ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಐದು ದಿನ ತಮಿಳುನಾಡಿಗೆ ಕಾವೇರಿ: ಪ್ರಾಧಿಕಾರ ಆದೇಶ

|
Google Oneindia Kannada News

ನವದೆಹಲಿ, ಆಗಸ್ಟ್ 01: ಇನ್ನೂ ಐದು ದಿನ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರವು ಆದೇಶ ನೀಡಿದೆ.

ಕಾವೇರಿ ನೀರು ನಿರ್ವಹಣ ಪ್ರಾಧಿಕಾರವು ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ಸಭೆ ನಡೆಸಿತು, ಸಭೆಯಲ್ಲಿ ಮೇಲಿನಂತೆ ನಿರ್ಣಯ ಕೈಗೊಳ್ಳಲಾಗಿದೆ. ಇದು ಮಂಡ್ಯ-ಮೈಸೂರು ಭಾಗದ ರೈತರ ಪಾಲಿಗೆ ನಿರಾಸೆ ಉಂಟು ಮಾಡಿದೆ.

ರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆ

ಈಗಾಗಲೇ ಜುಲೈ 20 ರಿಂದಲೂ ಪ್ರತಿದಿನ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಆದರೆ ಇನ್ನೂ ಐದು ದಿನ ನೀರು ಹರಿಸುವಂತೆ ಆದೇಶ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ರಾಜ್ಯದ ರೈತ ಮುಖಂಡರು ವಿಶ್ಲೇಷಿಸಿದ್ದಾರೆ.

Cauvery regulatery board ordered to release water to Tamilnadu for next five days

ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧೀಕಾರದ ಸಭೆಯು ಆಗಸ್ಟ್‌ 8 ರಂದು ನಡೆಸುವಂತೆ ಸಹ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ, ಎಲ್ಲೆಲ್ಲಿ? ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ, ಎಲ್ಲೆಲ್ಲಿ?

ನಿರೀಕ್ಷಿತ ಮಟ್ಟದಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗಿಲ್ಲವೆಂದು ಪ್ರಾಧೀಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಎಡವಿರುವುದೇ ಪ್ರಾಧೀಕಾರದಿಂದ ಈ ರೀತಿಯ ಆದೇಶ ಹೊರ ಬೀಳಲು ಕಾರಣ ಎನ್ನಲಾಗುತ್ತಿದೆ.

ಜುಲೈ 31 ರಂದು ಕೆ.ಆರ್.ಎಸ್ ಡ್ಯಾಂನಲ್ಲಿ 80.80 ಅಡಿ ನೀರಿದೆ. 4,968 ಕ್ಯೂಸೆಕ್‌ ನೀರು ಒಳಹರಿವು ಆಗಿದ್ದರೆ, 9890 ಕ್ಯೂಸೆಕ್ ನೀರು ಹೊರಹರಿವು ಉಂಟಾಗಿದೆ. ಪ್ರಾಧೀಕಾರವು ಇಂದು ನೀಡಿರುವ ಆದೇಶದಂತೆ ನಾಳೆಯಿಂದ ಐದು ದಿನಗಳು ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಬೇಕಿದೆ.

English summary
Cauvery water regulatery board orderd to release cauvery water to Tamilnadu for next five day from August 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X