• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದಿನೇಶ್ ಗುಂಡೂರಾವ್ ಟ್ವೀಟಿಗೆ ನೆಟ್ಟಿಗರ ರಿವರ್ಸ್ ಸ್ವಿಂಗ್!

|

ಬೆಂಗಳೂರು, ಅ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಸಿಬಿಐ ದಾಳಿಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ ಟ್ವೀಟ್ ಮತ್ತು ಇದಕ್ಕೆ ಬಂದ ಟ್ವಿಟ್ಟಿಗರ ಪ್ರತಿಕ್ರಿಯೆ ಹೀಗಿದೆ:

"@DKShivakumar ಮನೆ ಮೇಲಿನ #CBI ದಾಳಿ ರಾಜಕೀಯ ಪ್ರೇರಿತ. ಶಿರಾ ಹಾಗೂ R.R.ನಗರ ಉಪಚುನಾವಣೆಯ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಅದರ ಹಿಂದಿನ ಉದ್ದೇಶ ತೋರಿಸುತ್ತದೆ. ಬಿಜೆಪಿ ನಾಯಕರು ತಮ್ಮ ದ್ವೇಷದ ರಾಜಕಾರಣಕ್ಕೆ ತಕ್ಕ ಬೆಲೆ ತೆರುವ ದಿನ ದೂರವಿಲ್ಲ".

ಡಿಕೆಶಿಯನ್ನು ಖೆಡ್ಡಾಗೆ ತಳ್ಳಿದವರಾರು: ಬೆಳಗಾವಿಯಿಂದ ಸೋರಿಕೆ ಆಯ್ತಾ ಸಿಬಿಐಗೆ ಮೇಘ ಸಂದೇಶ?

"ಸಂಚಿನ ದಾಳಿಯ ಮೂಲಕ ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದು ಬಿಜೆಪಿ ನಾಯಕರ ಭ್ರಮೆಯಷ್ಟೆ. ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುವ CBIಗೆ @BSYBJP ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಿಗೆ ಕಾಣಿಸುತ್ತಿಲ್ಲವೆ? ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುವುದ್ಯಾಕೆ?" ಇದು ದಿನೇಶ್ ಗುಂಡೂರಾವ್ ಮಾಡಿದ್ದ ಟ್ವೀಟ್.

ದಿನೇಶ್ ಟ್ವೀಟ್ ಗೆ ಬಂದ ರಿಪ್ಲೈನ ಕೆಲವೊಂದು ಸ್ಯಾಂಪಲ್ ಹೀಗಿದೆ: "ಅದೇ ರಾಗ ಅದೇ ಹಾಡು. ಕೇಳಿ ಕೇಳಿ ಕಿವಿ ತೂತಾಗಿದೆ. ಬೇರೆ ಏನಾದ್ರು ಹೇಳಿ ಸ್ವಾಮಿ. ಡಿಕೆಶಿ ಸಿಎಂ ಆಗಬಾರದೆಂದು ಕಾಂಗ್ರೆಸ್ ನ ಕೆಲವು ಪ್ರಮುಖರೆ ಯಾಕೆ ಮಾಡಿಸಿರಬಾರದು. ಅದೇ ಮೊನ್ನೆ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ನಾಟಕಕ್ಕೆ ಸ್ಕ್ರಿಪ್ಟ್ ಮಾಡಿದ್ರಲ್ಲ ಹಾಗೆ".

''ರಾಜಕೀಯ ದ್ವೇಷದಿಂದ ಡಿಕೆಶಿ ಮನೆ ಮೇಲೆ ದಾಳಿ'': ಕೆಪಿಸಿಸಿ

ನಿಮಗೂ ಡಿಕೆಶಿ ಗೆ ಆಗ್ ಬರಲ್ಲ ಅದೇನ್ ಡವ್ ಮಾಡ್ತೀರಾ

"ನಿಮ್ಮದೇ ಕೈವಾಡ ಇರುತ್ತೆ ಹೆಂಗೂ ನಿಮಗೂ ಡಿಕೆಶಿ ಗೆ ಆಗ್ ಬರಲ್ಲ ಅದೇನ್ ಡವ್ ಮಾಡ್ತೀರಾ ಗುಂಡಣ್ಣ. ನೀವೇನ್ ತಿಪ್ಪರಲಾಗ ಹಾಕಿದ್ರು ಆರ್ ಆರ್ ನಗರ, ಶಿರಾ ಗೆಲ್ಲಲ್ಲ ಸುಮ್ನೆ ಕಾಲಹರಣ" ಎನ್ನುವ ಕಾಮೆಂಟ್ ದಿನೇಶ್ ಗುಂಡೂರಾವ್ ಟ್ವೀಟ್ ಗೆ ಬಂದಿದೆ.

5 ಕಡೆ ರೇಡ್ ಮಾಡ್ತಾರೆ ಅಂದ್ರೆ ಅಷ್ಟು ಬೇಗ ಹೇಗೆ ಆಸ್ತಿ ಮಾಡಿದ್ರು

5 ಕಡೆ ರೇಡ್ ಮಾಡ್ತಾರೆ ಅಂದ್ರೆ ಅಷ್ಟು ಬೇಗ ಹೇಗೆ ಆಸ್ತಿ ಮಾಡಿದ್ರು

'ಪಾಪ ದಿನೇಶ್ ಅಣ್ಣನ ಮೇಲೆ ಇನ್ನೂ ರೇಡ್ ಆಗಿಲ್ಲ,5 ಕಡೆ ರೇಡ್ ಮಾಡ್ತಾರೆ ಅಂದ್ರೆ ಅಷ್ಟು ಬೇಗ ಹೇಗೆ ಆಸ್ತಿ ಮಾಡಿದ್ರು? ಒಬ್ಬ ಎರಡು ಎಕ್ರೆ ರೈತನ ಮಗ! ನಾವು business management ಓದಿದ್ದು ವ್ಯರ್ಥ.ಸುಮ್ಮನೆ ನಿಮ್ಮ ಜೊತೆ ಇಡಿದ್ದರೆ 500ರೂಪಾಯಿಗೆ ಜೈ ಅಂದಿದ್ದಾರೆ ಸಾಕಿತ್ತು ಅಲ್ಲವೇ' ಎನ್ನುವ ಕಾಮೆಂಟ್ ಬಂದಿದೆ.

ಎರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ

ಎರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ

'ಕಳ್ಳನಿಗೆ ಪಿಳ್ಳೆ ನೆವ ಅನ್ನೋ ಹಾಗೆ.. ಸಿಬಿಐ ರೈಡ್ ಒಂದು ನೆಪ.. ಎರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ'. 'ನೀವು ಶುರು ಮಾಡಿರುವ ಸಂಪ್ರದಾಯ ನಿಮ್ಮ ಮೇಲೆ ಯಾಕೆ ಪ್ರಯೋಗ ಆಗಬಾರದು?'. 'ಅರವತ್ತು ವರ್ಷ ನೀವ್ ಮಾಡಿದ್ದು ಅವರು ಈಗ ಮಾಡ್ತಿದ್ದಾರೆ ಮಾಡ್ಲಿ ಬಿಡಿ ಏನೂ ಇಲ್ಲದಿದ್ದರೆ ಯಾಕ್ ಅಂಜಿಕೆ' ಎನ್ನುವ ಕಾಮೆಂಟ್ ಬಂದಿದೆ.

  DK brothers ಮನೆ locker ಅಲ್ಲಿ ಸಿಕ್ಕಿದ್ದು ಎನ್ ಗೊತ್ತಾ? | Oneindia Kannada
  ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿದ್ದಾಗ ಸಿಬಿಐ ದಾಳಿ ನಡೆದರೆ ಅದು ಕಾನೂನು

  ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿದ್ದಾಗ ಸಿಬಿಐ ದಾಳಿ ನಡೆದರೆ ಅದು ಕಾನೂನು

  ದಿನೇಶಣ್ಣ ಪಾಪ ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿದ್ದಾಗ ಸಿಬಿಐ ದಾಳಿ ನಡೆದರೆ ಅದು ಕಾನೂನು. ಇಂದು ಬಿಜೆಪಿ ಕೇಂದ್ರ ಸರ್ಕಾರದಲ್ಲಿರುವಾಗ, ಕಳ್ಳರ ಮೇಲೆ ದಾಳಿ ನಡೆದರೆ ರಾಜಕೀಯ ಪಿತೂರಿ.ರಾಷ್ಟ್ರವನ್ನ ಗೆದ್ದ ನರೇಂದ್ರ ಮೋದಿಜಿ ನೇತೃತ್ವದ @BJP4Karnatakaಗೆ ಕರ್ನಾಟಕದ ಈ‌ ಎರಡು ಉಪಚುನಾವಣೆ ಗೆಲ್ಲೋಕೆ ಕಷ್ಟನಾ. ಇದು ಕಾಂಗ್ರೆಸ್ ಪಾರ್ಟಿಯ ಮೂರ್ಖತನ' ಎನ್ನುವ ರಿಪ್ಲೈ ದಿನೇಶ್ ಗುಂಡೂರಾವ್ ಟ್ವೀಟ್ ಗೆ ಬಂದಿದೆ.

  English summary
  CBI Raid In DK Shivakumar House, Dinesh Gundu Rao Tweet Strong Reply By Twitterite,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X