ನಿರ್ದೇಶಕ ಗಿರಿರಾಜ್ ಕಾವೇರಿ ನೀರು ನಿರ್ವಹಣೆ' ವಿಡಿಯೋ 'ವೈರಲ್

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 25: ಕಾವೇರಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ, ವಿವಾದ ಎಲ್ಲದರ ಮಧ್ಯೆ 'ಮೈತ್ರಿ' ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಚರ್ಚೆಯಾಗುತ್ತಿದೆ. ಕಾವೇರಿ ಹರಿವಿನ ಪ್ರದೇಶ ಹಾಗೂ ರಾಜ್ಯಗಳ ನೀರಿನ ಬಳಕೆ ಪ್ರಮಾಣದ ಬಗ್ಗೆ ಲೆಕ್ಕಾಚಾರ ಸಹಿತ ವಿಡಿಯೋದಲ್ಲಿ ವಿವರಿಸಲಾಗಿದೆ.

ಸತ್ಯಶೋಧಕ ಭಾಗ ೫ - ಕಾವೇರಿ ಏಕೆ ಓಡುವೆ ಎಂಬ ವಿಡಿಯೋದಲ್ಲಿ ನೀರು ನಿರ್ವಹಣೆ ಎಷ್ಟು ಮುಖ್ಯವಾಗುತ್ತದೆ? ನೀರು ಪೋಲು ಮಾಡುವುದರಿಂದ ಆಗುವ ಪರಿಣಾಮಗಳೇನು? ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ನೀರು ವ್ಯರ್ಥ ಮಾಡುತ್ತಾರೆ? ತಮಿಳುನಾಡಿನಲ್ಲಿ ಕಾವೇರಿ ನೀರಿನ ಸಮರ್ಪಕ ಬಳಕೆ ಹೇಗಾಗುತ್ತದೆ ಮತ್ತಿತರ ವಿಚಾರಗಳನ್ನು ಮುಂದಿಟ್ಟಿದ್ದಾರೆ ಗಿರಿರಾಜ್.[ಮತ್ತೊಂದು ಬರಗಾಲದ ಹೊಡೆತಕ್ಕೆ ಸಜ್ಜಾಗಬೇಕಿದೆ ಕರ್ನಾಟಕ!]

Cauvery water management video viral in social media

ಪಶ್ಚಿಮಘಟ್ಟಗಳು ಪ್ರಾಮುಖ್ಯತೆ ಏನು, ಮರಳುಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು, ಬ್ರಿಟಿಷರ ಆಡಳಿತಾವಧಿಯಲ್ಲಿದ್ದ ಸ್ಥಿತಿಗೂ ಈಗಿನ ಪರಿಸ್ಥಿತಿಯಲ್ಲೂ ಆಗಿರುವ ವ್ಯತ್ಯಾಸವನ್ನು ತುಂಬ ಪರಿಣಾಮಕಾರಿಯಾಗಿ ಬಿಡಿಸಿಟ್ಟಿದ್ದಾರೆ ಗಿರಿರಾಜ್. ಈ ವಿಡಿಯೋವನ್ನು ರಂಗಕರ್ಮಿ, ನಟ-ನಿರ್ದೇಶಕ ಪ್ರಕಾಶ್ ಬೆಳವಾಡಿ ತಮ್ಮ ಫೇಸ್ ಬುಕ್ ಪುಟದಲ್ಲಿ ಷೇರ್ ಮಾಡಿದ್ದಾರೆ. ವಿಡಿಯೋ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cauvery water management should be effective said by Kannada film director B.M.Giriraj. Video went viral in Social media.
Please Wait while comments are loading...