ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ: ಕೊನೆಯ ಕಸರತ್ತಿಗೆ ಇಂದೇ ಕೊನೆ ದಿನ

|
Google Oneindia Kannada News

Recommended Video

Karnataka By-elections 2018 : 5 ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದ ಕಸರತ್ತಿಗೆ ಇಂದೇ ಕೊನೇ ದಿನ

ಬೆಂಗಳೂರು, ಅಕ್ಟೋಬರ್ 31: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ರಾತ್ರಿಗೆ ಕೊನೆಗೊಳ್ಳಲಿದ್ದು, ಮುಂದಿನ ಎರಡು ದಿನಗಳ ಕಾಲ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಐದು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಆಂತರಿಕ ದ್ವೇಷಗಳೆಲ್ಲವನ್ನು ಬದಿಗಿಟ್ಟಂತೆ ಕಂಡುಬರುತ್ತಿದೆ. ಈ ಮಾತುಗಳ ಮಧ್ಯೆಯೇ ಬಳ್ಳಾರಿಯಲ್ಲಿ ವಿ.ಸೋಮಣ್ಣ ಹಾಕಿದ 'ಭವಿಷ್ಯದ ಸಿಎಂ ' ಬಾಂಬ್‌ ಕಮಲ ಪಾಳಯವನ್ನು ಆತಂಕಕ್ಕೆ ದೂಡಿತ್ತು.

ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?ಉಪ ಚುನಾವಣೆ 2018 : ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

ಇದರ ಜತೆಗೆ ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ಕಾಣಿಸಿಕೊಳ್ಳುತ್ತಲೇ ಗೌಡರ ವಿರುದ್ಧ ಹಳೆಯ ಘಟನೆಗಳನ್ನೇ ಅಸ್ತ್ರವಾಗಿ ಪ್ರಯೋಗಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರವನ್ನು ಆಗಾಗ ಅಲ್ಲಾಡಿಸುವ ಪ್ರಯತ್ನ ನಡೆಸುತ್ತಿರುವುದು ಉಪಚುನಾವಣೆ ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಇದೀಗ ಉಪ ಚುನಾವಣೆಗೆ ಕೇವಲ ಎರಡೇ ದಿನಗಳು ಬಾಕಿ ಇದೆ ಈ ಫಲಿತಾಂಶದಿಂದ ಮುಂದಿನ ಲೋಕಸಭಾ ಚುನಾವಣೆ ನಿಂತಿದೆ.

ಒಂದೆಡೆ ಬಂಗಾರಪ್ಪ ಸೋದರರ ಸವಾಲ್, ಇನ್ನೊಂದೆಡೆ ಜಾರಕಿಹೊಳಿ ಬ್ರದರ್ಸ್

ಒಂದೆಡೆ ಬಂಗಾರಪ್ಪ ಸೋದರರ ಸವಾಲ್, ಇನ್ನೊಂದೆಡೆ ಜಾರಕಿಹೊಳಿ ಬ್ರದರ್ಸ್

ಸಿದ್ದರಾಮಯ್ಯ ಹಾಗೂ ರೆಡ್ಡಿ ಬ್ರದರ್ಸ್‌ ಮಧ್ಯದ ಹಳೆ ದ್ವೇಷವನ್ನು ಮತ್ತೆ ಚಿಗುರಿಸಿದ್ದು, ಬಳ್ಳಾರಿ ಕದನ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕೆ-ಟಿಪ್ಪಣಿ ನಡೆಸುವುದಕ್ಕೂ ಕಾರಣವಾಗಿದೆ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಜತೆಗೆ ಮುನಿಸಿಕೊಂಡಿದ್ದ ಸತೀಶ್‌ ಜಾರಕಿಹೊಳಿ ಬಳ್ಳಾರಿಯಲ್ಲಿ ವೇದಿಕೆ ಹಂಚಿಕೆ ಕೊಳ್ಳಲಿಲ್ಲ. ಶಿವಮೊಗ್ಗದಲ್ಲಿ ಬಂಗಾರಪ್ಪ ಸೋದರರ ಸವಾಲ್‌ ಬಿರುಸಾಗಿ ನಡೆಯುತ್ತಿದೆ. ಚುನಾವಣೆಯ ಕಡೆಯ ಕ್ಷಣಗಳಲ್ಲಿ ಶಿವಮೊಗ್ಗದಲ್ಲಿ ಘಟಾನುಘಟಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಶ್ಯಾಮನೂರು ಶಿವಶಂಕರಪ್ಪ ಮೊದಲಾದವರು ಜಂಟಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಆದರೆ ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಆಂತರಿಕ ಕಲಹ ಮುಂದುವರಿದಿದೆ.

 ಸರ್ಕಾರವನ್ನು ಅಲ್ಲಾಡಿಸುವ ಪ್ರಯತ್ನ ಬಿಟ್ಟಿಲ್ಲ

ಸರ್ಕಾರವನ್ನು ಅಲ್ಲಾಡಿಸುವ ಪ್ರಯತ್ನ ಬಿಟ್ಟಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಜತೆಗೆ ಕಾಣಿಸಿಕೊಂಡರೂ ಕೂಡ ಗೌಡರ ವಿರುದ್ಧ ಹಳೆಯ ಘಟನೆಗಳನ್ನೇ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ ಆಗಾಗ ಮೈತ್ರಿ ಸರ್ಕಾರವನ್ನು ಸಲ್ಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಉಪ ಚುನಾವಣೆ ಸಂದರ್ಭದಲ್ಲಿ ಸ್ಪಷ್ಟವಾಗಿತ್ತು.

ಉಪ ಚುನಾವಣೆ : ಗುಪ್ತಚರ ಇಲಾಖೆ ವರದಿಯಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತ ಉಪ ಚುನಾವಣೆ : ಗುಪ್ತಚರ ಇಲಾಖೆ ವರದಿಯಲ್ಲಿ ಕಾಂಗ್ರೆಸ್ಸಿಗೆ ಭಾರೀ ಆಘಾತ

ಮತದಾನ ನಡೆಯುವ ಐದು ಕ್ಷೇತ್ರಗಳು ಯಾವುದು

ಮತದಾನ ನಡೆಯುವ ಐದು ಕ್ಷೇತ್ರಗಳು ಯಾವುದು

ಶಿವಮೊಗ್ಗ, ಬಳ್ಳಾರಿ, ಮಂಡ್ಯ, ಲೋಕಸಭಾ ಕ್ಷೇತ್ರ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3ರಂದು ಮತದಾನ ನಡೆಯಲಿದೆ. ಹೀಗಾಗಿ ಮತದಾನ ಆರಂಭಕ್ಕೂ ಮುನ್ನ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ, ಉಪಸಮರ ಅಖಾಡದಲ್ಲಿ ಸೆಣೆಸಾಡುತ್ತಿರುವ ಘಟಾನುಘಟಿ ನಾಯಕರು ಗುರುವಾರ ಬೆಳಗ್ಗೆ ತಮ್ಮ ಶಸ್ತ್ರಾಸ್ತ್ರವನ್ನು ಅನಿವಾರ್ಯವಾಗಿ ಕೆಳಗಿಳಿಸಬೇಕಿದೆ.

ಶಿವಮೊಗ್ಗ ಚುನಾವಣೆ : 3 ಗ್ರಾಮಗಳ ಜನರಿಂದ ಮತದಾನ ಬಹಿಷ್ಕಾರಶಿವಮೊಗ್ಗ ಚುನಾವಣೆ : 3 ಗ್ರಾಮಗಳ ಜನರಿಂದ ಮತದಾನ ಬಹಿಷ್ಕಾರ

ಉಪಚನುವಾಣೆ ಮತದಾನ, ಫಲಿತಾಂಶ ಯಾವಾಗ?

ಉಪಚನುವಾಣೆ ಮತದಾನ, ಫಲಿತಾಂಶ ಯಾವಾಗ?

ಐದು ಕ್ಷೇತ್ರಗಳಿಗೆ ಉಪ ಚುನಾವಣೆ ನವೆಂಬರ್ 3ರಂದು ನಡೆಯಲಿದೆ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 6ರಂದು ಹೊರ ಬೀಳಲಿದೆ.

ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ ಬಳ್ಳಾರಿ ಲೋಕಸಭಾ ಉಪಚುನಾವಣೆ ಉಸ್ತುವಾರಿ ಡಿಕೆಶಿ ಹೆಗಲಿಗೆ

ಚುನಾವಣೆ ನಾಲ್ಕು ದಿನ ಬಾಕಿ ಇರುವಾಗ ಕಾಣಿಸಿಕೊಂಡ ಜನಾರ್ದನ ರೆಡ್ಡಿ

ಚುನಾವಣೆ ನಾಲ್ಕು ದಿನ ಬಾಕಿ ಇರುವಾಗ ಕಾಣಿಸಿಕೊಂಡ ಜನಾರ್ದನ ರೆಡ್ಡಿ

ಚುನಾವಣೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಗ ರಾಜ್ಯ ರಾಜಕೀಯದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ಕಾಣಿಸಿಕೊಂಡಿದ್ದಾರೆ, ಅಕ್ರಮ ಗಣಿಗಾರಿಕೆ ಸಂದರ್ಭದ ಒಳರಾಜಕೀಯಗಳನ್ನು ಮತ್ತೆ ನೆನಪಿಸಿದ್ದಾರೆ. ಇದು ಸಿದ್ದರಾಮಯ್ಯ ಹಾಗೂ ರಡ್ಡಿ ಬ್ರದರ್ಸ್ ಮಧ್ಯದ ಹಳೆಯ ದ್ವೇಷವನ್ನು ಮತ್ತೆ ಚಿಗುರಿಸಿದೆ. ಬಳ್ಳಾರಿ ಕದನ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕೆ-ಟಿಪ್ಪಣಿ ನಡೆಸಲೂ ಕಾರಣವಾಗಿದೆ.

English summary
Campaign in all five constituencies will come to end by October 31. For the next 48 hours political parties can make door to door campaign to appeal the voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X