ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ಶಂಕಿತನ ಮಾಹಿತಿ ಪಡೆದ ಸಿಬಿಐ, ತೆಲಂಗಾಣ, ಮಹಾರಾಷ್ಟ್ರ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 14: ಗೌರಿ ಲಂಕೇಶ್ ಹತ್ಯೆ ಶಂಕಿತ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಬಗ್ಗೆ ತೆಲಂಗಾಣ, ಮಧ್ಯಪ್ರದೇಶ ರಾಜ್ಯಗಳು ಹಾಗೂ ಸಿಬಿಐ ತನಿಖಾ ಸಂಸ್ಥೆ ಮಾಹಿತಿ ಪಡೆದುಕೊಂಡಿದೆ.

ತೆಲಂಗಾಣದ ನಕ್ಸಲೈಟ್ ನಿಗ್ರಹ ದಳ (ಆಕ್ಟೋಪಸ್‌) ಮತ್ತು ಮಹಾರಾಷ್ಟ್ರದ ಎಸ್‌ಐಟಿ ತಂಡ, ಮತ್ತು ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಬೋಳ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐ ಸಂಸ್ಥೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಬಗ್ಗೆ ಮಾಹಿತಿಯನ್ನು ಎಸ್‌ಐಟಿ ಹಾಗೂ ರಾಜ್ಯ ಪೊಲೀಸ್‌ ವತಿಯಿಂದ ಪಡೆದುಕೊಂಡಿದೆ.

ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?

ಗೌರಿ ಲಂಕೇಶ್ ಹತ್ಯೆಯು ಈ ಹಿಂದೆ ನಡೆದ ಕೆಲವು ವಿಚಾರವಾದಿಗಳ ಹತ್ಯೆ ಜೊತೆ ಸಾಮ್ಯತೆ ಹೊಂದಿರುವ ಬಗ್ಗೆ ಸಿಬಿಐ ಮತ್ತು ಮಹಾರಾಷ್ಟ್ರ ಎಸ್‌ಐಟಿ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈರ ಈತಿ ಮಾಹಿತಿ ಪಡೆಯಲಾಗಿದೆ.

CBI and other stats took information about Gauri Lankesh murder accused

ಇನ್ನು ಆರೋಪಿ ನವೀನ್‌ಕುಮಾರ್ ಎಸ್‌ಐಟಿ ತನಿಖೆ ವೇಳೆ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಿಸುತ್ತಿರುವ ಕಾರಣ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಎಸ್‌ಐಪಿ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಅಸ್ತು ಎಂದಿದ್ದು, ನವೀನ್‌ಕುಮಾರ್‌ನನ್ನು ಅಹಮದಾಬಾದ್‌ನಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಂಪರು ಪರೀಕ್ಷೆಗೆ ಒಳಪಡಿಸುವ ದಿನ ಇನ್ನೂ ನಿಗದಿಯಾಗಿಲ್ಲ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಶಂಕಿತ ಆರೋಪಿ ನವೀನ್‌ ಕುಮಾರ್‌ ಅಲಿಯಾಸ್ ಹೊಟ್ಟೆ ಮಂಜ ಗೌರಿ ಲಂಕೇಶ್ ಹಂತಕರಿಗೆ ಸಹಾಯ ಮಾಡಿದ್ದ, ಹಾಗೂ ಇನ್ನೂ ಒಬ್ಬ ವಿಚಾರವಾದಿಯ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್ ಗೆ ಮಂಪರು ಪರೀಕ್ಷೆಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್ ಗೆ ಮಂಪರು ಪರೀಕ್ಷೆ

English summary
CBI, Telangana Nexal prevent force, Maharashtra SIT took information about Gauri Lankesh murder accused Naveen Kumar. Karnataka Police and SIT shares information about Naveen Kumar to different government investigation departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X