ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ. ಶಿವಕುಮಾರ್ ಮನೆಯಲ್ಲಿ ಇಂದು ಏನೇನಾಯ್ತು? ಇಲ್ಲಿದೆ ಮಾಹಿತಿ!

|
Google Oneindia Kannada News

ಬೆಂಗಳೂರು, ಅ. 05: ಸತತ 13 ಗಂಟೆಗಳ ಬಳಿಕ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲಿನ ಸಿಬಿಐ ದಾಳಿ ಅಂತ್ಯವಾಗಿದೆ. ಡಿಕೆಶಿ ಅವರ ಸದಾಶಿವನಗರದ ನಿವಾಸದ ಪಕ್ಕದಲ್ಲಿನ ಕಚೇರಿಯಲ್ಲಿ ತಪಾಸಣೆ ಮುಗಿಸಿದ ಬಳಿಕ ಅಲ್ಲಿಂದ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ. ಇಡೀ ದಿನ ವಿಚಾರಣೆ ಎದುರಿಸಿದ ಡಿಕೆಶಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ಟಿದ್ದಾರೆ.

ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಇವತ್ತು ಅಂತಿಮಗೊಳಿಸಬೇಕಾಗಿತ್ತು. ಆದರೆ ಸಿಬಿಐ ರೇಡ್‌ನಿಂದಾಗಿ ಇಂದಿನ ಎಲ್ಲ ಸಭೆಗಳನ್ನು ಡಿಕೆ ಶಿವಕುಮಾರ್ ಅವರು ರದ್ದುಗೊಳಿಸಿದ್ದರು. ಜೊತೆಗೆ ಇವತ್ತು ಏನೆನಾಯ್ತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಡಿಕೆಶಿ ನಿವಾಸದ ಮೇಲೆ ದಾಳಿಗೆ ನಿನ್ನೆಯೇ ಸರ್ಚ್​ ವಾರಂಟ್​ ಪಡೆದಿದ್ದ ಸಿಬಿಐ ಅಧಿಕಾರಿಗಳು ಇವತ್ತು ಬೆಳಗ್ಗೆಯೆ ದಾಳಿ ಮಾಡಿದ್ದರು. ಬೇರೆ ಬೇರೆ ಕಡೆಗಳಿಂದ ನಿನ್ನೆ ರಾತ್ರಿಯೇ ಬೆಂಗಳೂರಿನ ಸಿಬಿಐ ಕಚೇರಿಗೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳು, ಇವತ್ತು ಬೆಳಗ್ಗೆ ವಿವಿಧ ವಾಹನಗಳಲ್ಲಿ ಅಲ್ಲಿಂದಲೇ ಸದಾಶಿವನಗರದ ಕಡೆಗೆ ಹೊರಟರು.

ಬೆಳಗ್ಗೆ 6ಕ್ಕೆ ರೇಡ್!

ಬೆಳಗ್ಗೆ 6ಕ್ಕೆ ರೇಡ್!

ಬೆಳಗ್ಗೆ 6 ಗಂಟೆಗೆ ಸದಾಶಿವನಗರದ ಡಿಕೆಶಿ ನಿವಾಸ ತಲುಪಿದ್ದ ಅಧಿಕಾರಿಗಳು ರೇಡ್ ಮಾಡಿದರು. ಅದೇ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಅವರ ನಿವಾಸದ ಮೇಲೂ ಸಿಬಿಐ ದಾಳಿ ಆಗಿತ್ತು. ಇವತ್ತು ಒಟ್ಟು 60 ಮಂದಿ ಅಧಿಕಾರಿಗಳಿಂದ ಏಕಕಾಲದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದ 15 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಆರಂಭವಾಗಿತ್ತು.

ಮೊದಲಿಗೆ ದೊಡ್ಡಆಲಹಳ್ಳಿ ಮನೆಯಿಂದ ಸಿಬಿಐ ದಾಳಿ ಆರಂಭವಾಗಿತ್ತು, ದೊಡ್ಡಆಲಹಳ್ಳಿಯ ಡಿಕೆಶಿ ನಿವಾಸದಲ್ಲಿ 8 ಜನರ ತಂಡದಿಂದ ಸಿಬಿಐ ರೇಡ್ ಆಗಿತ್ತು. ಅದಾದ ಬಳಿಕ ಬೆಂಗಳೂರಿನ ಸದಾಶಿವ ನಗರದ ಡಿಕೆಶಿ ನಿವಾಸದ ಮೇಲೂ ದಾಳಿ ನಡೆಯಿತು. ಆದರೆ ಬೆಳಗ್ಗೆ ಬಾಗಿಲು ಬಡಿದ ಸಿಬಿಐ ಅಧಿಕಾರಿಗಳನ್ನು ಕಂಡು ಡಿ.ಕೆ. ಶಿವಕುಮಾರ್ ಅವರು ಗರಂ ಆಗಿದ್ದರು.

ಬಾಗಿಲಲ್ಲಿಯೇ ತಡೆದ ಡಿಕೆಶಿ

ಬಾಗಿಲಲ್ಲಿಯೇ ತಡೆದ ಡಿಕೆಶಿ

ಅಧಿಕಾರಿಗಳನ್ನು ತಮ್ಮ ಮನೆ ಬಾಗಿಲಲ್ಲೇ ಪ್ರಶ್ನಿಸಿದ ಡಿ.ಕೆ. ಶಿವಕುಮಾರ್ ಅವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆ ಸಂದರ್ಭದಲ್ಲಿ ಡಿಕೆಶಿ ಮತ್ತು ಸಿಬಿಐ ಅಧಿಕಾರಿ ನಡುವೆ ಮಾತುಕತೆ ನಡೆಯಿತು. ನಿನ್ನೆ ಕೋರ್ಟ್‌ನಿಂದ ಬಲವಂತದ ಕ್ರಮಕ್ಕೆ ತಡೆ ಸಿಕ್ಕಿದೆ. ನೀವು ನಮ್ಮ ಮನೆ ದಾಳಿ ಮಾಡಿದ್ದು ಯಾಕೆ ಎಂದು ಡಿಕೆಶಿ ಅವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.


ಆದರೆ ಬಲವಂತದ ಕ್ರಮಕ್ಕೆ ತಡೆ ಸಿಕ್ಕಿರುವ ಬಗ್ಗೆ ನಮಗೇನು ಮಾಹಿತಿ ಇಲ್ಲ ಎಂದು ಸಿಬಿಐ ಅಧಿಕಾರಿಗಳು ಶಿವಕುಮಾರ್ ಅವರಿಗೆ ಸ್ಪಷ್ಟಪಡಿಸಿದರು. ಅದಾದ ಬಳಿಕ ಶಿವಕುಮಾರ್ ಅವರ ನಿವಾಸದಲ್ಲಿ ಸರ್ಚ್ ಆಪರೇಷನ್ ಶುರುವಾಯ್ತು. ತಕ್ಷಣವೇ ಡಿ.ಕೆ. ಶಿವಕುಮಾರ್ ಅವರಿಂದ ಮೊಬೈಲ್ ಫೋನ್ ಪಡೆದುಕೊಂಡ ಅಧಿಕಾರಿಗಳು, ಜೊತೆಗೆ ಮನೆಯ ಇಂಟರ್​ನೆಟ್ ಸಂಪರ್ಕವನ್ನು ಕಡಿತಗೊಳಿಸಿದ್ದರು.

ಸಂಪರ್ಕ ಕಡಿತಗೊಳಿಸಿದ್ದ ಅಧಿಕಾರಿಗಳು

ಸಂಪರ್ಕ ಕಡಿತಗೊಳಿಸಿದ್ದ ಅಧಿಕಾರಿಗಳು

ಯಾವುದೇ ಕಾರಣಕ್ಕೂ ಯಾರ ಜೊತೆಯೂ ಸಂಪರ್ಕಿಸದಂತೆ ಡಿ.ಕೆ. ಶಿವಕುಮಾರ್ ಅವರಿಗೆ ನಿರ್ಬಂಧ ಹೇರಲಾಗಿತ್ತು. ಡಿ.ಕೆ. ಶಿವಕುಮಾರ್ ಅವರನ್ನು ಉಳಿದ ಹೊರತುಪಡಿಸಿ ಮನೆ ಮಂದಿಯನ್ನು ಸಿಬಿಐ ಅಧಿಕಾರಿಗಳು ಮನೆಯಿಂದ ಹೊರಗೆ ಕಳುಹಿಸಿದರು. ಡಿಕೆಶಿ ಅವರ ಪತ್ನಿ, ಪುತ್ರಿ ಹಾಗೂ ಪುತ್ರರನ್ನು ಪಕ್ಕದ ಕಚೇರಿಗೆ ಕಳುಹಿಸಲಾಗಿತ್ತು.

ಸದಾಶಿವನಗರ ನಿವಾಸ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಸಿಬಿಐ ಏಕಕಾಲಕ್ಕೆ ತಪಾಸಣೆ ಆರಂಭಿಸಿತ್ತು. ಹಾಸನದಲ್ಲಿರುವ ಡಿಕೆಶಿ ಆಪ್ತನ ಮನೆ ಮೇಲೂ ಸಿಬಿಐ ರೇಡ್ ಮಾಡಲಾಗಿತ್ತು. ಜೊತೆಗೆ ಆಪ್ತ ಸಚಿನ್ ನಾರಾಯಣ್ ಅವರ ಮನೆಯ ಮೇಲೂ ಸಿಬಿಐ ದಾಳಿ ನಡೆದಿತ್ತು.

ವಾಕಿಂಗ್ ಮಾಡುತ್ತಿದ್ದ ಡಿಕೆಶಿ

ವಾಕಿಂಗ್ ಮಾಡುತ್ತಿದ್ದ ಡಿಕೆಶಿ

ಅಧಿಕಾರಿಗಳು ಮನೆಗೆ ಬರೋ ವೇಳೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ವಾಕಿಂಗ್ ಮಾಡುತ್ತಿದ್ದರು. ಇಂದು ಸರಣಿ ಸಭೆಗಳು ಇದ್ದಿದ್ದರಿಂದ ಬೆಳಗ್ಗೆ 5.30ಕ್ಕೆ ಎದ್ದಿದ್ದ ಡಿಕೆಶಿ ಅವರು ವಾಕಿಂಗ್ ಮಾಡುತ್ತಿದ್ದರು. ನಿವಾಸದ ಮೂರನೇ ಮಹಡಿಯಲ್ಲಿರುವ ಟ್ರೆಡ್​ಮಿಲ್​ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಬಾಗಿಲು ಬಡಿದ ಸಿಬಿಐ ಅಧಿಕಾರಿಗಳು, ಅಧಿಕಾರಿಗಳು ಬಾಗಿಲು ಬಡಿದ ವೇಳೆ ಸಿಬ್ಬಂದಿ ಬಾಗಿಲು ತೆರೆದಿದ್ದರು.

ಲಿಫ್ಟ್‌ನಲ್ಲಿ ಕೆಳಗೆ ಬಂದ ಡಿಕೆಶಿ

ಲಿಫ್ಟ್‌ನಲ್ಲಿ ಕೆಳಗೆ ಬಂದ ಡಿಕೆಶಿ

ಸಿಬಿಐ ಅಧಿಕಾರಿಗಳು ಬಂದಿರುವ ಮಾಹಿತಿಯನ್ನು ಸಿಬ್ಬಂದಿ ತಿಳಿಸಿದರು. ತಕ್ಷಣ ಲಿಫ್ಟ್‌ನಿಂದ ಕೆಳಗೆ ಬಂದ ಡಿ.ಕೆ. ಶಿವಕುಮಾರ್ ಅವರಿಗೆ ಸರ್ಚ್ ವಾರಂಟ್ ಹಾಗೂ FIRನ್ನು ಸಿಬಿಐ ಅಧಿಕಾರಿಗಳು ತೋರಿಸಿದರು. ಸದಾಶಿವನಗರದ ಮನೆಯೆ ಮೇಲೆ ಒಟ್ಟು 10 ಸಿಬಿಐ ಅಧಿಕಾರಿಗಳಿಂದ ಪರಿಶೀಲನೆ ನಡೆಯಿತು. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಹೊರಗೆ ಬರುವಂತೆ ಸ್ವತಃ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಆಗ ಎಲ್ಲರಿಂದಲೂ ಮೊದಲು ಮೊಬೈಲ್‌ಗಳನ್ನ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು, ಸಿಬ್ಬಂದಿ ಮತ್ತು ಗನ್‌ಮ್ಯಾನ್ ಗಳನ್ನು ಹೊರಗೆ ಕಳುಹಿಸಿದರು. ಎರಡು ವಾಹನಗಳಲ್ಲಿ ಡಿಕೆಶಿ ಮನೆಗೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳು ಸತತ 13 ಗಂಟೆಗಳ ಕಾಲ ತಪಾಸಣೆ ನಡೆಸಿದರು.

Recommended Video

RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada
ಒಟ್ಟು 15 ಕಡೆಗಳಲ್ಲಿ ದಾಳಿ

ಒಟ್ಟು 15 ಕಡೆಗಳಲ್ಲಿ ದಾಳಿ

ದೆಹಲಿ, ಮುಂಬೈ, ಹಾಸನ, ದೊಡ್ಡಾಲಹಳ್ಳಿ, ಬೆಂಗಳೂರು ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಸತತ ಪರಿಶೀಲನೆಯನ್ನು ಅಧಿಕಾರಿಗಳು ಮಾಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಘೋಷಣೆ, ಪ್ರತಿಭಟನೆ ಜೋರಾಗಿಯೆ ನಡೆಯಿತು.

ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಇದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು. ಆದರೆ ಅದನ್ನು ತಳ್ಳಿ ಹಾಕಿದ ಬಿಜೆಪಿ ನಾಯಕರು ಸಿಬಿಐ ಸ್ವಾಯತ್ತ ಸಂಸ್ಥೆ ಎಂದು ಸಮಜಾಯಿಸಿ ಕೊಟ್ಟರು. ಒಟ್ಟಾರೆ ಇಡೀ ದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಸ್ತಿಗಳ ಮೇಲೆ ನಡೆದ ದಾಳಿಯ ಸುತ್ತಲೂ ರಾಜ್ಯ ರಾಜಕಾರಣ ನಡೆಯಿತು.

English summary
CBI began raids this morning at Congress leader DK Shivakumar;s premises in Karnataka, Mumbai and other places in an alleged corruption case. Check out the highlights and developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X