, ಬದಲಿಗೆ ತಮ್ಮ ಮಗಳು ಜೀವಕ್ಕೆ ಅಪಾಯವಿದೆ ಎಂದು ಮಾತನಾಡಿದ್ದಳು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಆ ಯುವತಿ ಪದೇ ಪದೇ ರಾಜಕೀಯ ಮಾತನಾಡುತ್ತಿರುವುದು ಮತ್ತೊಂದು ಸಂಶಯಕ್ಕೆ ಕಾರಣವಾಗಿದೆ.

ಪದೇ ಪದೇ ರಾಜಕೀಯ ಪ್ರಸ್ತಾಪ ಮಾಡುತ್ತಿರುವ ಯುವತಿ!

ಪದೇ ಪದೇ ರಾಜಕೀಯ ಪ್ರಸ್ತಾಪ ಮಾಡುತ್ತಿರುವ ಯುವತಿ!

ಸಂತ್ರಸ್ತ ಯುವತಿ ಪದೇ ಪದೇ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಏಕಾಂತದಲ್ಲಿದ್ದಾಗಲೂ ಸಿಎಂ ಯಡಿಯೂರಪ್ಪ, ಬಿಜೆಪಿ ಹಾಗೂ ಇತರ ರಾಜಕೀಯ ವಿಚಾರಗಳನ್ನು ಆ ಯುವತಿ ಪ್ರಸ್ತಾಪಿಸಿದ್ದಾರೆ. ಜೊತೆಗೆ 'ಸಿಡಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಆಗುತ್ತಿದ್ದಂತೆಯೇ ತನ್ನ ಬೆಂಬಲಕ್ಕೆ ಯಾವುದೇ ರಾಜಕೀಯ ನಾಯಕರಿಲ್ಲ ಎಂದು ಪ್ರಖರವಾಗಿ ಉಲ್ಲೇಖಿಸಿದ್ದಾರೆ.

ಹೀಗಾಗಿ ಯುವತಿ ಪದೇ ಪದೇ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿರುವುದರಿಂದ ಎಸ್‌ಐಟಿ ಟೀಂ ಆ ಬಗ್ಗೆ ಹೆಚ್ಚಿನ ಒತ್ತು ನೀಡಿ ತನಿಖೆ ಮಾಡಲೂಬಹುದು. ಆಗ ಅದರ ನೇರ ಪರಿಣಾಮ ಆ 'ಮಹಾನ್ ನಾಯಕ'ನ ಮೇಲಾಗುವುದರಲ್ಲಿ ಸಂಶಯವಿಲ್ಲ.

ಪಕ್ಷಾತೀತವಾಗಿ ರಾಜಕೀಯ ನಾಯಕರ ಅಸಮಾಧಾನ!

ಪಕ್ಷಾತೀತವಾಗಿ ರಾಜಕೀಯ ನಾಯಕರ ಅಸಮಾಧಾನ!

ಪಕ್ಷಾತೀತವಾಗಿ ರಾಜಕೀಯ ನಾಯಕರೂ ಈ 'ಸಿಡಿ' ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತನಿಖೆಯಿಂದ ಒಂದೊಮ್ಮೆ ಇದು ರಾಜಕೀಯವಾಗಿ ವಿರೋಧಿಗಳನ್ನು ಹಣಿಯಲು ಮಾಡಿದ ಕುತಂತ್ರ ಎಂದು ಸಾಬೀತಾದಲ್ಲಿ ಅದನ್ನು ಬಹಿರಂಗವಾಗಿ ಖಂಡಿಸಬೇಕು ಎಂದು ರಾಜಕಾರಣಿಗಳು ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ.


ಇಡೀ 'ಸಿಡಿ ಪ್ರಕರಣ'ದ ಕುರಿತು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳ ಅಭಿಪ್ರಾಯ ಒಂದೇ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ರಾಜಕೀಯ ವ್ಯಕ್ತಿಯ 'ಕೈ'ವಾಡ ಕಂಡುಬಂದಲ್ಲಿ ಅದನ್ನು ಖಂಡಿಸಬೇಕು. ಜೊತೆಗೆ ಇಂತಹ ಕುತಂತ್ರದ ರಾಜಕೀಯದಿಂದ ಇಡೀ ನಾಡಿಗೆ ಕಳಂಕ ಬರಯತ್ತದೆ. ಭ್ರಷ್ಟಾಚಾರ, ಅಕ್ರಮ ಬೇರೆ ವಿಚಾರಗಳು. ಆದರೆ ಹೀಗೆ ಟ್ರ್ಯಾಪ್ ಮಾಡಿ ರಾಜಕೀಯ ವಿರೋಧಿಗಳನ್ನು ಹಣಿಯುವ ಕುತಂತ್ರಕ್ಕೆ ಬೆಂಬಲ ಕೊಡಬಾರದು ಎಂದು ಹಿರಿಯ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.


ಹೀಗಾಗಿ 'ಆ ಸಂತ್ರಸ್ತ ಯುವತಿ'ಯ ಹೇಳಿಕೆಯಿಂದ ಆ 'ಮಹಾನ್ ನಾಯಕ'ನ ರಾಜಕೀಯ ಭವಿಷ್ಯವೇ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿಗೆ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ನಡೆದಿವೆ ಎಂಬ ಮಾಹಿತಿಯಿದೆ.

English summary
Ramesh Jarkiholi CD Row: Is Victim Girl Statement Decides Future of Great Leader Political Carrier. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X