ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ತೀರ್ಪು : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

|
Google Oneindia Kannada News

Recommended Video

ಕಾವೇರಿ ವಿವಾದದ ತೀರ್ಪು : ಸಿದ್ದರಾಮಯ್ಯನವರ ಮೊದಲ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ಫೆಬ್ರವರಿ 16 : 'ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ 14.5 ಹೆಚ್ಚುವರಿ ಟಿಎಂಸಿ ನೀರು ರಾಜ್ಯಕ್ಕೆ ಸಿಕ್ಕಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಾವೇರಿ ತೀರ್ಪಿನ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, 'ತೀರ್ಪಿನ ಅನ್ವಯ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ. ಇದರಿಂದಾಗಿ ರಾಜ್ಯಕ್ಕೆ ಅನುಕೂಲವಾಗಿದೆ' ಎಂದು ಹೇಳಿದರು.

LIVE: ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದ ಸುಪ್ರೀಂ ತೀರ್ಪುLIVE: ಕರ್ನಾಟಕಕ್ಕೆ ಕೊಂಚ ಸಮಾಧಾನ ತಂದ ಸುಪ್ರೀಂ ತೀರ್ಪು

Cauvery Verdict : CM Siddaramaiah first reaction

ಬಜೆಟ್ ಮಂಡನೆಗೆ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುಟುಕು ಪ್ರತಿಕ್ರಿಯೆ ನೀಡಿ, ವಿಧಾನಸೌಧಕ್ಕೆ ನಿರ್ಗಮಿಸಿದರು. 'ತೀರ್ಪಿನ ವಿವರ ನೋಡಿಕೊಂಡು ಮುಂದಿನ ಪ್ರತಿಕ್ರಿಯೆ ನೀಡುವುದಾಗಿ' ತಿಳಿಸಿದರು.

ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ

ಕಾವೇರಿ ತೀರ್ಪಿನ ಪ್ರಮುಖ ಅಂಶಗಳು

* ಕರ್ನಾಟಕ ವಾರ್ಷಿಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು
* ಕರ್ನಾಟಕಕ್ಕೆ 14 ಟಿಎಂಸಿ ನೀರು ಹೆಚ್ಚುವರಿ ನೀರು ಬಳಕೆಗೆ ಅವಕಾಶ
* ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಲು ಅವಕಾಶ
* ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರು ಬಳಕೆಗೆ ತೀರ್ಪಿನಲ್ಲಿ ಒಪ್ಪಿಗೆ
* ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು
* 15 ವರ್ಷಗಳ ಕಾಲ ಈ ತೀರ್ಪನ್ನು ಪಾಲಿಸಬೇಕು

English summary
Karnataka Chief Minister Siddaramaiah first reaction about Cauvery Verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X