• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಅಧಿಕೃತ ಹೇಳಿಕೆ: ದಾಳಿಯ ವೇಳೆ ಡಿಕೆಶಿ ಮನೆಯಲ್ಲಿ ಸಿಕ್ಕಿದ್ದು ಬರೀ ಪಂಚೆ, ಸೀರೆಯಲ್ಲ

|

ಬೆಂಗಳೂರು, ಅ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ವಿವಿದೆಡೆ ನಡೆದ ಸಿಬಿಐ ದಾಳಿ ಸೋಮವಾರ (ಅ 5) ಸಂಜೆ ಮುಕ್ತಾಯಗೊಂಡಿದೆ. ಇದಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, "ತಿಹಾರ್ ಜೈಲಿನಿಂದ ಹೊರಗೆ ಬಂದಾಗ, ಕೈಮುಗಿದು ಹೊರಗೆ ಬಂದಿದ್ದೇನೆ, ನೊಂದು ಹೊರಗೆ ಬಂದಿದ್ದೇನೆ"ಎಂದು ಹೇಳಿದರು.

ಇದಕ್ಕೂ ಮೊದಲು ಸದಾಶಿವ ನಗರದ ನಿವಾಸದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್,"ನೀವು ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಈ ಜನ್ಮದಲ್ಲಿ ಇದನ್ನು ಮರೆಯುವುದಿಲ್ಲ"ಎಂದು ಭಾವನಾತ್ಮಕವಾಗಿ ನುಡಿದರು.

ಡಿಕೆಶಿಯನ್ನು ಖೆಡ್ಡಾಗೆ ತಳ್ಳಿದವರಾರು: ಬೆಳಗಾವಿಯಿಂದ ಸೋರಿಕೆ ಆಯ್ತಾ ಸಿಬಿಐಗೆ ಮೇಘ ಸಂದೇಶ?

"ಮುಂಬೈನಲ್ಲಿ ಮೂರು ಕೋಟಿ ಸಿಕ್ಕಿತು, ಬೆಂಗಳೂರಿನಲ್ಲಿ ಐವತ್ತು ಲಕ್ಷ ಸಿಕ್ಕಿತು ಎಂದು ಮಾಧ್ಯಮದದಲ್ಲಿ ವರದಿಯಾಗಿದೆ. ಹಾರೆ, ಪಿಕ್ಕಾಸಿನಿಂದ ಬಾಗಿಲು ಒಡೆದರು ಎಂದೆಲ್ಲಾ ಮಾಧ್ಯಮದವರು ವರದಿ ಮಾಡಿದರು. ಆದರೆ, ಈ ಬಗ್ಗೆ ನನಗೆ ಬೇಸರವಿಲ್ಲ"ಎಂದು ಡಿಕೆಶಿ ಹೇಳಿದರು.

"ಸಿಬಿಐ ದಾಳಿಯ ವೇಳೆ ಪಂಚೆ, ಸೀರೆ, ಪ್ಯಾಂಟ್, ಶರ್ಟ್ ಸಿಕ್ಕಿದೆ, ಅದನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ"ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ಆದರೆ, ಅಧಿಕೃತವಾಗಿ ಡಿಕೆಶಿ ಮನೆಯಲ್ಲಿ ಸಿಕ್ಕಿದ್ದೇನು?ಮುಂದೆ ಓದಿ..

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದಿನೇಶ್ ಗುಂಡೂರಾವ್ ಟ್ವೀಟಿಗೆ ನೆಟ್ಟಿಗರ ರಿವರ್ಸ್ ಸ್ವಿಂಗ್!

 ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

ನನ್ನ ಮನೆಯಲ್ಲಿ 1.77ಲಕ್ಷ, ನನ್ನ ತಮ್ಮನ ದೆಹಲಿ ನಿವಾಸದಲ್ಲಿ ಒಂದೆರಡು ಲಕ್ಷ ರೂಪಾಯಿ ಸಿಕ್ಕಿರಬಹುದು. ಇನ್ನು ನನ್ನ ತಾಯಿಯ ಮನೆಯಲ್ಲಿ ಏನೇನು ಸಿಕ್ಕಿದೆ ಎನ್ನುವುದು ನನಗೆ ತಿಳಿದಿಲ್ಲ. ದಾಳಿಯ ವೇಳೆ, ಬೇರೆಯವರ ಮನೆಯಲ್ಲಿ ಏನೇನು ಸಿಕ್ಕಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು. (ಚಿತ್ರ: ಡಿಕೆಶಿ ಮನೆ, ಕೃಪೆ ಪಿಟಿಐ)

 ಸಿಬಿಐ ಅಧಿಕೃತವಾಗಿ ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟನೆ

ಸಿಬಿಐ ಅಧಿಕೃತವಾಗಿ ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟನೆ

ದಾಳಿಯ ವೇಳೆ 57ಲಕ್ಷ ರೂಪಾಯಿ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಇದಲ್ಲದೇ, 74.93ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಡಿಕೆಶಿ ಮತ್ತು ಇತರರ ಮೇಲೆ ಪ್ರಕರಣವೂ ದಾಖಲಾಗಿದೆ ಎಂದು. ಸಿಬಿಐ ಅಧಿಕೃತವಾಗಿ ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದೆ.

 ಡಿಕೆಶಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು

ಡಿಕೆಶಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು

ಕರ್ನಾಟಕದ ಒಂಬತ್ತು, ದೆಹಲಿಯ ನಾಲ್ಕು ಮತ್ತು ಮುಂಬೈನ ಒಂದು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ. ಇದರ ಜೊತೆಗೆ, ಡಿಕೆಶಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ದಾಖಲೆಗಳನ್ನೂ ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

  IPL 2020 RCB vs DC | ವಿರಾಟ್ ಕೊಹ್ಲಿ ಆಟ ವ್ಯರ್ಥ | Oneindia Kannada
  ಸತ್ಯವನ್ನೂ ತೋರಿಸಿದ್ದೀರಿ, ಅಸತ್ಯವನ್ನೂ ಹೇಳಿದ್ದೀರಿ

  ಸತ್ಯವನ್ನೂ ತೋರಿಸಿದ್ದೀರಿ, ಅಸತ್ಯವನ್ನೂ ಹೇಳಿದ್ದೀರಿ

  ನನಗೆ ಕೊಟ್ಟಿರುವ ಪಂಚನಾಮ ನನಗೆ ಸಿಕ್ಕ ಶಕ್ತಿ. ನೀವು (ಮಾಧ್ಯಮದವರು) ಇಂದು ಸತ್ಯವನ್ನೂ ತೋರಿಸಿದ್ದೀರಿ, ಅಸತ್ಯವನ್ನೂ ಹೇಳಿದ್ದೀರಿ. ಆದರೆ, ನನ್ನ ಕುಟುಂಬ ಈ ದೇಶದ ಕಾನೂನಿಗೆ ಬೆಲೆ ಕೊಡುವವರು. ಇಂತಹ ದಾಳಿಯಿಂದ ನನ್ನನ್ನು ಕುಗ್ಗಿಸಬಹುದು ಎಂದರೆ ಅದು ಸಾಧ್ಯವಿಲ್ಲ"ಎಂದು ಡಿಕೆಶಿ ಹೇಳಿದರು.

  English summary
  CBI Raid In KPCC President DK Shivakumar House And Other Place: What Is Recovered, Official Statement From CBI,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X