ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಅಂತಿಮ ತೀರ್ಪು : ತಮಿಳುನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

By Mahesh
|
Google Oneindia Kannada News

Recommended Video

ಕಾವೇರಿ ವಿವಾದದ ತೀರ್ಪು : ಕರ್ನಾಟಕಕ್ಕೆ ಸಿಹಿ ಸುದ್ದಿ, ತಮಿಳುನಾಡಿಗೆ ಕಹಿ ಸುದ್ದಿ | Oneindia Kannada

ಬೆಂಗಳೂರು, ಫೆಬ್ರವರಿ 16: ಕನ್ನಡಿಗರ ಜೀವನದಿ ಕಾವೇರಿ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಒಲಿದಿದ್ದಾಳೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು- ತಮಿಳುನಾಡು ಪಾಲಿಗೆ ಕಹಿಯಾಗಿದ್ದರೆ, ಕರ್ನಾಟಕದ ಪಾಲಿಗೆ ಸಿಹಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ನ್ಯಾ ದೀಪಕ್ ಮಿಶ್ರಾ ಅವರು ಅಂತಿಮ ತೀರ್ಪು ಓದಿದರು.

ಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣ

ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬಂದಿದೆ.

Cauvery water dispute verdict: Setback for TN, Karnataka told to get additional 14.75 tmcft more water

ಅಂತಿಮ ತೀರ್ಪಿನ ಮುಖ್ಯಾಂಶಗಳು:
ಕಾವೇರಿ ನೀರು ಹರಿದು ಹಂಚಿಕೊಳ್ಳುವ ಲೆಕ್ಕಾಚಾರ:
* 30 ಟಿಎಂಸಿ ಕೇರಳಕ್ಕೆ, 7 ಟಿಎಂಸಿ ಪುದುಚೇರಿಗೆ ಲಭಿಸಲಿದೆ.
* 270 ಇಂದ 284 ಟಿಎಂಸಿ ಅಡಿಗೆ ಏರಿಕೆ ಕರ್ನಾಟಕಕ್ಕೆ ಭರ್ಜರಿ ಲಾಭ
* 419 ಟಿಎಂಸಿ ಇಂದ 404 ಟಿಎಂಸಿಗೆ ಇಳಿಕೆ ತಮಿಳುನಾಡು.

* 20 ಟಿಎಂಸಿ ಅಂತರ್ಜಲ ನೀರು ಪರಿಗಣಿಸಿ ಎಂದು ಸುಪ್ರೀಂಕೋರ್ಟ್ ಸೂಚನೆ.
* ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯ
* ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು

LIVE: ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದ ಸುಪ್ರೀಂ ತೀರ್ಪುLIVE: ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದ ಸುಪ್ರೀಂ ತೀರ್ಪು

* ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.
* 1892, 1924ರ ಒಪ್ಪಂದ ಸಂವಿಧಾನ ಬದ್ಧವಾಗಿದೆ.

* ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು: ಸುಪ್ರೀಂಕೋರ್ಟ್

ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ

* 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.

* 20ಟಿಎಂಸಿ ಅಡಿ ನೀರಿನ ಪೈಕಿ 10 ಟಿಎಂಸಿ ಅಂತರ್ಜಲ ನೀರು ಕರ್ನಾಟಕ ಬಳಕೆ ಮಾಡಬಹುದು. ಒಟ್ಟಾರೆ, ಬೆಂಗಳೂರಿನ ನೀರಿನ ದಾಹಕ್ಕೆ ಬೆಲೆ ಸಿಕ್ಕಿದ್ದು, ಪರೋಕ್ಷವಾಗಿ ಕಾವೇರಿ ಕೊಳ್ಳದ ಎಲ್ಲಾ ಪ್ರದೇಶಗಳಿಗೂ ಲಾಭವಾಗಿದೆ. ಈ ಎಲ್ಲಾ ಆದೇಶಗಳು ಮುಂದಿನ 15 ವರ್ಷಗಳ ಕಾಲಕ್ಕೆ ಅನ್ವಯವಾಗಲಿದೆ.

English summary
Cauvery water dispute verdict: Setback for TN, Karnataka told to get additional 14.75 tmcft more water. The Cauvery waters verdict delivered today by a three judge Bench of the Supreme Court of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X