ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಟ್ನೆಸ್ ಕಳೆದುಕೊಂಡ ಮಾಸ್ಟರ್‌ಗೆ ನೆರವು ಬೇಕಿದೆ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 26: ಬಾಡಿ ಬಿಲ್ಡರ್ ಆಗಿ, ಫಿಟ್ನೆಸ್ ಕೋಚ್ ಆಗಿ ಜನಮನ್ನಣೆ ಗಳಿಸಿದ್ದ ವ್ಯಕ್ತಿಯನ್ನು ಕ್ಯಾನ್ಸರ್ ಮಹಾಮಾರಿ ಹಿಡಿದುಕೊಂಡಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿ ನೂರಾರು ಜನರಿಗೆ ತರಬೇತಿ ನೀಡಿದ ವ್ಯಕ್ತಿ ರವಿ ಇಂದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಇದಕ್ಕಿದ್ದಂತೆ ರವಿ ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿದೆ. ಹತ್ತಿರವಿದ್ದ ಎಲ್ಲ ಆಸ್ಪತ್ರೆಗಳನ್ನು ಸುತ್ತಿದ ನಂತರ ರವಿ ಬದುಕಲ್ಲಿ ಕ್ಯಾನ್ಸರ್ ಎಂಬ ಕರಾಳ ಮುಖ ಕಂಡಿತ್ತು.[ಕ್ಯಾನ್ಸರ್ ಪೀಡಿತರಿಗೆ ರಾಮಬಾಣ ಹನುಮಫಲ!]

ravi

ನಾಲ್ಕು ವರ್ಷಗಳ ಆಸ್ಪತ್ರೆಯ ಸುತ್ತಾಟದ ಬದುಕು ರವಿ ಅವರನ್ನು ಹೈರಾಣ ಮಾಡಿತ್ತು. ಅಂತಿಮವಾಗಿ ಜರ್ಜರಿತರಾಗುವ ಕ್ಷಣವೂ ಬಂದು ಬಿಟ್ಟಿತು. ರವಿ ಅವರಿಗೆ ಬೆನ್ನು ಹುರಿಯ ಕ್ಯಾನ್ಸರ್ ಅಮರಿಕೊಂಡಿತ್ತು.[ಕ್ಯಾನ್ಸರ್ ಪೀಡಿತ ಬಾಲಕನಿಗೆ ನೆರವಿನ ಹಸ್ತ ಬೇಕಿದೆ]

ತಿಂಗಳಿಗೆ ದುಡಿಯುತ್ತಿದ್ದ 15 ಸಾವಿರ ರು. ಹಣದಲ್ಲಿ ರವಿಯವರೇ ಕುಟುಂಬವನ್ನು ನಡೆಸಬೇಕು. ಆರೋಗ್ಯವೂ ಕೈ ಕೊಟ್ಟಿದ್ದರಿಂದ ದುಡಿಮೆಯೂ ಅಸಾಧ್ಯ ಎಂಬ ಸ್ಥಿತಿ. ಬದುಕು ಮೂರಾಬಟ್ಟೆಯಾಗಿತ್ತು. ಈ ಸಮಯ ರವಿಯವರ ನೆರವಿಗೆ ನಿಂತಿದ್ದು ಎಚ್ ಸಿಜಿ ಫೌಂಡೇಶನ್.

ravi

2006 ರಲ್ಲಿ ಬೆಂಗಳೂರಲ್ಲಿ ಆರಂಭವಾದ ಎಚ್ ಸಿಜಿ ಫೌಂಡೇಶನ್ ಮಾರಕ ರೋಗಕ್ಕೆ ತುತ್ತಾದವರ ನರವಿಗೆ ನಿಂತುಕೊಂಡೆ ಬಂದಿದೆ. ಸುಮಾರು 3000 ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುತ್ತಿದೆ.[ಬೀದರ್‌ನ ಈ ಬಾಲಕನ ಜೀವ ದಾನಿಗಳ ಕೈಯಲ್ಲಿದೆ]

ಒಂದು ಕಾಲದ ಫಿಟ್ನೆಸ್ ಮಾಸ್ಟರ್ ಇದೀಗ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಅವರ ಜೀವನ ಮೊದಲಿನ ಹಂತಕ್ಕೆ ಬರಲು ನಿಮ್ಮ ನೆರವು ಅತ್ಯಗತ್ಯ. ರವಿ ಸಹಾಯಕ್ಕೆ ಆನ್ ಲೈನ್ ಕ್ಯಾಂಪೇನ್ ಆರಂಭವಾಗಿದ್ದು ನೀವು ಸಹಾಯ ಮಾಡಬಹುದು.

ಸಹಾಯ ಮಾಡಲು ಮತ್ತು ಹೆಚ್ಚಿನ ಮಾಹಿತಿಗೆ

English summary
Mr. Ravi was once an energetic and enthusiastic fitness coach who would train many at the Indira Nagar Club,Bangalore. During the year 2008, though, things took a turn for him. The formerly active and lively man started experiencing unfamiliar symptoms such as severe bone pain. Not sure what was going on with him, Mr. Ravi visited multiple hospitals across his native city Bangalore to seek answers. Ravi hopes to fight, join him in his battle against cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X