• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮಗೆ ಯಾವ ನೈತಿಕತೆ ಇದೆ?: 'ಟ್ವಿಟ್ಟರಾಮಯ್ಯ'ಗೆ ಬಿಜೆಪಿ ತರಾಟೆ

|
      ಸಿದ್ದರಾಮಯ್ಯ ಅಲ್ಲ 'ಟ್ವಿಟ್ಟರಾಮಯ್ಯ'ಗೆ ಬಿಜೆಪಿ ತರಾಟೆ..! | Oneindia Kannada

      ಬೆಂಗಳೂರು, ಜನವರಿ 9: ಸಿಬಿಐ ನಿರ್ದೇಶಕರ ಕುರಿತು ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಕರ್ನಾಟಕ ಬಿಜೆಪಿ ಖಾರವಾದ ಪ್ರತಿಕ್ರಿಯೆ ನೀಡಿದೆ.

      'ಸಿಬಿಐ ಕುರಿತು ಸುಪ್ರೀಂ ತೀರ್ಪು: ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ!'

      ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದವರಿಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ನಿರಂತರವಾಗಿ ಟ್ವೀಟ್ ಮಾಡುತ್ತಿರುವ ಸಿದ್ದರಾಮಯ್ಯ ಅವರ ಹೆಸರನ್ನು ಟ್ವಿಟ್ಟರಾಮಯ್ಯ ಎಂದು ಲೇವಡಿ ಮಾಡಿದೆ.

      'ಸಿಬಿಐ ಮುಖ್ಯಸ್ಥರ ಮರು ನಿಯೋಜನೆ, ಪಿಎಂ ಬಚಾವಾಗಲು ಸಾಧ್ಯವೇ ಇಲ್ಲ'

      ಬಿಜೆಪಿ ನಿರಂಕುಶಾಧಿಕಾರದಿಂದ ಮಧ್ಯರಾತ್ರಿ ದಂಗೆ ನಡೆಸಿ ತನಿಖಾ ಸಂಸ್ಥೆಯನ್ನು ಹಾಳುಗೆಡವಲು ಮಾಡಿದ ಪ್ರಯತ್ನಕ್ಕೆ ಸುಪ್ರೀಂಕೋರ್ಟ್‌ನಿಂದ ತೀವ್ರ ಹಿನ್ನಡೆಯಾಗಿದೆ. ಅಲೋಕ್ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ಮತ್ತೆ ನೇಮಿಸಲಾಗಿದೆ.

      ಇದು ಸರ್ವಾಧಿಕಾರಿ ದುರಾಡಳಿತದ ವಿರುದ್ಧದ ದೊಡ್ಡ ಗೆಲುವು. ಬಿಜೆಪಿಯನ್ನು ಯಾವುದೇ ಹೊಸ ಪ್ರಯತ್ನಗಳಿಂದ ಹಿಂದಕ್ಕೆ ತಳ್ಳುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

      ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?

      ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ಅವರಿಗೆ ವ್ಯಂಗ್ಯದ ಉತ್ತರ ನೀಡಿದೆ.

      ಆತ್ಮೀಯ ಟ್ವಿಟ್ಟರಾಮಯ್ಯ,

      ನಿಮ್ಮ ಸ್ಮರಣ ಶಕ್ತಿ ಕಡಿಮೆ ಇರಬೇಕು ಅಥವಾ ಸ್ಪ್ಲಿಟ್ ಪರ್ಸನಾಲಿಟಿ ಇರಬೇಕು. ತನಿಖಾ ಸಂಸ್ಥೆಯ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ? ಕರ್ನಾಟಕದಲ್ಲಿ ವಿಕಲಗೊಂಡ ಎಸಿಬಿಯ ರಚನೆಗಾಗಿ ಲೋಕಾಯುಕ್ತದಂತಹ ಪ್ರಾಮಾಣಿಕ ಸಂಸ್ಥೆಯನ್ನು ಮುಚ್ಚಿಸಿದವರು ನೀವು ಎಂದು ತರಾಟೆಗೆ ತೆಗೆದುಕೊಂಡಿದೆ.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Karnataka BJP reacted strongly to Siddaramaiah's tweet on Supreme Court decision to reinstated Alok Verma back as CBI chief.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more