ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರ

|
Google Oneindia Kannada News

ಬೆಂಗಳೂರು, ಮೇ 25 : ಕೊರೊನಾ ಹರಡದಂತೆ ಲಾಕ್ ಡೌನ್ ಘೋಷಣೆಯಾದ ಕಾರಣ ಈ ಬಾರಿಯ ಎಸ್. ಎಸ್. ಎಲ್. ಸಿ ಪರೀಕ್ಷೆ ಜೂನ್‌ನಲ್ಲಿ ನಡೆಯುತ್ತಿದೆ. ದೇಶದಲ್ಲಿ ಇನ್ನೂ ಕೊರೊನಾ ಹಾವಳಿ ಕಡಿಮೆಯಾಗಿಲ್ಲ. ಈ ಬಾರಿ ಪರೀಕ್ಷೆ ನಡೆಸುವುದು ಬೇಡ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ.

Recommended Video

ಎಸ್ಎಸ್ಎಲ್ಸಿ ಸಂಪೂರ್ಣ ಪರೀಕ್ಷಾ ವೇಳಾಪಟ್ಟಿ ವಿವರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಈ ಕುರಿತು ಪತ್ರ ಬರೆದಿದ್ದಾರೆ. ಜೂನ್ 25 ರಿಂದ ಜುಲೈ 4ರ ತನಕ ಈ ಬಾರಿಯ ಎಸ್‌. ಎಸ್. ಎಲ್‌. ಸಿ ಪರೀಕ್ಷೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

'ಸದ್ಯದಲ್ಲಿ ಇಡೀ ದೇಶದಲ್ಲಿ ಕೋವಿಡ್ - 19 ವೈರಸ್ ಹಬ್ಬುವಿಕೆಯ ವೇಗವನ್ನು ಗಮನಿಸಿದರೆ ಜೀವ ಝಲ್ಲೆನ್ನುತ್ತದೆ. ಇಂಥ ಭಯಾನಕ ಸ್ಥಿತಿಯಲ್ಲಿ ಎಸ್‌. ಎಸ್. ಎಲ್‌. ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸುವುದು ಯಾವ ಕಾರಣಕ್ಕೂ ಸುರಕ್ಷಿತವಲ್ಲ' ಎಂದು ಎಸ್. ಜಿ. ಸಿದ್ದರಾಮಯ್ಯ ಹೇಳಿದ್ದಾರೆ.

'ಈ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆ ಬೇಡ' ಎಂದ ಶಿಕ್ಷಣ ತಜ್ಞರು!'ಈ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆ ಬೇಡ' ಎಂದ ಶಿಕ್ಷಣ ತಜ್ಞರು!

ಲಾಕ್ ಡೌನ್ ಪರಿಣಾಮ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಎಸ್. ಎಸ್. ಎಲ್‌. ಸಿ ಪರೀಕ್ಷೆ ಮುಂದೂಡಲಾಗಿದೆ. ಸರ್ಕಾರ ಜೂನ್ 25 ರಿಂದ ಜುಲೈ 4ರ ತನಕ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿಯ ಆಂಗ್ಲ ಭಾಷೆಯ ಪರೀಕ್ಷೆ ಮಾತ್ರ ಬಾಕಿ ಇದೆ.

ಇನ್ನೂ ನಿಗದಿಯಾಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕಇನ್ನೂ ನಿಗದಿಯಾಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕ

ಪ್ರೊ. ಎಸ್. ಜಿ. ಸಿದ್ದರಾಮಯ್ಯ ಪತ್ರ

ಪ್ರೊ. ಎಸ್. ಜಿ. ಸಿದ್ದರಾಮಯ್ಯ ಪತ್ರ

'ನಾನು ತಮ್ಮ ಹತ್ತಿರ ಹಿಂದೆ ಈ ಬಗ್ಗೆ ಮಾತನಾಡಿದ್ದಾಗ ಸ್ಥಿತಿ ಇಷ್ಟು ಕೆಟ್ಟದಿರಲಿಲ್ಲ. ಅಲ್ಲದೆ ಮುಂಬೈನ ಕಾರ್ಮಿಕರು ನಮ್ಮ ರಾಜ್ಯಕ್ಕೆ ಬಂದಿರಲಿಲ್ಲ. ಬೆಂಗಳೂರು ಹಾಗೂ ಮುಂಬೈನ ವಲಸೆ ಕಾರ್ಮಿಕರ ಪ್ರಯಾಣ ನಡೆದಿರಲಿಲ್ಲ" ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಪರೀಕ್ಷೆ ನಡೆಸಬಹುದು ಎಂದು ತಿಳಿಸಿದ್ದೆ

ಪರೀಕ್ಷೆ ನಡೆಸಬಹುದು ಎಂದು ತಿಳಿಸಿದ್ದೆ

'ನಾನು ನಿಮ್ಮ ಜೊತೆ ಮಾತನಾಡುವಾಗ ವಿದೇಶದಿಂದಲೂ ಯಾರೂ ರಾಜ್ಯಕ್ಕೆ ಬಂದಿರಲಿಲ್ಲ. ಹೀಗಾಗಿ ವೈರಾಣು ಹಬ್ಬುವಿಕೆ ಲಾಕ್ ಡೌನ್ ಕಾರಣದಿಂದ ನಿಯಂತ್ರಣಕ್ಕೆ ಬರುವ ಎಲ್ಲಾ ಸೂಚನೆಗಳು ಇದ್ದವು. ಹಾಗಾಗಿ ಪರೀಕ್ಷೆಯನ್ನು ಸೂಕ್ತವಾಗಿ ಪೂರ್ವ ಸಿದ್ಧತಾ ಎಚ್ಚರಿಕೆಗಳನ್ನು ಅನುಸರಿಸಿ ನಡೆಸಬಹುದು ಎಂಬ ಅಭಿಪ್ರಾಯ ತಿಳಿಸಿದ್ದೆ' ಎಂದು ಸುರೇಶ್‌ ಕುಮಾರ್‌ಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಭಯಾನಕ ಸನ್ನಿವೇಶ

ಭಯಾನಕ ಸನ್ನಿವೇಶ

'ಆದರೆ, ಈಗಿನ ಈ ಭಯಾನಕ ಸನ್ನಿವೇಶದಲ್ಲಿ ಯಾವ ಕಾರಣಕ್ಕೂ ಈ ವರ್ಷ ಪರೀಕ್ಷೆ ನಡೆಸುವುದು ಬೇಡ ಅನ್ನಿಸುತ್ತದೆ. ಮಕ್ಕಳ ಜೀವನದ ದೃಷ್ಟಿ ಇಟ್ಟುಕೊಂಡು ಜೀವದ ಜೊತೆ ಈ ಭಯಾನಕ ಆಪತ್ತಿಗೆ ಆಹ್ವಾನ ನೀಡುವುದು ಅಮಾನವೀಯ ನಡೆಯಾಗುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳಕಳಿಯ ಮನವಿ

ಕಳಕಳಿಯ ಮನವಿ

'ದಯಮಾಡಿ ನಮ್ಮ ಕಳಕಳಿಯ ಮನವಿ ಸದ್ಯ ಪರೀಕ್ಷೆ ನಡೆಸುವ ಯೋಚನೆಯನ್ನು ಕೈ ಬಿಡಿ, ರದ್ದುಗೊಳಿಸಿ' ಎಂದು ಪ್ರೊ. ಎಸ್. ಜಿ. ಸಿದ್ದರಾಮಯ್ಯ ಶಿಕ್ಷಣ ಸಚಿವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

English summary
In a letter to education minister Suresh Kumar Kannada Development Authority (KDA) former chairman Prof S.G.Siddaramaiah requested not to conduct SSLC exam this year due to COVID - 19 crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X