ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 09 : ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗುತ್ತಿದ್ದು ಕಾವೇರಿ ನದಿ ಪಾತ್ರದಲ್ಲಿರುವ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದೆ. ಕೆ. ಆರ್. ಎಸ್ ಜಲಾಶಯದ ಮೇಲೆ ಮಂಡ್ಯ ಮಾತ್ರವಲ್ಲ, ಬೆಂಗಳೂರು ನಗರ ಸಹ ಅವಲಂಬಿತವಾಗಿದೆ.

ನಾಡಿನ ಜೀವನದಿ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ 4 ಜಲಾಶಯಗಳಿವೆ. ಈ ಜಲಾಶಯಗಳು ಭರ್ತಿಯಾದರೆ ರಾಜ್ಯಕ್ಕೆ ನೀರನ್ನು ಉಳಿಕೊಂಡು ಪಕ್ಕದ ತಮಿಳುನಾಡಿಗೆ ಸಹ ನೀರನ್ನು ಹರಿಸಬೇಕಾಗಿದೆ. ಅದರಲ್ಲೂ ಬೆಂಗಳೂರು ನಗರಕ್ಕೆ ಕೆ. ಆರ್. ಎಸ್‌ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ.

ಹಾರಂಗಿ ಒಡಲು ಭರ್ತಿ, ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ನೀರುಹಾರಂಗಿ ಒಡಲು ಭರ್ತಿ, ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ನೀರು

ಕೆ. ಆರ್. ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯಗಳಾಗಿವೆ. 124 ಅಡಿ ಎತ್ತರದ ಕೆ. ಆರ್‌. ಎಸ್‌ನಲ್ಲಿ 91 ಅಡಿ ನೀರಿನ ಸಂಗ್ರವಿದೆ. ಉಳಿದ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು ಕಾಲುವೆಗಳ ಮೂಲಕ ನೀರು ಹೊರಬಿಡಲಾಗಿದೆ.

ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಸೋಮವಾರಪೇಟೆಯಲ್ಲಿರುವ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಗುರುವಾರ 30,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ....

ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ಕೆ.ಆರ್.ಎಸ್ ಜಲಾಶಯ

ಕೆ.ಆರ್.ಎಸ್ ಜಲಾಶಯ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ. ಆರ್. ಎಸ್ ಜಲಾಶಯದಲ್ಲಿ 91.00 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಆಗಸ್ಟ್ 8ರ ಮಾಹಿತಿ ಪ್ರಕಾರ 30,774 ಕ್ಯುಸೆಕ್ ಒಳ ಹರಿವು ಇದೆ. ಕಳೆದ ವರ್ಷ ಇದೇ ಸಮಯದಲ್ಲಿ 123.76 ಅಡಿ ನೀರಿನ ಸಂಗ್ರವಿತ್ತು.

ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿರುವ ಹಾರಂಗಿ ಜಲಾಶಯದಲ್ಲಿ 2849.83 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 2859.00 ಅಡಿಗಳು. 16,801 ಕ್ಯುಸೆಕ್ ಒಳ ಹರಿವು ದಾಖಲಾಗಿದೆ. ಗುರುವಾರ 30,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗಿದೆ.

ಕಬಿನಿ ಜಲಾಶಯ

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ 2281.53 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳು. 29,498 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 2283.40 ಅಡಿ ನೀಡಿತ್ತು.

ಹೇಮಾವತಿ ಜಲಾಶಯ

ಹೇಮಾವತಿ ಜಲಾಶಯ

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ 2905.30 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು. 48,133 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ 2921.06 ಅಡಿ ನೀರಿನ ಸಂಗ್ರವಿತ್ತು.

English summary
Cauvery basin KRS, Kabini, Harangi and Hemavathi dam reservoir water level on August 09, 2019. Krishnaraja Sagar (KRS) reservoir water level 91.1 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X