ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆ ಪತ್ರಿಕೆ ಲೀಕ್; ಚಾರ್ಜ್‌ಶೀಟ್ ವಿವರ

|
Google Oneindia Kannada News

ಬೆಂಗಳೂರು, ಆಗಸ್ಟ್ 08: ಅಸಿಸ್ಟೆಂಟ್ ಪ್ರೊಫೆಸರ್ ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‌ನ‌ ಇಂಟರೆಸ್ಟಿಂಗ್ ಮಾಹಿತಿ ಲಭ್ಯವಾಗಿದ್ದು, ಪ್ರಕರಣದಲ್ಲಿ ನಾಲ್ಕು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಪ್ರಮುಖ ಆರೋಪಿ ಸೌಮ್ಯ , ಡಾಕ್ಟರ್ ನಾಗರಾಜ್ ಸೇರಿ ನಾಲ್ವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ‌. ದೋಷಾರೋಪಣ ಪಟ್ಟಿಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಹೇಗೆ ಮತ್ತು ಹೇಗೆಲ್ಲಾಆಯ್ತು ಅನ್ನೋ ಮಾಹಿತಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಆರೋಪಿ ಸೌಮ್ಯ, ಪ್ರಾಧ್ಯಾಪಕ ಡಾ. ನಾಗರಾಜ್ ಬಳಿ ಪಿಹೆಚ್ ಡಿ ವಿದ್ಯಾರ್ಥಿಯಾಗಿದ್ದರು.

ಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿ

ಡಾ. ನಾಗರಾಜ್ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಯಾರಾಗಿದ್ದ ಪ್ರಶ್ನೆ ಪತ್ರಿಕೆಯ ಬಂಡಲ್ ಗಳನ್ನು ಮನೆಯಲ್ಲಿಇಟ್ಟಿರುತ್ತಾರೆ. ಸೌಮ್ಯ ಮನೆಯಲ್ಲಿದ್ದ ಪ್ರಶ್ನೆ ಪತ್ರಿಕೆಗಳ ಪೋಟೋಗಳನ್ನ ಕ್ಲಿಕ್ಕಿಸಿಕೊಂಡು ತಾನು ಓದುಕೊಂಡಿದಲ್ಲದೇ ಗೆಳೆತಿಗೆಯೊಬ್ಬಳಿಗೆ ಕಳಿಸಿದ್ದಾರೆ.

CCB submitts charge sheet on question paper leak case

ಸೌಮ್ಯ ಗೆಳತಿ ಅವನ ಗೆಳೆಯನಿಗೆ ಫಾರ್ವಡ್ ಮಾಡಿದ್ದರು. ಆದರೆ ಆತ ಆ ಪ್ರಶ್ನೆ ಪತ್ರಿಕೆ ಕಡೆ ಗಮನಕೊಟ್ಟಿಲ್ಲ. ಪರೀಕ್ಷೆ ಬರೆದು ಬಂದು ಪರಿಶೀಲಿದ ವ್ಯಕ್ತಿಗೆ ಸೌಮ್ಯ ಗೆಳೆತಿ ಕಳಿಸಿಕೊಟ್ಟಿದ್ದ ಪತ್ರಿಕೆಯಲ್ಲಿ 18 ಪ್ರಶ್ನೆಗಳು ಬಂದಿರುತ್ತೆ. ಆಗ ಅಸಮಾಧಾನಗೊಂಡ ವ್ಯಕ್ತಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತಕರಾರು ಎತ್ತಿದ್ದಾನೆ.ಆತನಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕೊನೆಗೆ ಗೊತ್ತಾಗಿದೆ.

CCB submitts charge sheet on question paper leak case

ಇನ್ನೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಎರಡನೇ ಬಾರಿ ಪ್ರಕರಣದ ಆರೋಪಿ ಡಾ. ನಾಗರಾಜ್‌ನ ಸಿಸಿಬಿ ಕಸ್ಟಡಿಗೆ ಪಡೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಚಾರ್ಜ್ ಶೀಟ್ ಆದ ಬಳಿಕ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ‌ನಡೆಸುತ್ತಿದೆ.

Recommended Video

ಕೋಲಾರದಿಂದ ಸ್ಪರ್ಧಿಸ್ತಾರಾ ಸಿದ್ಧರಾಮಯ್ಯ..? | *Politics | OneIndia Kannada

English summary
CCB officials have submitted a charge sheet to the court in connection with the question paper leak case of Assistant Professor Geography. Interesting information about the charge sheet has been made available and the charge sheet has been submitted against four accused in the case,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X