ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ಸಿಬಿಐಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಸೂಚಿಸಿರುವುದು ಬಿಜೆಪಿ ಹೈಕಮಾಂಡ್ ಎಂಬ ಸುದ್ದಿಗಳು ಹಬ್ಬಿವೆ. ಐಎಂಎ ಹಗರಣದ ಬಗ್ಗೆಯೂ ಸಿಬಿಐ ತನಿಖೆ ನಡೆಯಲಿದೆಯೇ?.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಫೋನ್ ಟ್ಯಾಪಿಂಗ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂಬುದು ಸುದ್ದಿ. ಯಡಿಯೂರಪ್ಪಗೆ ಶನಿವಾರವೇ ಅಮಿತ್ ಶಾ ಈ ಕುರಿತು ಸೂಚನೆ ನೀಡಿದ್ದರು.

ಐಎಂಎ ಹಗರಣ: ಮನ್ಸೂರ್‌ ಖಾನ್‌ ನ್ಯಾಯಾಂಗ ಬಂಧನ ವಿಸ್ತರಣೆಐಎಂಎ ಹಗರಣ: ಮನ್ಸೂರ್‌ ಖಾನ್‌ ನ್ಯಾಯಾಂಗ ಬಂಧನ ವಿಸ್ತರಣೆ

ಐಎಂಎ ಹಗರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು ಎಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾನೂನು ತಜ್ಞರ ಜೊತೆ ಯಡಿಯೂರಪ್ಪ ಚರ್ಚೆ ನಡೆಸಿದ್ದು, ಸಂಪುಟ ವಿಸ್ತರಣೆ ಬಳಿಕ ಈ ಕುರಿತು ಆದೇಶ ಹೊರಡಿಸುವ ಸಾಧ್ಯತೆ ಇದೆ.

ಹಾಸನ : ಐಎಂಎ ಗ್ರೂಪ್‌ಗೆ ಸೇರಿದ ಸೈಟು ಸರ್ಕಾರದ ವಶಕ್ಕೆಹಾಸನ : ಐಎಂಎ ಗ್ರೂಪ್‌ಗೆ ಸೇರಿದ ಸೈಟು ಸರ್ಕಾರದ ವಶಕ್ಕೆ

CBI Probe On IMA Scam : Yediyurappa May Order Soon

ಐಎಂಎ ಹಗರಣದಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ಹಗರಣದ ತನಿಖೆ ನಡೆಸುತ್ತಿದೆ. ಮತ್ತೊಂದು ಕಡೆ ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.

ಐಎಂಎ ಹಗರಣದ ತನಿಖೆ ಎಸ್‌ಎಫ್‌ಒ ಹೆಗಲಿಗೆ?ಐಎಂಎ ಹಗರಣದ ತನಿಖೆ ಎಸ್‌ಎಫ್‌ಒ ಹೆಗಲಿಗೆ?

ಐಎಂಎ ಹಗರಣದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಆಗ ಒತ್ತಾಯಿಸಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಸಿಬಿಐ ತನಿಖೆಗೆ ವಹಿಸುವ ಸಾಧ್ಯತೆ ಇದೆ.

ಅಮಿತ್ ಶಾ ಪಾತ್ರ ಇಲ್ಲ : ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕುರಿತು ಮಾತನಾಡಿರುವ ಆರ್. ಅಶೋಕ, "ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಎಳೆಯುವುದು ಸರಿಯಲ್ಲ. ಸಿಎಂ ವಿರೋಧ ಪಕ್ಷದ ಒತ್ತಡಕ್ಕೆ ಮಣಿದು ಸಿಬಿಐಗೆ ನೀಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ ನಿಜ ಆದರೆ ಇದು ರಾಜ್ಯದ ವಿಚಾರ ಸಿಎಂ ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.

English summary
According to direction by the party high command Karnataka Chief Minister B.S.Yediyurappa may order for CBI probe on IMA Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X