ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021-22 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಗೆ CBSE ಬೋರ್ಡ್ ಡೆಡ್‌ಲೈನ್

|
Google Oneindia Kannada News

ಬೆಂಗಳೂರು, ಡಿ. 09: 2021-22 ನೇ ಸಾಲಿನ 09 ಮತ್ತು 10 ನೇ ತರಗತಿಗಳಿಗೆ ವಿದ್ಯಾರ್ಥಿಗಳ ನೋಂದಣಿಯನ್ನು ಡಿಸೆಂಬರ್ 15 ರಿಂದ ಆರಂಭವಾಗಲಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಂಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರಕಟಿಸಿದೆ. ಸಿಬಿಎಸ್ಇ ಅಧಿಕೃತ ವೆಬ್ ತಾಣದಲ್ಲಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಲಭ್ಯವಾಗಲಿದೆ.

ಸಿಬಿಎಸ್ಇ ನೋಂದಾಯಿತ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು 09 ಮತ್ತು 10 ನೇ ತರಗತಿಗೆ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮುನ್ನ ಶಾಲೆಗಳು ನೋಂದಣಿ ಮಾಡಿಕೊಳ್ಳಬೇಕು. ಜತೆಗೆ ಆನ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ 2022-23 ನೇ ಸಾಲಿನ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದು ಎಂದು ಸಿಬಿಎಸ್‌ಇ ಬೋರ್ಡ್ ತಿಳಿಸಿದೆ.

ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡುವ ಮುನ್ನ ಸಂಯೋಜಿತ (CBSE Affiliated) ಶಾಲೆಗಳು ಮೊದಲು ನೋಂದಣಿ ಮಾಡಿಕೊಳ್ಳಬೇಕು. ಹೊಸದಾಗಿ ಸಂಯೋಜಿತ ಶಾಲೆಗಳು ಪಾಸ್‌ವರ್ಡ್ ಸ್ವೀಕರಿಸದಿದ್ದಲ್ಲಿ, ಕೋಡ್ ಮತ್ತು ಪಾಸ್‌ವರ್ಡ್ ಪಡೆಯಲು ಸಂಬಂಧಿಸಿದ ಪ್ರಾದೇಶಿಕ ಕಚೇರಿ ಸಂಪರ್ಕಿಸಲು ಬೋರ್ಡ್ ಕೋರಿದೆ. ಇನ್ನು ನೂತನ ಸಿಬಿಎಸ್ಇ ಸಂಯೋಜಿತ ಶಾಲೆಗಳು ಮೊದಲು ಓಯಾಸಿಸ್ ಪೋರ್ಟಲ್‌ನಲ್ಲಿ ತಮ್ಮ ಮಾಹಿತಿ ಸಲ್ಲಿಸಬೇಕು. ಅಲ್ಲಿ ಮಾಹಿತಿ ಅಧಿಕೃತಗೊಂಡ ಬಳಿಕ ಮತ್ತೆ ಬದಲಾಯಿಸಲು ಸಾಧ್ಯವಿರಲ್ಲ. ಹೀಗಾಗಿ ಎಚ್ಚರಿಕೆಯಿಂದ ತುಂಬಬೇಕು. ಪ್ರಸಕ್ತ ಸಾಲಿನಿಂದ ತಿದ್ದುಪಡಿಗೆ ಅವಕಾಶವಿಲ್ಲ. ಹೀಗಾಗಿ ಶಾಲೆಯ ಎಲ್ಲಾ ಡಾಟಾ ಎಚ್ಚರಿಕೆಯಿಂದ ತುಂಬುವಂತೆ ಸಲಹೆ ನೀಡಿದೆ. ಅಪ್ಲಿಕೇಷನ್ ಪ್ರಕ್ರಿಯೆ ಸೇರಿದಂತೆ ಎಲ್ಲಾ ವಿವರಗಳನ್ನು ಸಿಬಿಎಸ್ಇ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸ್ಪಷ್ಟಪಡಿಸಿದೆ.

CBSE Board Exam : CBSE 9th and 10 Std students Registration starts form Dec 15

ಸಿಬಿಎಸ್ಇ ದ್ವಿತೀಯ ಪಿಯುಸಿ ಪರಿಕ್ಷೆಗೆ ಅವಕಾಶ: ಇನ್ನು 2021 -2022 ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಖಾಸಗಿ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಡಿ. 2 ರಂದೇ ಆರಂಭಿಸಿತ್ತು. ಖಾಸಗಿ ವಿದ್ಯಾರ್ಥಿಗಳು ಮುಂಬರಲಿರುವ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿದೆ. 2021 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಸಿಬಿಎಸ್ಇ ಸೂಚಿಸಿದೆ. ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ತಮ್ಮ ಅಂಕ ಹೆಚ್ಚಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಕೂಡ ನೋಂದಣಿ ಮಾಡಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಪರೀಕ್ಷೆಯು ಟರ್ಮ್ - 2 ಪಠ್ಯಕ್ರಮ ಆಧಾರದ ಮೇಲೆ ನಡೆಯಲಿದೆ. 2021-22 ನೇ ಶೈಕ್ಷಣಿಕ ಸಾಲಿನ ಖಾಸಗಿ ವಿದ್ಯಾರ್ಥಿಗಳಿಗೆ ಹೊಸ ರೋಲ್ ನಂಬರ್ ನೀಡಲಾಗುತ್ತದೆ. ಡಿಸೆಂಬರ್ 20 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಕೊನೆ ದಿನಾಂಕ. ಎರಡು ಸಾವಿರ ದಂಡದೊಂದಿಗೆ ಡಿ. 30 ರೊಳಗೆ ಹೆಸರು ನೊಂದಾಯಿಸಲು ಕಾಲಾವಕಾಶ ನೀಡಲಾಗಿದೆ.

Recommended Video

Virat Kohli ಅಭಿಮಾನಿಗಳು ಸಿಟ್ಟಿನಿಂದ ಮಾಡಿದ ಕೆಲಸ ಏನು ಗೊತ್ತಾ | Oneindia Kannada

English summary
CBSE Notification About 9th std and 10 std students Registration and Examination of 2021- 22 know more 2021-22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X