ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರಿಗೆ ನನ್ನ ನಮನಗಳು, 1.30ಕ್ಕೆ 'trust vote' ಅಸಾಧ್ಯ: ಎಚ್ಡಿಕೆ

|
Google Oneindia Kannada News

Recommended Video

Karnataka Crisis : ಎಚ್ ಡಿ ಕುಮಾರಸ್ವಾಮಿ ಬೈಬಲ್ ನ Judgement Day ನೆನಪಿಸಿಕೊಂಡಿದ್ಯಾಕೆ? | H D Kumaraswamy

ಬೆಂಗಳೂರು, ಜುಲೈ 19: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಬಗ್ಗೆ ಚರ್ಚೆ ಸದನದಲ್ಲಿ ಮುಂದುವರೆದಿದೆ.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

15ನೇ ವಿಧಾನಸಭೆಯ 4ನೇ ಕಲಾಪದಲ್ಲಿ ಸರ್ಕಾರದ ಉಳಿವು- ಅಳಿವಿನ ಪ್ರಶ್ನೆಯ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ರಾಜ್ಯಪಾಲರು ಹಾಗೂ ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಬಗ್ಗೆ ದಾಖಲೆಗಳ ಮೂಲಕ ವಿವರಣೆ ನೀಡಿದ್ದಾರೆ.

ವಿಶ್ವಾಸಮತ LIVE: ರಾಜ್ಯಪಾಲರ ಸೂಚನೆಗೆ ಸದನದಲ್ಲಿ ಖಡಕ್ ಪ್ರತಿಕ್ರಿಯೆವಿಶ್ವಾಸಮತ LIVE: ರಾಜ್ಯಪಾಲರ ಸೂಚನೆಗೆ ಸದನದಲ್ಲಿ ಖಡಕ್ ಪ್ರತಿಕ್ರಿಯೆ

"ರಾಜ್ಯಪಾಲರು ನಮಗೆ 1.30ರೊಳಗೆ ವಿಶ್ವಾಸ ಮತಯಾಚನೆ ಮಾಡಬೇಕೆಂದು ಗಡುವು ನೀಡಿದ್ದಾರೆ, ಆದರೆ, ರಾಜ್ಯಪಾಲರು ಕಳಿಸಿರುವ ಸಂದೇಶದಂತೆ ಶುಕ್ರವಾರ(ಜುಲೈ 19) ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಪ್ರಕ್ರಿಯೆ ಅಸಾಧ್ಯ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದರು.

Cant complete trust vote by 1.30, will discuss political crisis first, says HD Kumaraswamy

"ಮುಖ್ಯಮಂತ್ರಿಯಾಗಿ ನನಗೆ ನನ್ನದೇ ಆದ ಮಿತಿಯಿದೆ. ರಾಜ್ಯಪಾಲರ ಬಗ್ಗೆ ನಾನು ಟೀಕಿಸಲ್ಲ, ಆದರೆ, ಸ್ಪೀಕರ್ ತೀರ್ಮಾನವೇ ಸದನದಲ್ಲಿ ಸುಪ್ರೀಂ ಆಗಿರುತ್ತದೆ. ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ ಸಿಎಂ, ಸದನದ ಪ್ರಕ್ರಿಯೆ ಬಗ್ಗೆ ರಾಜ್ಯಪಾಲರು ನಿರ್ದೇಶಿಸುವ ಅಧಿಕಾರವಿದೆಯೇ? ಸ್ಪೀಕರ್ ಅವರೇ ಈ ಬಗ್ಗೆ ತಿಳಿಸಬೇಕು" ಎಂದು ಹೇಳಿದರು.

ನಾಳೆ 1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆನಾಳೆ 1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆ

ಸದನದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಮಾತು ಮುಂದುವರೆಸಿ, "ಸದನದ ಕಾರ್ಯಕಲಾಪದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವಂತಿಲ್ಲ. ಸ್ಪೀಕರ್ ಹಾಗೂ ರಾಜ್ಯಪಾಲ ಎರಡು ಸಾಂವಿಧಾನಿಕ ಹುದ್ದೆಗಳು, ಕಾನೂನಿನ ಚೌಕಟ್ಟಿಗೆ ತಕ್ಕಂತೆ ನಡೆದುಕೊಳ್ಳಬೇಕು, ಎರಡು ಹುದ್ದೆಗಳ ನಡುವೆ ಹಸ್ತಕ್ಷೇಪ ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸ್ವಯಂಪ್ರೇರಣೆಯಿಂದ ವಿಶ್ವಾಸಮತಯಾಚನೆ ಮಾಡಿದ್ದಾರೆ. ಹೀಗಾಗಿ, ಇದು ಸದನದ ಸ್ವತ್ತಾಗಿದ್ದು, ಸದನದಲ್ಲಿ ಸ್ಪೀಕರ್ ಅವರ ಅಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ" ಎಂದರು.

English summary
Governor has said floor test should happen before 1:30 pm. The SC has said speaker should be left free to decide on resignation. I have already moved the trust motion. The speaker should decide can the governor give me directions. I leave it to Speaker, says HDK in assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X