ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ: ಬೆಕ್ಕು ಹುಡುಕಿಕೊಟ್ರೆ 35 ಸಾವಿರ ರೂ. ಬಹುಮಾನ!

|
Google Oneindia Kannada News

ಬೆಂಗಳೂರು, ಜ. 23: ಜನ ಸಾಮಾನ್ಯರು ಕಾಣೆಯಾದರೆ ದೂರು ಕೊಡುವುದು ಅಪರೂಪ. ಇಂಥ ಕಾಲದಲ್ಲಿ ಪರ್ಷಿಯಾ ಮೂಲದ ಬೆಕ್ಕು ಕಾಣೆಯಾಗಿರುವುದಕ್ಕೆ ವ್ಯಕ್ತಿಯೊಬ್ಬರು ಪೊಲೀಸ್ ಮೆಟ್ಟಿಲೇರಿದ್ದಾರೆ. ತನ್ನ ಬೆಕ್ಕು ಕಳ್ಳತನವಾಗಿದೆ ಎಂದು ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಇನ್ನು ಬೆಕ್ಕು ಹಿಡಿದುಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿ ಮಾಲೀಕ ಘೋಷಣೆ ಮಾಡಿದ್ದಾನೆ.

ಇಂಥ ಅಪರೂಪದ ಘಟನೆ ನಡೆದಿರುವುದು ತಿಲಕ್ ನಗರದಲ್ಲಿ. ಜಯನಗರದ ನಿವಾಸಿ ಮಿಸ್ಬಾ ಷರೀಫ್ ಬೆಕ್ಕು ಕಾಣೆಯಾಗರುವ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪರ್ಷಿಯಾ ಮೂಲದ ದುಬಾರಿ ಬೆಕ್ಕು ಜ. 15 ರಿಂದ ಕಾಣೆಯಾಗಿದೆ. ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕು ಕಳ್ಳತನ ಮಾಡಿದ್ದಾರೆ.

ಆರೋಪಿಗಳನ್ನು ಪತ್ತೆ ಮಾಡಿ ನನ್ನ ಬೆಕ್ಕು ಹುಡುಕಿಕೊಡಿ. ಬೆಕ್ಕು ಹುಡುಕಿಕೊಡುವರಿಗೆ 35 ಸಾವಿರ ರೂ. ಬಹುಮಾನ ಕೂಡ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

Cat Missing in Bengaluru: Tilak Nagar Police Registered FIR

ಮೊಲದ ಜತೆ ಬೆಕ್ಕು: ಬಿಳಿ ಬಣ್ಣದ ಪರ್ಷಿಯಾ ಮೂಲದ ಬೆಕ್ಕನ್ನು ಮಿಸ್ಪಾ ಷರೀಪ್ ಸಾಕಿದ್ದರು. ಇದರ ಜತೆ ಆಟ ಆಡಲು ಬಿಳಿ ಮೊಲ ಕೂಡ ಸಾಕಿದ್ದರು. ಎರಡೂ ಅನ್ಯೋನ್ಯವಾಗಿದ್ದವು. ಎರಡನ್ನು ಷರೀಫ್ ತನ್ನ ಮಕ್ಕಳಂತೆ ಸಾಕಿದ್ದರು. ಆದರೆ, ಇದ್ದಕ್ಕಿದ್ದಂತೆ ಜ. 15 ರಿಂದ ಪರ್ಷಿಯಾ ಮೂಲದ ಬೆಕ್ಕು ಕಾಣೆಯಾಗಿದೆ. ಇದರಿಂದ ಮೊಲ ಸರಿಯಾಗಿ ಊಟ ಮಾಡುತ್ತಿಲ್ಲ. ಹೀಗಾಗಿ ಬೆಕ್ಕನ್ನು ಹುಡುಕುವ ಕಾರ್ಯದಲ್ಲಿ ಮಿಸ್ಪಾ ತಲ್ಲೀನರಾಗಿದ್ದಾರೆ.

Cat Missing in Bengaluru: Tilak Nagar Police Registered FIR
ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್: ಮಿಸ್ಸಿಂಗ್ ಕ್ಯಾಟ್, ಬಿಳಿ ಬಣ್ಣದ ಪರ್ಶಿಯನ್ ಬೆಕ್ಕು ಕಾಣೆಯಾಗಿದೆ. ಜಯನಗರ ಮೂರನೇ ಬ್ಲಾಕ್ ನಿಂದ ತಪ್ಪಿಸಿಕೊಂಡಿದೆ. ಭೈರಸಂದ್ರ ಲೇಕ್ ಸಮೀಪ ಕಣ್ಮರೆಯಾಗಿದ್ದು, ನನ್ನ ಪ್ರೀತಿಯ ಬೆಕ್ಕನ್ನು ತಂದು ಕೊಟ್ಟರೆ 35 ಸಾವಿರ ರೂ. ಬಹುಮಾನ ನೀಡುತ್ತೇನೆ ಎಂದು ಮಿಸ್ಪಾ ಷರೀಫ್ ಮನವಿ ಮಾಡಿದ್ದಾರೆ. ಬೆಕ್ಕು ಹುಡುಕುವ ಅವರ ಪ್ರಯತ್ನ ಮುಂದುವರೆದಿದೆ.

English summary
Bengaluru: Tilak nagar police registered FIR about Cat missing: 35000 Reward declare know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X